ಹಾವೇರಿ: ನದಿಯಲ್ಲಿ ಎತ್ತಿನ ಮೈ ತೊಳೆಯುವಾಗ ಕಾಲು ಜಾರಿ ಬಿದ್ದು ಓರ್ವ ಸಾವು, ಮತ್ತೋರ್ವನಿಗೆ ಶೋಧ

ಹಾವೇರಿ ಜಿಲ್ಲೆಯ ಹಂದಿಗನೂರು ಗ್ರಾಮದಲ್ಲಿ ಎತ್ತಿನ ಮೈ ತೊಳೆಯುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. 
ನದಿಯಲ್ಲಿ ಎತ್ತಿನ ಮೈ ತೊಳೆಯುವಾಗ ಕಾಲು ಜಾರಿ ಬಿದ್ದು ಓರ್ವ ಸಾವು, ಮತ್ತೋರ್ವನಿಗೆ ಶೋಧ
ನದಿಯಲ್ಲಿ ಎತ್ತಿನ ಮೈ ತೊಳೆಯುವಾಗ ಕಾಲು ಜಾರಿ ಬಿದ್ದು ಓರ್ವ ಸಾವು, ಮತ್ತೋರ್ವನಿಗೆ ಶೋಧ

ಹಾವೇರಿ:  ‌ಹಾವೇರಿ ಜಿಲ್ಲೆಯ ಹಂದಿಗನೂರು ಗ್ರಾಮದಲ್ಲಿ ಎತ್ತಿನ ಮೈ ತೊಳೆಯುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. 

ಗುರುವಾರ ಬೆಳಗ್ಗೆ ಪ್ರಶಾಂತ್ ಸೋಮಪ್ಪ ಕೊಂಚಿಗೇರಿ (18) ಎಂಬ ಯುವಕ ವರದಾ ನದಿಯಲ್ಲಿ ಕೊಚ್ಚಿ ಹೋಗಿದ್ದು, ಆತನ ರಕ್ಷಣೆಗೆ ಮುಂದಾದ ಪರಮೇಶಪ್ಪ ಕಮ್ಮಾರ (62) ಸಹ ನೀರಿನಲ್ಲಿ ಮುಳುಗಿರುವುದಾಗಿ ವರದಿಯಾಗಿದೆ. 
  
ಪ್ರಶಾಂತ್ ಎತ್ತುಗಳನ್ನು ತೊಳೆಯಲು ನದಿ ಬಳಿ ತೆರಳಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದು ಎತ್ತುಗಳನ್ನು ತೊಳೆಯುತ್ತಿದ್ದ ಪರಮೇಶಪ್ಪ ಆತನನ್ನು, ಹಿಡಿದುಕೊಳ್ಳಲು ಮುಂದಾಗಿ ಅವರೂ ಅಪಾಯಕ್ಕೆ ಸಿಲುಕಿದರು.
  
 ಅಗ್ನಿಶಾಮಕ ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ನಡೆಸಿ ಪರಮೇಶ್ವರಪ್ಪ ಅವರ ದೇಹವನ್ನು ಹೊರತೆಗೆದಿದ್ದಾರೆ. ಪ್ರಶಾಂತ್‌ಗಾಗಿ ಶೋಧ ಮುಂದುವರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com