ಬಳ್ಳಾರಿ ವಿಭಜನೆ ವಿರೋಧಿಸುವವರು ಆಂಧ್ರದ ರೆಡ್ಡಿಗಳು: ಸಾಹಿತಿ ಕುಂ.ವೀ ಆಕ್ರೋಶ

ಅಭಿವೃದ್ಧಿ ನಿಮಿತ್ತ ಬಳ್ಳಾರಿ ಜಿಲ್ಲೆಯ ವಿಭಜನೆ ಉತ್ತಮ ನಿರ್ಣಯ. ಆದರೆ ಇದನ್ನು ಆಂಧ್ರದ ರೆಡ್ಡಿಗಳು ತಮ್ಮ ಸ್ವಾರ್ಥಕ್ಕಾಗಿ ವಿರೋಧಿಸುತ್ತಿದ್ದಾರೆ ಎಂದು ಸಾಹಿತಿ ಕುಂ ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಹೊಸಪೇಟೆ: ಅಭಿವೃದ್ಧಿ ನಿಮಿತ್ತ ಬಳ್ಳಾರಿ ಜಿಲ್ಲೆಯ ವಿಭಜನೆ ಉತ್ತಮ ನಿರ್ಣಯ. ಆದರೆ ಇದನ್ನು ಆಂಧ್ರದ ರೆಡ್ಡಿಗಳು ತಮ್ಮ ಸ್ವಾರ್ಥಕ್ಕಾಗಿ ವಿರೋಧಿಸುತ್ತಿದ್ದಾರೆ ಎಂದು ಸಾಹಿತಿ ಕುಂ ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಲೇಖಕ ಕುಂ.ವೀರಭದ್ರಪ್ಪ, 'ಬಳ್ಳಾರಿ ವಿಭಜನೆಯನ್ನು ವಿರೋಧಿಸುತ್ತಿರುವ ರೆಡ್ಡಿ ಸಹೋದರರು ಆಂಧ್ರದವರು. ವಿಭಜನೆಯಿಂದ ಜನಸಾಮಾನ್ಯರಿಗಾಗುವ ಪ್ರಯೋಜನವೇನೆಂದು ಅವರಿಗೆ ಗೊತ್ತಿಲ್ಲ. ಅಧಿಕಾರ ವಿಕೇಂದ್ರೀಕರಣಕ್ಕಾಗಿ ಆಂಧ್ರ ಮತ್ತು ತೆಲಂಗಾಣದಲ್ಲಿ ಚಿಕ್ಕ ಜಿಲ್ಲೆಗಳನ್ನು ಮಾಡಲಾಗುತ್ತಿದೆ. ಅಂತೆಯೇ ವಿಶಾಲವಾದ ಬಳ್ಳಾರಿಯನ್ನು ವಿಭಜಿಸುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು.

ಹೊಸ ಜಿಲ್ಲೆ ರಚನೆಗೆ ರೆಡ್ಡಿ ಸಹೋದರರು, ಆನಂದ್‌ ಸಿಂಗ್‌ ಮುಖ್ಯವಲ್ಲ. ಹೊಸ ಜಿಲ್ಲೆಗಾಗಿ ಜನ ದಶಕದಿಂದ ಹೋರಾಡುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಯಾರ ಒತ್ತಡಕ್ಕೂ ಮಣಿಯದೇ ಹೊಸ ಜಿಲ್ಲೆ ಘೋಷಿಸಬೇಕು. ವಿಜಯನಗರ ವ್ಯಾಪ್ತಿಗೆ ಬರಲಿರುವ ಪಶ್ಚಿಮ ತಾಲ್ಲೂಕುಗಳ ಪೈಕಿ ಕೆಲವು ಬಳ್ಳಾರಿಯಿಂದ 150 ಕಿ.ಮೀ.ಗೂ ಹೆಚ್ಚಿನ ದೂರದಲ್ಲಿವೆ. ಹೊಸಪೇಟೆ ಜಿಲ್ಲಾ ಕೇಂದ್ರವಾದರೆ ಅಂತರ ಕಡಿಮೆಯಾಗುತ್ತದೆ. ಹಂಪಿ, ತುಂಗಭದ್ರಾ ಜಲಾಶಯ, ವಿಮಾನ ನಿಲ್ದಾಣ ಸೌಲಭ್ಯವುಳ್ಳ ಹೊಸಪೇಟೆಗೆ ಜಿಲ್ಲಾ ಕೇಂದ್ರವಾಗಲು ಎಲ್ಲ ಅರ್ಹತೆಯಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com