ಬಿಜೆಪಿ ಸಂಸದರಿಗೆ ಚಕ್ರವರ್ತಿ 'ಚಡಿ'ಯೇಟು!
ಬಿಜೆಪಿ ಸಂಸದರಿಗೆ ಚಕ್ರವರ್ತಿ 'ಚಡಿ'ಯೇಟು!

ಮೋದಿ ಮತಭಿಕ್ಷೆಯ ಫಲಾನುಭವಿಗಳು ಧಿಮಾಕಿನಿಂದ ಸಂಭ್ರಮಿಸಬಾರದು: ಬಿಜೆಪಿ ಸಂಸದರಿಗೆ ಚಕ್ರವರ್ತಿ 'ಚಡಿ'ಯೇಟು!

ನಾಲ್ಕು ಲಕ್ಷ ಮತಗಳ ಅಂತರದಿಂದ ಗೆದ್ದವರೂ ನಲವತ್ತೇ ಸಾವಿರ ಮತಗಳ ಅಂತರದಿಂದ ಗೆದ್ದವರು ಎಲ್ಲರೂ ಮೋದಿ ಮತಭಿಕ್ಷೆಯ ಫಲಾನುಭವಿಗಳೇ ಇದನ್ನು
Published on
ಬೆಂಗಳೂರು: ನಾಲ್ಕು ಲಕ್ಷ ಮತಗಳ ಅಂತರದಿಂದ ಗೆದ್ದವರೂ ನಲವತ್ತೇ ಸಾವಿರ ಮತಗಳ ಅಂತರದಿಂದ ಗೆದ್ದವರು ಎಲ್ಲರೂ ಮೋದಿ ಮತಭಿಕ್ಷೆಯ ಫಲಾನುಭವಿಗಳೇ ಇದನ್ನು ಅರಿತುಕೊಂಡು ಸಂಸದರು ಕೆಲಸ ಮಾಡಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಬಿಜೆಪಿ ಸಂಸದರ ವಿರುದ್ಧ ಚಾಟಿ ಬೀಸಿದ್ದಾರೆ.
ಈ ಸಂಬಂಧ ತಮ್ಮ ಫೇಸ್ ಬುಕ್ ಪೋಸ್ಚ್ ನಲ್ಲಿ ಬರೆದುಕೊಂಡಿರುವ ಚಕ್ರವರ್ತಿ ಸೂಲಿಬೆಲೆ ಮೋದಿ ಒಬ್ಬರು ಇಲ್ಲದೇ ಹೋಗಿದ್ದರೆ ಕರ್ನಾಟಕದ ಬಹುತೇಕ ಸಂಸದರ ಪರಿಸ್ಥಿತಿ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್ ಮುನಿಯಪ್ಪನವರಿಗಿಂತಲೂ ಭಿನ್ನವಾಗಿರುತ್ತಿರಲಿಲ್ಲ. ಸೋಲು ಹೀನಾಯವಾಗಿರುತ್ತಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಗೆಲುವು ಮೋದಿಯ ಹೆಸರಿಗೆ ಮಾತ್ರವಲ್ಲ, ಅವರು ಮಾಡಿದ ಕೆಲಸಕ್ಕೆ, ತೆಗೆದುಕೊಂಡ ನಿರ್ಣಯಗಳಿಗೆ ಹಾಗೂ ರಾಷ್ಟ್ರಹಿತಕ್ಕೆ ಬದ್ಧವಾದ ಅವರ ಬದುಕಿನ ರೀತಿ ನೀತಿಗಳಿಂದಾಗಿ ಕರ್ನಾಟಕದ ಸಂಸದರಿಗೆ ಗೆಲುವು ಸಿಕ್ಕಿತು. ಹೀಗಾಗಿ ತಮ್ಮದಲ್ಲದ ಗೆಲುವಿಗೆ ಧಿಮಾಕಿನಿಂದ ಸಂಭ್ರಮಿಸುವ ಬದಲು ಮಾಡಬೇಕಾಗಿರುವ ಕೆಸಲವನ್ನು ಮಾಡಬೇಕು.
ತಮ್ಮ ಕ್ಷೇತ್ರದ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕು, ಮೈಗಳ್ಳತನ ಬಿಟ್ಟು ಕೆಲಸ ಮಾಡಬೇಕು,. ಇತ್ತೀಚೆಗೆ ಸದಾನಂದಗೌಡ ಜಾತಿ ಹೆಸರು ಹೇಳಿಕೊಂಡು ಸಾಂಪ್ರದಾಯಿಕ ರಾಜಕಾರಣಕ್ಕೆ ಮತ್ತೆ ಅಡಿ ಇಡುತ್ತಿದ್ದಾರೆ ಹಾಗೆಯೇ ಎಮರ್ಜೆನ್ಸಿ ಆಸ್ಪತ್ರೆಗಾಗಿ ಉತ್ತರ ಕನ್ನಡದ ಜನ ಹೋರಾಟ ನಡೆಸುತ್ದಿದ್ದಾರೆ, ಅದಕ್ಕಾಗಿ ಅನಂತ್ ಕುಮಾರ್ ಹೆಗಡೆ ಭೇಟಿ ಮಾಡಿ ಮನವಿ ಸಲ್ಲಿಸಿದರು, ಈ ವೇಳೆ ಪ್ರತಿಕ್ರಿಯಿಸಿರುವ ಅನಂತ್ ಕುಮಾರ್ ಹೆಗಡೆ ರಾಜ್ಯಕ್ಕೆ ಸೇರಿರುವ ಕೆಲಸ ತಾನು ಮಾಡುವುದಿಲ್ಲ ಎಂದು ಹೇಳಿದ್ದಾರೆ,
ಒಬ್ಬ ಸಂಸದರಾಗಿ ರಾಜ್ಯ ಸರ್ಕಾರವನ್ನು ಒಂದು ಕೆಲಸ ಮಾಡಿಕೊಡಿಸುವಂತೆ ಕೇಳಲಾಗದೇ ಎಂದು ಪ್ರಶ್ನಿಸಿದ್ದಾರೆ ವೋಟು ಹಾಕಿದ ಮತದಾರ ಪ್ರಭು ಇವರೆಲ್ಲವನ್ನು ಮೈ ಬಗ್ಗಿ ದುಡಿಯುವಂತೆ ಮಾಡುವ ಸಮಯ ಬಂದಿದೆ ಎಂದು ಪೋಸ್ಚ್ ನಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com