ಬಿಳಿಗುಂಡ್ಲು ಸಮೀಪ ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕದ ವಿರೋಧವಿಲ್ಲ: ಡಿಕೆಶಿ

ಕರ್ನಾಟಕದ ಗಡಿಯಲ್ಲಿರುವ ತಮಿಳುನಾಡಿನ ಬಿಳಿಗುಂಡ್ಲು ಬಳಿ ರಾಸಿಮನಲ್ ಸಮೀಪ ತಮಿಳುನಾಡು ಸರ್ಕಾರ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು...
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
ಬೆಂಗಳೂರು: ಕರ್ನಾಟಕದ ಗಡಿಯಲ್ಲಿರುವ ತಮಿಳುನಾಡಿನ ಬಿಳಿಗುಂಡ್ಲು ಬಳಿ ರಾಸಿಮನಲ್ ಸಮೀಪ ತಮಿಳುನಾಡು ಸರ್ಕಾರ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕದ ವಿರೋಧವಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇಂದು ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಸರ್ಕಾರ ಬಿಳಿಗುಂಡ್ಲು ಸೇರಿದಂತೆ ಎಲ್ಲಿ ಬೇಕಾದರೂ ಅಣೆಕಟ್ಟು ಕಟ್ಟಲಿ, ಅದಕ್ಕೆ ವಿರೋಧ ವ್ಯಕ್ತಪಡಿಸದೇ ಸಂಪೂರ್ಣ ಸಹಕಾರ ನೀಡುತ್ತೇವೆ. ಸಮುದ್ರಕ್ಕೆ ಹರಿದುಹೋಗುವ ನೀರನ್ನು ಅವರು ಬಳಸಿಕೊಳ್ಳುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಸಹಕಾರ ನೀಡಬೇಕು. ಈ ಯೋಜನೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಲಾಗಿದ್ದು, ಇದಕ್ಕೆ ತೊಂದರೆ ಮಾಡಬಾರದು ಎಂದು ಅವರು ಮನವಿ ಮಾಡಿದರು.
ಮಂಡ್ಯ ಜಿಲ್ಲೆಯ ಕಬ್ಬು, ಭತ್ತದ ಬೆಳೆಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನೀರು ಹರಿಸುವ ಅಧಿಕಾರ ಪ್ರಾಧಿಕಾರಕ್ಕೆ ಇದೆಯೇ ಹೊರತು ಜಲಸಂಪನ್ಮೂಲ ಇಲಾಖೆಗೆ ಇಲ್ಲ. ಇಲ್ಲಿಯವರೆಗೆ ಅಲ್ಲಿನ ರೈತರು ತಮಗೆ ಬೇಕಾದ ಫಸಲುಗಳನ್ನು ಬೆಳೆಯುತ್ತಿದ್ದರು. ಆದರೆ ಇನ್ನು ಮುಂದೆ ನೀರು ಹರಿಯುವಿಕೆ ಆಧರಿಸಿ ಬೆಳೆ ಬೆಳೆಯಬೇಕಾಗಿರುವುದರಿಂದ ಅವರಿಗೆ ಬೇಕಾದತೆ ಬೆಳೆ ಬೆಳೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಯಾವ ಸಮಯದಲ್ಲಿ ಯಾವ ಫಸಲನ್ನು ಬೆಳೆಯಬೇಕು ಎಂಬ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com