ಪ್ರಸಿದ್ದ ಭೌತ ವಿಜ್ಞಾನಿ ಬಿ ವಿ ಶ್ರೀಕಂಠನ್ ನಿಧನ

ಖ್ಯಾತ ವಿಜ್ಞಾನಿ ಪ್ರೊಫೆಸರ್ ಬಿ ವಿ ಶ್ರೀಕಂಠನ್ ಮಂಗಳವಾರ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಬಿ ವಿ ಶ್ರೀಕಂಠನ್
ಬಿ ವಿ ಶ್ರೀಕಂಠನ್

ಬೆಂಗಳೂರು: ಖ್ಯಾತ ವಿಜ್ಞಾನಿ ಪ್ರೊಫೆಸರ್ ಬಿ ವಿ ಶ್ರೀಕಂಠನ್ ಮಂಗಳವಾರ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಭೌತಶಾಸ್ತ್ರದ ವಲಯದಲ್ಲಿ ಶ್ರೀಕಂಠನ್ ಅವರ ಕೊಡುಗೆಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಕಾಸ್ಮಿಕ್ ವಲಯದಲ್ಲಿನ ಅವರ ಸಂಶೋಧನೆ ಮತ್ತು ಅಧ್ಯಯನಕ್ಕೆ ಅವರು ಜನಪ್ರಿಯರಾಗಿದ್ದಾರೆ. ವಾತಾವರಣದಲ್ಲಿ ನ್ಯೂಟ್ರಿನೋ ಕಿರಣಗಳನ್ನು ಪತ್ತೆ ಮಾಡಿದ ವಿಜ್ಞಾನಿಗಳ ಗುಂಪಿನಲ್ಲಿ ಶ್ರೀಕಂಠನ್ ಕೂಡ ಒಬ್ಬರು.

ಅವರು ಇಬ್ಬರು ಪುತ್ರರು, ಬಂಧು ಬಳಗ ಮತ್ತು ಅಪಾರ ವಿದ್ಯಾರ್ಥಿಗಳನ್ನು ಅಗಲಿದ್ದಾರೆ.

ಟಾಟಾ ಇನ್ಸ್ಟಿಟ್ಯೂಟ್ ಆಫ್ ಪಂಡಮೆಂತಲ್ ರಿಸರ್ಚಸ್ ನಿರ್ದೇಶಕರಾಗಿದ್ದ ಶ್ರೀಕಂಠನ್ ಮೂಲ ವಿಜ್ಞಾನದಲ್ಲಿ ಸಾಕಷ್ಟು ಉನ್ನತ ಸಂಶೋಧನೆ ನಡೆಸಿದ್ದರು. 1948ರಲ್ಲಿ ವಿದ್ಯಾರ್ಥಿಯಾಗಿ ಈ ಸಂಸ್ಥೆಗೆ ಸೇರಿದ್ದ ಅವರು 1987ರಲ್ಲಿ ನಿರ್ದೇಶಕರಾಗಿ ನಿವೃತ್ತರಾಗಿದ್ದರು.

1947ರಲ್ಲಿ ಬೆಂಗಲೂರು ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಪಡೆದ ಶ್ರೀಕಂಠನ್ ಅವರಿಗೆ ಪದ್ಮಭೂಷಣ ಮಾತ್ರವಲ್ಲದೆ ಹೋಮಿ ಬಾಬಾ ಪದಕ, ಸಿವಿ ರಾಮನ್ ಪ್ರಶಸ್ತಿ, ಆರ್.ಡಿ.ಬಿರ್ಲಾ ಸ್ಮಾರಕ ಪುರಸ್ಕಾರದಂತಹಾ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com