ಮದ್ದೂರು: ಮನೆಯ ಮುಂದೆ ವ್ಯಕ್ತಿ ಶವ ಪತ್ತೆ;ಕೊಲೆ ಶಂಕೆ

ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಅನುಮಾಸ್ಪದ ರೀತಿಯಲ್ಲಿ ವ್ಯಕ್ತಿಯೋರ್ವನ ಶವ ಮನೆಯ ಮುಂದೆ ಪತ್ತೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಮಂಡ್ಯ: ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಅನುಮಾಸ್ಪದ ರೀತಿಯಲ್ಲಿ ವ್ಯಕ್ತಿಯೋರ್ವನ ಶವ ಮನೆಯ ಮುಂದೆ ಪತ್ತೆಯಾಗಿದೆ.

ಬೆಸಗರಹಳ್ಳಿಯ ಗೋರಿಪಾಳ್ಯ ಕಾಲೋನಿಯ ರಮೇಶ್(೫೦) ಅನುಮಾನವಾಗಿ ಮೃತಪಟ್ಟಿದ್ದು ಊರಿನ  ಗ್ರಾಮಸ್ಥರು ಮೃತನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ತನ್ನ ಎದುರು ಮನೆಯ ಮಹಿಳೆಯೊಂದಿಗೆ ಅಕ್ರಮ ಸಂಬಂಧದ ಹೊಂದಿದ್ದ ಇದೆ ಹಿನ್ನಲೆಯಲ್ಲಿ ರಮೇಶ್ನನ್ನು ಕೊಲೆಮಾಡಿರಬಹುದು ಎಂಬ ಶಂಕೆವ್ಯಕ್ತವಾಗಿದೆ. ಸ್ಥಳೀಯರ ಪ್ರಾಥಮಿಕ ಮಾಹಿತಿಯ ಮೇರೆಗೆ ಈತ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿರುವ ಮಹಿಳೆಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.  

ಮತ್ತೊಂದು ಮೂಲದ ಪ್ರಕಾರ ಮೃತ ರಮೇಶ್ ಲೇವಾದೇವಿ ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದ್ದು ಇದು ಹಣಕಾಸು ವಿಚಾರವಾಗಿ ನಡೆದಿರೋ ಕೊಲೆಯೋ ಅಥವಾ ಸಹಜ ಸಾವೋ ಎಂಬ ಬಗ್ಗೆ ಪೊಲೀಸರು ಪತ್ತೆ ಹಚ್ಚಬೆಕಿದೆ. 

ಈ ಸಂಬಂಧ ರಮೇಶ್ ಕುಟುಂಬದವರು ಬೆಸಗರಹಳ್ಳಿ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಕೊಲೆ ಸುದ್ದಿ ತಿಳಿದು ಸ್ಥಳಕ್ಕೆ ಶ್ವಾನದಳದೊಂದಿಗೆ ಆಗಮಿಸಿದ ಡಿವೈಎಸ್ಪಿ ಶೈಲೇಂದ್ರಕುಮಾರ್, ಸಿಪಿಐ ಮಹೇಶ್, ಪಿಎಸ್ಐ ಆನಂದ್ಕುಮಾರ್ ನೇತೃತ್ವದ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.ಈ ಸಂಬಂಧ  ಪ್ರಕರಣ ದಾಖಲಿಸಿಕೊಂಡಿರುವ ಬೆಸಗರಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವರದಿ;ನಾಗಯ್ಯ,ಮಂಡ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com