ತಿನ್ನೋ ಅನ್ನ ಯಾರು ಬೆಳೆದಿದ್ದು ಗೊತ್ತಿಲ್ಲ, ಹಿಂದೂ-ಮುಸ್ಲಿಮರು ಹಾಲು-ನೀರಂತೆ ಬಾಳಲಿ: ವೀರೇಂದ್ರ ಹೆಗ್ಗಡೆ

ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು ನ್ಯಾಯಸಮ್ಮತವಾಗಿದೆ. ನಾವು ತಿನ್ನೋ ಅನ್ನ ಯಾರು ಬೆಳೆದಿದ್ದೆನ್ನುವುದು ನಮಗೆ ತಿಳಿದಿರಲ್ಲ, ಹಿಂದೂ-ಮುಸ್ಲಿಮರು ಹಾಲು-ನೀರಿನಂತೆ ಬೆರೆತು ಬಾಳಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ವೀರೇಂದ್ರ ಹೆಗ್ಗಡೆ
ವೀರೇಂದ್ರ ಹೆಗ್ಗಡೆ

ಮಸೀದಿ ಕಟ್ಟೋಕೆ ಹಿಂದೂಗಳೂ ನೆರವಾಗಲಿ: ಬಾಬಾ ರಾಮದೇವ್

ಶಿವಮೊಗ್ಗ/ನವದೆಹಲಿ: ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು ನ್ಯಾಯಸಮ್ಮತವಾಗಿದೆ. ನಾವು ತಿನ್ನೋ ಅನ್ನ ಯಾರು ಬೆಳೆದಿದ್ದೆನ್ನುವುದು ನಮಗೆ ತಿಳಿದಿರಲ್ಲ, ಹಿಂದೂ-ಮುಸ್ಲಿಮರು ಹಾಲು-ನೀರಿನಂತೆ ಬೆರೆತು ಬಾಳಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಡನೆ ಮಾತನ್ನಾಡಿದ ಹೆಗ್ಗಡೆ ಸುಪ್ರೀಂ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ತೀರ್ಪಿನಿಂದ ಜನಸಾಮಾನ್ಯರು ಉದ್ವಿಗ್ನರಾಗದೆ ಸಾಮರಸ್ಯದಿಂದ ಬದುಕಬೇಕು. ಹಿಂದೂ-ಮುಸ್ಲಿಮರು ಯಾವ ಭಿನ್ನಾಭಿಪ್ರಾಯವಿಲ್ಲದೆ ತಮ್ಮ ತಮ್ಮ ಕರ್ತವ್ಯಗಳನ್ನ ಮುಂದುವರಿಸಿಕೊಂಡು ಹೋಗಬೇಕು ಎಂದಿದ್ದಾರೆ.

ಮಸೀದಿ ಕಟ್ಟೋಕೆ ಹಿಂದೂಗಳೂ ನೆರವಾಗಲಿ: ಬಾಬಾ ರಾಮದೇವ್

ಯೋಗಗುರು, ಪತಂಜಲಿ ಸಂಸ್ಥೆಯ ಮುಖ್ಯಸ್ಥರಾದ ಬಾಬಾ ರಾಮದೇವ್ ಅಯೋಧ್ಯೆ ತೀರ್ಪನ್ನು ಸ್ವಾಗತಿಸಿದ್ದು ಇದು ಸ್ವಾಗತಾರ್ಹ ತೀರ್ಪು. ಹಿಂದೂಗಳು ಮಸೀದಿ ಕಟ್ಟಲುಲ್ ನೆರವಾಗಲಿ ಎಂದಿದ್ದಾರೆ.

"ಸುಪ್ರೀಂ ತೀರ್ಪು ಸ್ವಾಗತಾರ್ಹ, ಐದು ಎಕರೆ ಭೂಮಿಯನ್ನು ಮುಸ್ಲಿಮರಿಗೆ ನೀಡಿದ್ದು ಖುಷಿಯಾಗಿದೆ. ಹಿಂದೂ ಸೋದರರು ಮಸೀದಿ ನಿರ್ಮಾಣಕ್ಕೆ ಸಹಕರಿಸಲಿ" ರಾಮದೇವ್ ಹೇಳಿದ್ದಾರೆ.

ಶತಮಾನಗಳಿಂದ ಭಾರತೀಯರ ಎದೆಬಡಿತ ಹೆಚ್ಚಲು ಕಾರಣವಾಗಿದ್ದ ರಾಮಜನ್ಮಭೂಮಿ ವಿವಾದದ ಅಂತಿಮ ತೀರ್ಪು ಸುಪ್ರೀಮ್ ಕೋರ್ಟ್ ನಿಂದ ಶನಿವಾರ ಹೊರಬಂದಿದ್ದು ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿದೆ. ಅದೇ ವೇಳೆ ಮುಸ್ಲಿಂ ಅರ್ಜಿದಾರ ಸುನ್ನಿ ವಕ್ಫ್ ಬೋರ್ಡಿಗೆ ಐದು ಎಕರೆ ಪ್ರತ್ಯೇಕ ಸ್ಥಳ ನಿಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com