ದೇಶದ ಹೀರೋ ಅಭಿನಂದನ್ ವಾಪಸ್ ಆಗಿದ್ದು ತುಂಬಾ ಖುಷಿಯ ವಿಚಾರ: ಸಿಎಂ ಕುಮಾರಸ್ವಾಮಿ

ಪಾಕ್ ವಶದಲ್ಲಿದ್ದ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ತವರಿಗೆ ವಾಪಸ್ ಆಗಿದ್ದು, ಅಭಿನಂದನ್ ವಾಪಸಾತಿಗೆ ರಾಜ್ಯ ರಾಜಕೀಯ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಪಾಕ್ ವಶದಲ್ಲಿದ್ದ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ತವರಿಗೆ ವಾಪಸ್ ಆಗಿದ್ದು, ಅಭಿನಂದನ್ ವಾಪಸಾತಿಗೆ ರಾಜ್ಯ ರಾಜಕೀಯ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ವಿಚಾರಾಗಿ ಟ್ವೀಟ್ ಮಾಡಿರುವ ಸಿಎಂ ಕುಮಾರಸ್ವಾಮಿ, 'ನಮ್ಮ ಹೀರೋ ವಿಂಗ್​ ಕಮಾಂಡರ್​​​ ಅಭಿನಂದನ್​​ ವರ್ಧಮಾನ್​​ ಪಾಕಿಸ್ತಾನದಿಂದ ವಾಪಸ್ಸಾಗಿದ್ದು ಸಂತೋಷ ತಂದಿದೆ ಎಂದು ಟ್ವೀಟ್​​​ ಮಾಡಿದ್ದಾರೆ. 
'ಪೈಲಟ್​​ ಅಭಿನಂದನ್​ ಅವರ ಧೈರ್ಯ, ಕ್ಲಿಷ್ಟಕರ ಸಮಯದಲ್ಲೂ ಅವರ ಕಾರ್ಯಬದ್ಧತೆ ಪ್ರಶಂಸನೀಯ. ಭಾರತಾಂಬೆ ಪುತ್ರನ ಕೆಚ್ಚೆದೆಯ ಸಾಹಸಕ್ಕೆ ನಾವು ಹೆಮ್ಮೆ ಪಡುತ್ತೇವೆ. ಇಡೀ ರಾಷ್ಟ್ರವೇ ಅವರ ಶೌರ್ಯಕ್ಕೆ ಸಲಾಂ ಹೊಡೆಯುತ್ತದೆ. ತವರು ನಾಡಿಗೆ ಆಗಮಿಸಿದ ಅಭಿನಂದನ್​ರಿಗೆ ಸ್ವಾಗತ' ಎಂದು ಸಿಎಂ ಹೆಚ್​​.ಡಿ. ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.
ಅಂತೆಯೇ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ ಪರಮೇಶ್ವರ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರೂ ಕೂಡ ಟ್ವೀಟ್ ಮೂಲಕ ಅಭಿನಂದನ್ ಅವರನ್ನು ಸ್ವಾಗತಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com