ಕೊಪ್ಪಳ: ಮನೆ ಕುಸಿದು ಮೂರು ಮಂದಿ ದಾರುಣ ಸಾವು

ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮದಿಂದ ಮನೆಯ ಮೇಲ್ಚಾವಣಿಗೆ ಬಿದ್ದು ಅಕ್ಕ-ತಮ್ಮಂದಿರು ಸಾವನ್ನಪ್ಪಿದ ದುರ್ಘಟನೆ ಯಲಮಗೇರಿ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೊಪ್ಪಳ: ಕಳೆದ  ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮದಿಂದ ಮನೆಯ ಮೇಲ್ಚಾವಣಿಗೆ ಬಿದ್ದು ಅಕ್ಕ-ತಮ್ಮಂದಿರು ಸಾವನ್ನಪ್ಪಿದ ದುರ್ಘಟನೆ ಯಲಮಗೇರಿ ಗ್ರಾಮದಲ್ಲಿ ನಡೆದಿದೆ.

ಮೃತ ದುರ್ದೈವಿಗಳನ್ನು ಸುಜಾತ (23), ಅಮರೇಶ್ (18), ಗವಿಸಿದ್ದಪ್ಪ(15)  ಎಂದು ಗುರುತಿಸಲಾಗಿದೆ. ಕೆಲವು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಯಿಂದ ಮನೆ ನೆನೆದಿತ್ತು. ಮನೆ ಬೀಳುವುದಿಲ್ಲ ಎಂದು ಕುಟುಂಬ ಸದಸ್ಯರು ಮನೆಯಲ್ಲೆ ವಾಸವಾಗಿದ್ದರು. ಇಂದು ಮುಂಜಾನೆ 5 ಗಂಟೆ ವೇಳೆಗೆ ಮನೆಯ ಮೇಲ್ಚಾವಣಿಗೆ ಕುಸಿದು ಬಿದ್ದಿತ್ತು. ಆ ವೇಳೆ ಮನೆಯಲ್ಲಿ ಮಲಗಿದ್ದ ಅಕ್ಕ- ತಮ್ಮಂದಿರು ಸ್ಥಳದಲ್ಲೇ ಸಾವನ್ನಪ್ಪಿದ್ದರು

ಅದೃಷ್ಟವಶಾತ್ ತಂದೆ ಸೋಮಣ್ಣ ಕುದುರಿಮೋತಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಕೊಪ್ಪಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com