ವೇದಿಕೆಯಲ್ಲಿಯೇ ಕುಸಿದುಬಿದ್ದು ಯಕ್ಷಗಾನ ಕಲಾವಿದ ಹುಡಗೋಡು ಚಂದ್ರಹಾಸ ಸಾವು

ಯಕ್ಷಗಾನ ರಂಗಸ್ಥಳದಲ್ಲಿಯೇ ವೇಷತೊಟ್ಟು ಅರ್ಥ ಹೇಳಿ ಕುಣಿಯುತ್ತಿರುವಾಗ ಕುಸಿದು‌ ಯಕ್ಷಗಾನ ಕಲಾವಿದ...
ಹುಡಗೋಡು ಚಂದ್ರಹಾಸ
ಹುಡಗೋಡು ಚಂದ್ರಹಾಸ
ಉಡುಪಿ : ಯಕ್ಷಗಾನ ರಂಗಸ್ಥಳದಲ್ಲಿಯೇ ವೇಷತೊಟ್ಟು ಅರ್ಥ ಹೇಳಿ ಕುಣಿಯುತ್ತಿರುವಾಗ ಕುಸಿದು‌ ಯಕ್ಷಗಾನ ಕಲಾವಿದ ಹುಡಗೋಡು ಚಂದ್ರಹಾಸ(52 ವ) ಮೃತಪಟ್ಟಿರುವ ಘಟನೆ ಕಳೆದ ರಾತ್ರಿ ಬೈಂದೂರಿನ ಜೋಗಿಬೆಟ್ಟು ಗ್ರಾಮದಲ್ಲಿ ನಡೆದಿದೆ. ಎಳಜಿತ್ ಯಕ್ಷಗಾನ ಕಾರ್ಯಕ್ರಮದಲ್ಲಿ ಈ ದುರ್ಘಟನೆ ನಡೆದಿದೆ.
ಭೀಷ್ಮ ವಿಜಯ ಪ್ರಸಂಗದಲ್ಲಿ ಸಾಲ್ವನ ಪಾತ್ರ ನಿರ್ವಹಿಸಿದ ಹುಡುಗೋಡು ಚಂದ್ರಹಾಸ ಅವರು ಭೀಷ್ಮ  ಎನ್ನುವ ಉದ್ಘಾರ ತೆಗೆಯುತ್ತಲೆ ವೇದಿಕೆಯಲ್ಲೇ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ಸಂಭಾಷಣೆ ಮುಗಿಸಿ ಕುಣಿತ ಆರಂಭಿಸುತ್ತಿದ್ದಂತೆ ಹೃದಯಾಘಾತ ಸಂಭವಿಸಿದ್ದು, ಇವರು ಉತ್ತರ ಕನ್ನಡದ ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ಕಲಾವಿದರಾಗಿದ್ದರು.
ರಾಜಕೀಯ ರಂಗಕ್ಕೆ ಕಾಲಿರಿಸಿದ್ದ ಚಂದ್ರಹಾಸ ಅವರು ಉತ್ತರಕನ್ನಡದ ಹಡಿನಬಾಳ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾಗಿದ್ದರು. ರಾಜಕೀಯಕ್ಕೆ ಸೇರಿದ ಬಳಿಕ ಸಕ್ರಿಯ ಯಕ್ಷಗಾನ ವೃತ್ತಿಯಿಂದ ದೂರವಾಗಿ ಹವ್ಯಾಸಿಯಾಗಿ ಕಲಾ ಸೇವೆ ಮುಂದುವರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com