ಜಾಹೀರಾತು ತೆರವುಗೊಳಿಸಿದ ಬಿಬಿಎಂಪಿ
ರಾಜ್ಯ
ಬೆಂಗಳೂರು ನಗರದಲ್ಲಿರುವ ರಾಜಕೀಯ ಜಾಹೀರಾತು ತೆರವುಗೊಳಿಸಿದ ಬಿಬಿಎಂಪಿ
ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟಗೊಂಡ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ನಿನ್ನೆಯಿಂದಲೇ ಆರಂಭಗೊಂಡಿದೆ...
ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟಗೊಂಡ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ನಿನ್ನೆಯಿಂದಲೇ ಆರಂಭಗೊಂಡಿದೆ.
ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರು ಭಾನುವಾರ ರಾತ್ರಿಯಿಂದಲೇ ಎಲ್ಲಾ ಸರ್ಕಾರಿ ಜಾಹೀರಾತುಗಳನ್ನು ತೆರವುಗೊಳಿಸಲು ಮುಂದಾಗಿದೆ.
ಚುನಾಯಿತ ಜನಪ್ರತಿನಿಧಿಗಳಿರುವ ಜಾಹೀರಾತನ್ನು ತೆರವುಗೊಳಿಸಲಾಗಿದೆ. ಬಸ್ ನಿಲ್ದಾಣ, ಸ್ಕೈವಾಕ್, ಹಾಗೂ ಸಾರ್ವಜನಿಕ ಶೌಚಾಲಯ ಹಾಗೂ ಕುಡಿಯುವ ನೀರನ ಬೂತ್ ಗಳ ಮೇಲಿರುವ ಎಲ್ಲಾ ಸರ್ಕಾರಿ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿ ಆಯುಕ್ತ ಎಲ್ಲಾ ಇಂಜಿನೀಯರ್ಸ್ ಮತ್ತು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ