ಕೋಳಿಪಾಳ್ಯ ಮನೆಯೊಂದರಲ್ಲಿ ಜಿಂಕೆ ಮಾಂಸ ಸಂಗ್ರಹ: ಪರಿಶೀಲನೆ ವೇಳೆ ದಂಪತಿ ಪರಾರಿ!

ನಾಗರಾಜ ಎಂಬುವವರ ಮನೆಯಲ್ಲಿ ಜಿಂಕೆ ಮಾಂಸ ಶೇಖರಿಸಿಟ್ಟುಕೊಂಡಿದ್ದ ಘಟನೆ ಚಾಮರಾಜನಗರ ತಾಲೂಕಿನ ಕೋಳಿಪಾಲ್ಯದಲ್ಲಿ ನಡೆದಿದೆ‌. ಅರಣ್ಯಾಧಿಕಾರಿ ಕಾಂತರಾಜು ನೇತೃತ್ವದಲ್ಲಿ ದಾಳಿ ನಡೆಸಿ 4 ಕೆಜಿ ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದ್ದು, ವೃದ್ಧ ದಂಪತಿ ಪರಾರಿಯಾಗಿದ್ದಾರೆ.
ಕೋಳಿಪಾಳ್ಯ ಮನೆಯೊಂದರಲ್ಲಿ ಜಿಂಕೆ ಮಾಂಸ ಸಂಗ್ರಹ: ಪರಿಶೀಲನೆ ವೇಳೆ ದಂಪತಿ ಪರಾರಿ!
ಕೋಳಿಪಾಳ್ಯ ಮನೆಯೊಂದರಲ್ಲಿ ಜಿಂಕೆ ಮಾಂಸ ಸಂಗ್ರಹ: ಪರಿಶೀಲನೆ ವೇಳೆ ದಂಪತಿ ಪರಾರಿ!
Updated on

ಚಾಮರಾಜನಗರ: ಮನೆಯಲ್ಲಿ ಜಿಂಕೆ ಮಾಂಸ ಶೇಖರಿಸಿಟ್ಟುಕೊಂಡಿದ್ದ ಘಟನೆ ಚಾಮರಾಜನಗರ ತಾಲೂಕಿನ ಕೋಳಿಪಾಳ್ಯದಲ್ಲಿ ನಡೆದಿದೆ‌.

ಗ್ರಾಮದ ನಾಗರಾಜ(60) ಎಂಬುವವರ ಮನೆಯಲ್ಲಿ ಜಿಂಕೆ ಮಾಂಸ ಶೇಖರಿಸಿರುವ ಖಚಿತ ಮಾಹಿತಿ ಮೇರೆಗೆ ಬಿಆರ್​ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯ ಅರಣ್ಯಾಧಿಕಾರಿ ಕಾಂತರಾಜು ನೇತೃತ್ವದಲ್ಲಿ ದಾಳಿ ನಡೆಸಿ 4 ಕೆಜಿ ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ‌. ಈ ವೇಳೆ, ನಾಗರಾಜ ತನ್ನ ಪತ್ನಿಯೊಂದಿಗೆ ಪರಾರಿಯಾಗಿದ್ದಾನೆ.

ವನ್ಯ ಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಶಪಡಿಸಿಕೊಂಡ ಜಿಂಕೆ ಮಾಂಸವನ್ನು ಅರಣ್ಯ ಇಲಾಖೆ ಅಧಿಕಾರಿಗಳುಬೆಂಕಿಯಲ್ಲಿ ಸುಟ್ಟು ನಾಶಪಡಿಸಿದ್ದಾರೆ. ಪರಾರಿಯಾದ ದಂಪತಿ ಪತ್ತೆಗೆ ಬಲೆ ಬೀಸಲಾಗಿದೆ.

ವರದಿ:- ಗೂಳಿಪುರ ನಂದೀಶ ಎಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com