ಎಸ್‍ಎಸ್‍ಎಲ್‍ಸಿ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದು, ಮಾರ್ಚ್ 20ರಿಂದ ಏಪ್ರಿಲ್ 3ರವರೆಗೆ ಪರೀಕ್ಷೆ ನಡೆಯಲಿವೆ.
ತಾತ್ಕಾಲಿಕ ವೇಳಾಪಟ್ಟಿ
ಮಾರ್ಚ್ 20 ರಂದು ಪ್ರಥಮ ಭಾಷೆ ಕನ್ನಡ/ತೆಲುಗು/ಹಿಂದಿ/ಮರಾಠಿ/ತಮಿಳು/ಉರ್ದು/ಇಂಗ್ಲಿಷ್/ಸಂಸ್ಕೃತ
ಮಾರ್ಚ್ 21 ರಂದು ಕೋರ್ ವಿಷಯ(ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ) ತೆಗೆದುಕೊಂಡವರಿಗೆ ಪರೀಕ್ಷೆ
ಮಾರ್ಚ್ 23 ರಂದು ಸಮಾಜ ವಿಜ್ಞಾನ
ಮಾರ್ಚ್ 26 ರಂದು ವಿಜ್ಞಾನ
ಮಾರ್ಚ್ 30 ರಂದು ಗಣಿತ
ಏಪ್ರಿಲ್ 1 ರಂದು ದ್ವಿತೀಯ ಭಾಷೆ ಇಂಗ್ಲಿಷ್/ಕನ್ನಡ
ಏಪ್ರಿಲ್ 3 ರಂದು ತೃತೀಯ ಭಾಷೆ ಹಿಂದಿ/ಕನ್ನಡ/ಇಂಗ್ಲಿಷ್/ ಅರೇಬಿಕ್/ಪರ್ಷಿಯನ್/ಉರ್ದು/ಸಂಸ್ಕೃತ/ಕೊಂಕಣಿ/ತುಳು
ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿರುವ ಈ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ನವೆಂಬರ್ 19ರ ವರೆಗೆ ಅವಕಾಶ ನೀಡಲಾಗಿದೆ. ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಬೇಕಾದರೆ, ನೇರವಾಗಿ ಕರ್ನಾಟಕ ಶಿಕ್ಷಣಾ ಮಂಡಳಿ ಇಲಾಖೆಗೆ ಆಕ್ಷೇಪಣಾ ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಬಹುದಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ