ಗಂಗಾ ಪೂಜೆ ವೇಳೆ ಕೊಡವರಲ್ಲಿ ಮದ್ಯ ಸೇವನೆಗೆ ಅಮ್ಮತಿ ಕೊಡವ ಸಮಾಜ ನಿಷೇಧ

ಕೊಡವ ಮದುವೆ ಸಮಯದಲ್ಲಿ ಗಂಗಾ ಪೂಜೆ ವೇಳೆ ಮದ್ಯ ಪೂರೈಕೆಗೆ ನಿಷೇಧ ಹೇರಲು ಅಮ್ಮತಿ ಕೊಡವ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಡಿಕೇರಿ: ಕೊಡವ ಮದುವೆ ಸಮಯದಲ್ಲಿ ಗಂಗಾ ಪೂಜೆ ವೇಳೆ ಮದ್ಯ ಪೂರೈಕೆಗೆ ನಿಷೇಧ ಹೇರಲು ಅಮ್ಮತಿ ಕೊಡವ ಸಮಾಜ ನಿರ್ಧರಿಸಿದೆ. ಈ ನಿಯಮವನ್ನು ಮುರಿದವರು 25 ಸಾವಿರ ರೂಪಾಯಿ ದಂಡ ಕಟ್ಟಬೇಕು. ಕೊಡವ ಸಮಾಜದ ವಾರ್ಷಿಕ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಬಹುತೇಕ ಮಂದಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಕೊಡವ ಮದುವೆಗಳಲ್ಲಿ ಗಂಗಾ ಪೂಜೆ ಸಂದರ್ಭದಲ್ಲಿ ಸಾಂಪ್ರದಾಯಿಕ ಕೊಡವ ನೃತ್ಯ ನೋಡುವುದೇ ಸೊಗಸು. ಇಂದಿನ ಕೊಡವ ಮದುವೆಗಳ ಶಾಸ್ತ್ರಗಳು ಸುಮಾರು 5 ಗಂಟೆ ನಡೆಯುತ್ತದೆ. ಮದುವೆಯಲ್ಲಿ ಗಂಗಾ ಪೂಜೆ ಮುಗಿದು ವಧು ಕಾವೇರಿ ಮಾತೆಗೆ ಅಕ್ಕಿ ಸಲ್ಲಿಸುವವರೆಗೆ ಮದ್ಯ ಪೂರೈಕೆಯನ್ನು ತಡೆಯಲಾಗುತ್ತದೆ. ಈ ನಿಯಮ ಮುರಿದವರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಅಮ್ಮತಿ ಕೊಡವ ಸಮಾಜದ ಅಧ್ಯಕ್ಷ ಎಂ ಬೊಸೆ ದೇವಯ್ಯ ತಿಳಿಸಿದರು.
ಈ ಹಿಂದೆ ಗಂಗಾ ಪೂಜೆ ಅವಧಿ ಮೀರಿ ನಡೆಸಿದ್ದಕ್ಕೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು. ಆದರೆ ಕೊಡವರು ಈ ದಂಡ ಕಟ್ಟಿ ನೃತ್ಯ ಮಾಡುವುದನ್ನು ಮುಂದುವರಿಸಿದ್ದರು. ಆದರೆ ಕೊಡವರ ಮೂಲ ಸಂಸ್ಕೃತಿಯನ್ನು ಉಳಿಸಲು ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com