ಬೆಂಗಳೂರು: ಹುಟ್ಟುಹಬ್ಬದಂದು ಮಾದಕ ವಸ್ತು ಸೇವಿಸಿ ಇಬ್ಬರ ಸಾವು, ಮೆಡಿಕಲ್ ಸ್ಟೋರ್ ಮಾಲೀಕನ ಬಂಧನ

ಹುಟ್ಟು ಹಬ್ಬದ ಸಂದರ್ಭದಲ್ಲಿ ಮಾದಕ ವಸ್ತುಗಳ ಜೊತೆಗೆ ಮತ್ತು ಬರುವ ಮಾತ್ರೆ ಸೇವಿಸಿ ಇಬ್ಬರು ಯುವಕರು ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಮಾತ್ರೆ ನೀಡಿದ ಮೆಡಿಕಲ್ ಸ್ಟೋರ್‌....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಹುಟ್ಟು ಹಬ್ಬದ ಸಂದರ್ಭದಲ್ಲಿ ಮಾದಕ ವಸ್ತುಗಳ ಜೊತೆಗೆ ಮತ್ತು ಬರುವ ಮಾತ್ರೆ ಸೇವಿಸಿ ಇಬ್ಬರು ಯುವಕರು ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಮಾತ್ರೆ ನೀಡಿದ ಮೆಡಿಕಲ್ ಸ್ಟೋರ್‌ ಮಾಲೀಕನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.

ರಾಜಾಜಿನಗರದ ಮನ್‌ದೀಪ್ ಫಾರ್ಮಾ ಮೆಡಿಕಲ್ ಸ್ಟೋರ್‌ನ ಮಾಲೀಕ ಮನೀಷ್ ಕುಮಾರ್(36) ಬಂಧಿತ ಆರೋಪಿ.

ರಾಜಾಜಿನಗರದ 4ನೇ ಬ್ಲಾಕ್‌ನ ನಿವಾಸಿಯಾಗಿದ್ದ ಮನೀಷ್ ಕುಮಾರ್, ಮೋದಿ ಆಸ್ಪತ್ರೆಯ ಸಿಗ್ನಲ್ ಬಳಿ ಮನ್‌ದೀಪ್ ಫಾರ್ಮಾ ಎಂಬ ಔಷಧಿ ಅಂಗಡಿ ನಡೆಸುತ್ತಿದ್ದ. ಕಾನೂನುಬಾಹಿರವಾಗಿ ಟೈಡಾಲ್ ಮಾತ್ರೆಗಳನ್ನು ಖರೀದಿಸಿ ಮಾರಾಟ ಮಾಡಿರುವುದು ತನಿಖೆಯ ವೇಳೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟೈಡಾಲ್ ಮಾತ್ರೆಯನ್ನು ಪುಡಿಮಾಡಿಕೊಂಡು ಸಿರಂಜ್‌ಗೆ ಡಿಸ್ಟಲ್ ವಾಟರ್‌ಗೆ ಸೇರಿಸಿ ಸಿರಂಜ್‌ಗೆ ತುಂಬಿಸಿಕೊಂಡು ನಶೆ ಬರಲು ಚುಚ್ಚಿಕೊಂಡಿದ್ದ ಕೋದಂಡರಾಮಪುರದ ಅಭಿಲಾಷ್ ಹಾಗೂ ಗೋಪಿ ಮೃತಪಟ್ಟಿದ್ದಾರೆ.

‘ಅತಿಯಾದ ಪ್ರಮಾಣದಲ್ಲಿ ಮಾದಕ ವಸ್ತು ಸೇವಿಸಿದ್ದರಿಂದ ಇಬ್ಬರೂ ಮೃತಪಟ್ಟಿದ್ದಾರೆ. ಪ್ರಕರಣವನ್ನು ಮುಚ್ಚಿ ಹಾಕಲು ಯತ್ನ ನಡೆಯುತ್ತಿದೆ. ಉಪ ಮುಖ್ಯಮಂತ್ರಿ ಪ್ರತಿನಿಧಿ ಸುವ ಕ್ಷೇತ್ರದಲ್ಲೇ ಮಾದಕ ವಸ್ತು ಮಾರಾಟ ಅವ್ಯಾಹತವಾಗಿದೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಸ್ಥಳೀಯರ ಆರೋಪವನ್ನು ಪೊಲೀಸರು ‌ನಿರಾಕರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com