ಬೆಂಗಳೂರು: ತುರ್ತು ಸಹಾಯವಾಣಿ ಇನ್ಮೇಲಿಂದ 100 ಅಲ್ಲ 112!
ಬೆಂಗಳೂರು: ಬೆಂಗಳೂರಿನ ಮೊಟ್ಟ ಮೊದಲ ಹೆಲ್ಫ್ ಲೈನ್ ನಂಬರ್ 100 ಶೀಘ್ರವೇ ಬದಲಾಗಲಿದೆ. ಆ್ಯಂಬುಲೆನ್ಸ್, ಪೊಲೀಸ್ ಸಹಾಯವಾಣಿ ಮತ್ತು ಅಗ್ನಿಶಾಮಕ ದಳ ಸೇರಿ ಇತರ ತುರ್ತು ಸೇವೆಗಳು ಮುಂದಿನ ದಿನಗಳಲ್ಲಿ ಒಂದೇ ದೂರವಾಣಿ ಸಂಖ್ಯೆ ಮೂಲಕ ದೊರೆಯಲಿವೆ.
ಅಕ್ಟೋಬರ್ 30 ರಂದು ಸಂಜೆ 4 ಗಂಟೆಗೆ ಸಿಎಂ ಯಡಿಯೂರಪ್ಪ ಈ ಹೊಸ ಯೋಜನೆಗೆ ಚಾಲನೆ ನೀಡಲಿದ್ದಾರೆ.
ನಮ್ಮ100 ಮೊದಲಿಗೆ 2017 ಆರಂಭಗೊಂಡಿತು. ಈ ಸಂಖ್ಯೆ ಇನ್ನು ಮುಂದೆ ಬದಲಾಗಲಿದ್ದು, ಇಡೀ ರಾಜ್ಯದಲ್ಲಿ 112 ಹೊಸ ನಂಬರ್ ಚಾಲನೆಗೆ ಬರಲಿದೆ. ಆ ಯೋಜನೆ ಕಳೆದ 2 ವರ್ಷಗಳಿಂದ ಪೆಂಡಿಂಗ್ ಉಳಿದುಕೊಂಡಿತ್ತು. ಈಗ ಎಲ್ಲಾ ಜಿಲ್ಲೆಗಳಲ್ಲಿ ಚಾಲನೆಗೆ ಬರಲಿದೆ. ಬೆಂಗಳೂರಿನಲ್ಲಿ ಯಶಸ್ವಿಯಾದರೇ ಮೈಸೂರು ಮತ್ತು ಮಂಗಳೂರು ಜಿಲ್ಲೆಗೂ ವಿಸ್ತರಣೆಯಾಗಲಿದೆ.
ನಮ್ಮ100 ಕೇವಲ ನಗರಗಳನ್ನು ಮಾತ್ರ ಫೋಕಸ್ ಮಾಡುತ್ತಿತ್ತು, ಬೇರೆ ಜಿಲ್ಲೆಗಳಿಂದ ಕರೆಗಳು ಬಂದಾಗ ನಾವು ಸಂಬಂಧ ಪಟ್ಟ ವ್ಯಕ್ತಿಗಳಿಗೆ ಸಂಪರ್ಕಿಸುತ್ತಿದ್ದೆವು. ಈಗ ಸದ್ಯ ಪ್ರಮುಖ ಕೇಂದ್ರ ಬೆಂಗಳೂರಿನಲ್ಲಿದ್ದು ಕರೆಗಳು ಆಯಾಯಾ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ಇಲ್ಲಾಕ್ಕಿಯಾ ಕರುಣಾಗರನ್ ಹೇಳಿದ್ದಾರೆ.
ಈ ಮೊದಲು ಕರೆ ವರ್ಗಾವಣೆ ಮಾಡಲು ಸುಮಾರು 8 ನಿಮಿಷ ಬೇಕಾಗಿತ್ತು, ಇನ್ನು ಮುಂದೆ ಕೇವಲ 5 ನಿಮಿಷಕ್ಕೆ ಕರೆ ಟ್ರಾನ್ಸ್ ಫರ್ ಮಾಡಬಹುದಾಗಿದೆ,
ಹೀಗಾಗಿ ಇನ್ಮುಂದೆ 100,101,102 ಹಾಗೂ 108 ಹಾಗೂ 118 ಸಂಖ್ಯೆ ಎಲ್ಲವೂ 112ಗೆ ರೀಡೈರೆಕ್ಟ್ ಆಗಲಿದೆ. ಈಗಾಗಲೇ ಈ ಯೋಜನೆಗೆ ದೆಹಲಿಯಲ್ಲಿ ಸೆಪ್ಟಂಬರ್ ತಿಂಗಳಿನಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ಅಕ್ಟೋಬರ್ 26 ರಂದು ಚಾಲನೆ ದೊರೆತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ