ಪುತ್ತೂರು ಜೋಡಿಕೊಲೆ ಪ್ರಕರಣ: 24 ಗಂಟೆಯೊಳಗೆ ಆರೋಪಿ ಅಂದರ್​ !

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ನಡೆದಿದ್ದ  ಜೋಡಿಕೊಲೆ ಆರೋಪಿಯನ್ನು ಕೇವಲ 24 ಗಂಟೆಗಳಲ್ಲಿ ಪೋಲೀಸರು ಬಂಧಿಸಿದಾರೆ. 
ಜೋಡಿಕೊಲೆ ಆರೋಪಿ ಕರೀಂ
ಜೋಡಿಕೊಲೆ ಆರೋಪಿ ಕರೀಂ
Updated on

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ನಡೆದಿದ್ದ ಜೋಡಿಕೊಲೆ ಆರೋಪಿಯನ್ನು ಕೇವಲ 24 ಗಂಟೆಗಳಲ್ಲಿ ಪೋಲೀಸರು ಬಂಧಿಸಿದಾರೆ.

ಪುತ್ತೂರಿನ ಕುರಿಯ ಎಂಬಲ್ಲಿ ಮಂಗಳವಾರ ನಡೆದಿದ್ದ ಕೊಗ್ಗು ಸಾಹೇಬ್ (65) ಮತ್ತು ಅವರ ಮೊಮ್ಮಗಳು 9ನೇ ತರಗತಿ ವಿದ್ಯಾರ್ಥಿನಿ ಸಮೀಹಾ ಬಾನು ಕೊಲೆ ಪರಕರಣ ಸಂಬಂಧ ಅದೇ ಪ್ರದೇಶದ ಕಟ್ಟತ್ತಾರು ನಿವಾಸಿ ಕರೀಂ ಖಾನ್ (29) ಎಂಬಾತನನ್ನು ಪೋಲೀಸರು ಬಂಧಿಸಿದ್ದರೆ.

ಆರೋಪಿಯು ಕೊಗ್ಗು ಸಾಹೇಬ್ ಮನೆಗೆ ಕಳ್ಳತನಕ್ಕಾಗಿ ನುಗ್ಗಿದಾಗ ಮನೆಯವರು ಎಚ್ಚರಗೊಂಡಿದ್ದಾರೆ. ಆ ವೇಳೆ ಮನೆಯಲ್ಲಿದ್ದ ಕತ್ತಿಯನ್ನು ಬಳಸಿ ಇಬ್ಬರನ್ನು ಹತ್ಯೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಸ್ಥಳದಲ್ಲಿದ್ದ ಖತೀಜಾಬಿ ಅವರ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾನೆ.

ಇನ್ನು ಆರೋಪಿ ಕರೀಂ ಕೊಗ್ಗು ಸಾಹೇಬ್ ಮನೆಯಿಂದ  30 ಗ್ರಾಂ ತೂಕದ ಚಿನ್ನಾಭರಣ ಹಾಗೂ 6 ಸಾವಿರ ನಗದನ್ನು ಕಳವು ಮಾಡಿದ್ದಾನೆ.ಸಧ್ಯ ಆರೋಪಿಯನ್ನು ಬಂಧಿಸಿರುಅ ಪೋಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಜೋಡಿಕೊಲೆ ಆರೋಪಿಯನ್ನು ಕೇವಲ ಒಂದೇ ದಿನದೊಳಗೆ ಬಂಧಿಸಿರುವ ಪೋಲೀಸರ ಕ್ರಮ ಸಾರ್ವಜನಿಕರಿಂದ ತೀವ್ರ ಪ್ರಶಂಸೆಗೆ ಪಾತ್ರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com