ಬೆಂಗಳೂರು: ಎತ್ತರಿಸಿದ ಕಾರಿಡಾರ್ ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನೆ

ವಿವಾದಾತ್ಮಕ ಎತ್ತರಿಸಿದ ಕಾರಿಡಾರ್ ಯೋಜನೆ ವಿರೋಧಿಸಿ ಸುಮಾರು 2000 ಸ್ವಯಂ ಸೇವಕರು ಹಾಗೂ 60 ನಾಗರಿಕ ಗುಂಪಿನ ಸದಸ್ಯರುಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ಈ ಯೋಜನೆಯನ್ನು ರದ್ದುಪಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆ
ಪ್ರತಿಭಟನೆ

ಬೆಂಗಳೂರು:ವಿವಾದಾತ್ಮಕ ಎತ್ತರಿಸಿದ ಕಾರಿಡಾರ್ ಯೋಜನೆ ವಿರೋಧಿಸಿ ಸುಮಾರು 2000 ಸ್ವಯಂ ಸೇವಕರು ಹಾಗೂ 60 ನಾಗರಿಕ ಗುಂಪಿನ ಸದಸ್ಯರುಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ಈ ಯೋಜನೆಯನ್ನು ರದ್ದುಪಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕಬ್ಬನ್ ಪಾರ್ಕ್, ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ, ಬೆಂಗಳೂರು ಅಪಾರ್ಟ್ ಮೆಂಟ್ಸ್  ಫೆಡರೇಷನ್, ಬೆಂಗಳೂರು ಸಬರ್ನ್ ಬನ್ ರೈಲು ಬಳಕೆದಾರರು ಮತ್ತಿತರರು  ಪ್ರತಿಭಟನೆಯಲ್ಲಿ ಪಾಲ್ಗೊಂಡು, ಯೋಜನೆಗಾಗಿ ಕರೆದಿರುವ ಟೆಂಡರ್ ರದ್ದುಪಡಿಸಬೇಕೆಂದು ಒತ್ತಾಯಿಸಿದರು.

ಯೋಜನೆಗಾಗಿ ಉತ್ತರ- ದಕ್ಷಿಣ  ಭಾಗದಲ್ಲಿ ಮೂರು ಪ್ಯಾಕೇಜ್ ಗಳಲ್ಲಿ ಕೆಆರ್ ಡಿಸಿಎಲ್ ಟೆಂಡರ್ ಕರೆಯಲಾಗಿದೆ. ಭೂ ಸ್ವಾಧೀನ ಸೇರಿದಂತೆ ಈ  ಯೋಜನಾ ವೆಚ್ಚ 33 000 ಕೋಟಿ ರೂ. ಆಗಿದೆ. ಎತ್ತರಿಸಿದ ಕಾರಿಡಾರ್ ಯೋಜನೆಗಾಗಿ 3600 ಮರಗಳನ್ನು ಕಡಿಯಲಾಗುತ್ತಿದೆ. ಮರ ಕಡಿಯುವುದರಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಂಗಕರ್ಮಿ ಪ್ರಕಾಶ್ ಬೆಳವಾಡಿ  ಮಾತನಾಡಿ, ಸಾರ್ವಜನಿಕರ ಬೇಡಿಕೆಯನ್ನು ಸರ್ಕಾರ ಪರಿಗಣಿಸಬೇಕು, ಸಾರ್ವಜನಿಕರ ಸಲಹೆ ಪಡೆಯದೇ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿದರು.
ಶ್ರಿನಿವಾಸ್ ಅಲಾವಿಲ್ಲಿ ಮಾತನಾಡಿ, ಸರ್ಕಾರ ಕೂಡಲೇ ಟೆಂಡರ್ ರದ್ದುಪಡಿಸಬೇಕು, ಸಾರ್ವಜನಿಕರೊಂದಿಗೆ ಸಭೆ ನಡೆಸಬೇಕೆಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com