ಬಗೆ ಹರಿದ ವಿವಾದ: ನವವೃಂದಾವನ ಗಡ್ಡೆಯಲ್ಲಿ ಉತ್ತರಾಧಿ ಮಠಕ್ಕೆ ಮೊದಲ ಪೂಜೆಗೆ ಅವಕಾಶ!

ಸದಾ ಒಂದಿಲ್ಲೊಂದು ವಿವಾದದಲ್ಲಿರುವ ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಪೂಜೆಯ ಹಕ್ಕು ಮತ್ತು ಸ್ವತ್ತಿನ ವಾರಸತ್ವಕ್ಕೆ ಸಂಬಂಧಿಸಿದಂತೆ ಎರಡು ಮಠಗಳ ಮಧ್ಯೆ ಉಂಟಾಗಿರುವ ವಿವಾದಗಳ ಮಧ್ಯೆಯೇ ಪದ್ಮನಾಭ ತೀರ್ಥರ ಆರಾಧನೆ ನಡೆಯಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗಂಗಾವತಿ: ಸದಾ ಒಂದಿಲ್ಲೊಂದು ವಿವಾದದಲ್ಲಿರುವ ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಪೂಜೆಯ ಹಕ್ಕು ಮತ್ತು ಸ್ವತ್ತಿನ ವಾರಸತ್ವಕ್ಕೆ ಸಂಬಂಧಿಸಿದಂತೆ ಎರಡು ಮಠಗಳ ಮಧ್ಯೆ ಉಂಟಾಗಿರುವ ವಿವಾದಗಳ ಮಧ್ಯೆಯೇ ಪದ್ಮನಾಭ ತೀರ್ಥರ ಆರಾಧನೆ ನಡೆಯಲಿದೆ.
 
ಮಾಧ್ವ ಮತದ ಪ್ರಚಾರಕರಲ್ಲಿ ಅಗ್ರಸಾಲಿನಲ್ಲಿ ಗುರುತಿಸಿಕೊಂಡಿರುವ ಪದ್ಮನಾಭ ತೀರ್ಥರ ಆರಾಧನೆಯನ್ನು ಕಳೆದ ಹಲವು ದಶಕದಿಂದ ಭಕ್ತರು ಆಚರಿಸಿಕೊಂಡು ಬಂದಿದ್ದಾರೆ. ಧಾರ್ಮಿಕ ಆಚರಣೆಯನ್ನು ಉತ್ತರಾಧಿಮಠ ಹಾಗೂ ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಗಳ ಮಠ ನೆರವೇರಿಸಿಕೊಂಡು ಬಂದಿವೆ. 

ಆದರೆ ಕಳೆದ ಕೆಲ ವರ್ಷಗಳಿಂದೀಚೆ ನವವೃಂದಾವನದಲ್ಲಿನ ವಾರಸ್ವತ್ವ ಹಾಗೂ ಧಾರ್ಮಿಕ ನೇತೃತ್ವ ವಹಿಸಿಕೊಳ್ಳುವ ವಿಚಾರವಾಗಿ ಉಭಯ ಮಠಗಳ ಮಧ್ಯೆ ವಿವಾದ ಏರ್ಪಟ್ಟಿದೆ. ಈ ವಿವಾದ ಹೈಕೋರ್ಟ್ ಮೀರಿ, ಸುಪ್ರೀಕೋರ್ಟಿನ ಮೆಟ್ಟಿಲು ಹತ್ತಿದೆ. 

ಹೀಗಾಗಿ ಪ್ರತಿ ಬಾರಿಯೂ ಆರಾಧನಾ ಮಹೋತ್ಸವ ವಿವಾದ ಸ್ವರೂಪ ಪಡೆಯುತ್ತಿದೆ. ಕೇವಲ ಪದ್ಮನಾಭ ತೀರ್ಥರದ್ದು ಮಾತ್ರವಲ್ಲ, ಕವೀಂದ್ರ ತೀರ್ಥರು, ಸುಧೀಂದ್ರ ತೀರ್ಥರ ಆರಾಧನೆಯ ಸಂದರ್ಭದಲ್ಲೂ ಹಲವು ಬಾರಿ ವಿವಾದ ಏರ್ಪಟ್ಟಿದೆ. 

ಇದು ಭಕ್ತರ ಮಧ್ಯೆ ಬೇಸರಕ್ಕೆ ಕಾರಣವಾದರೆ, ಮಠಗಳ ಮಧ್ಯೆ ಪ್ರತಿಷ್ಠೆಯ ಪ್ರತೀಕವಾಗಿದೆ. ವರ್ಷಕ್ಕೆ ಮೂರರಿಂದ ನಾಲ್ಕು ಯತಿಗಳ ಆರಾಧನೆಯ ಸಂದರ್ಭದಲ್ಲಿ ವಿವಾದ ಏರ್ಪಡುತಿದೆ. ಸೂಕ್ತ ಬಂದೋಬಸ್ತ್ ನೀಡಲು ಪೊಲೀಸರು ಪರದಾಡುತ್ತಿದ್ದಾರೆ. 

ಹಿಂದು-ಮುಂದು: 
ಪದ್ಮನಾಭ ತೀರ್ಥರ ಪೂರ್ವರಾಧನೆ ಜನವರಿಯಲ್ಲಿ ಆರಂಭವಾಗಲಿದೆ. ಜನವರಿ 9 ಮತ್ತು 10ರಂದು ಆರಾಧನೆ ನಡೆಯಲಿದೆ. ಈ ಎರಡು ಧಾರ್ಮಿಕ ಆಚರಣೆಗಳನ್ನು ಉತ್ತರರಾಧಿ ಮಠದಿಂದಲೇ ಆರಂಭಿಸಬೇಕು ಎಂದು ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. 

ಬಳಿಕ ಉಳಿದ ಧಾರ್ಮಿಕ ಆಚರಣೆ ರಾಯರಮಠದ ಪಾಲಿಗೆ ಲಭಿಸಿದೆ. ಮಧ್ಯಾಹ್ನ ಎರಡು ಗಂಟೆಯ ಬಳಿಕ ನವವೃಂದಾವನಗಡ್ಡೆಯನ್ನು ಉತ್ತರಾಧಿ ಮಠದ ಅನುಯಾಯಿಗಳು ತೊರೆಯಬೇಕಿದ್ದು, ಮಧ್ಯಾಹ್ನ ಮೂರು ಗಂಟೆಯ ಬಳಿಕ ರಾಯರಮಠದ ಭಕ್ತರು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. 

ವರದಿ: ಎಂಜೆ ಶ್ರೀನಿವಾಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com