
ಬೆಂಗಳೂರು: ಕಾವೇರಿ ನಿವಾಸವನ್ನು ಬಿಟ್ಟುಕೊಡಲು ವಿಪಕ್ಷ ನಾಯಕ ಸಿದ್ದರಾಮಯ್ಯ ಮನಸು ಮಾಡುತ್ತಿಲ್ಲ. ಕಾವೇರಿಯಲ್ಲಿಯೇ ವಾಸ್ತವ್ಯ ಮುಂದುವರೆಸಲು ಸಿದ್ದರಾಮಯ್ಯ ಬಿಗಿಪಟ್ಟು ಹಿಡಿದ ಬೆನ್ನಲ್ಲಿಯೇ ಸಿದ್ದರಾಮಯ್ಯ ಆಪ್ತ ಮಾಜಿ ಸಚಿವ ಕೆ.ಜೆ.ಜಾರ್ಜ್, ಕಾವೇರಿ ನಿವಾಸ ತೆರವುಗೊಳಿಸಲು ಒಂದು ತಿಂಗಳ ಕಾಲಾವಕಾಶ ನೀಡುವಂತೆ ಡಿಪಿಎಆರ್ ಇಲಾಖೆಗೆ ಪತ್ರ ಬರೆದಿದ್ದಾರೆ.
ಡಿಪಿಎಆರ್ ಅಧಿಕಾರಿಗಳು ಕಾವೇರಿಯಲ್ಲಿ ತೂಗುಹಾಕಿದ್ದ ಸಿದ್ದರಾಮಯ್ಯ ಅವರ ಹೆಸರಿನ ನಾಮಫಲಕವನ್ನು ತೆರವುಗೊಳಿಸಿದ್ದು, ಮೂರು ನಾಲ್ಕು ದಿನಗೊಳಗೆ ನಿವಾಸ ಖಾಲಿ ಮಾಡುವಂತೆ ಖಡಕ್ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೆ ಜಾರ್ಜ್ ಸರ್ಕಾರಕ್ಕೆ ಪತ್ರ ಬರೆದು ನಿವಾಸ ತೆರವುಗೊಳಿಸಲು ಕಾಲಾವಕಾಶ ಕೇಳಿದ್ದಾರೆ.
ಅಂದ ಹಾಗೆ ಹಿಂದೆ ಕಾವೇರಿ ನಿವಾಸ ಕೆ.ಜೆ.ಜಾರ್ಜ್ ಅವರಿಗೆ ನಿಗದಿಯಾಗಿತ್ತಾದರೂ ಜಾರ್ಜ್ ಬದಲಿಗೆ ಕಳೆದ ಆರು ವರ್ಷಗಳಿಂದ ಸಿದ್ದರಾಮಯ್ಯ ವಾಸ್ತವ್ಯ ಮಾಡುತ್ತಿದ್ದಾರೆ.
Advertisement