31 ಶಿಕ್ಷಕರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

2019-20ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಾಗಿ ಸರ್ಕಾರಿ ಪ್ರಾಥಮಿಕ ಶಾಲಾ ವಿಭಾಗದಿಂದ 20, ಪ್ರೌಢಶಾಲಾ ವಿಭಾಗದಿಂದ 11 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: 2019-20ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಾಗಿ ಸರ್ಕಾರಿ ಪ್ರಾಥಮಿಕ ಶಾಲಾ ವಿಭಾಗದಿಂದ 20, ಪ್ರೌಢಶಾಲಾ ವಿಭಾಗದಿಂದ 11 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಆಯ್ಕೆಯಾದವರಿಗೆ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ಪ್ರಾಥಮಿಕ ಶಾಲಾ ವಿಭಾಗ: ಆಶಾ ಹೆಗಡೆ, ಮೇಳಕುಂದ, ಕಲಬುರ್ಗಿ ಜಿಲ್ಲೆ, ನಾಗಣ್ಣ, ಹೆಬ್ಬಾಳು (ಕುಂಬಾರಕೊಪ್ಪಲು), ಮೈಸೂರು ಜಿಲ್ಲೆ, ಸಾವಿತ್ರಮ್ಮ, ಸಂಜೀವಿನಿ ನಗರ, ಬೆಂಗಳೂರು ಉತ್ತರ ಜಿಲ್ಲೆ, ಸಂಶಿಯಾ, ಹೂಡ್ಲಮನೆ, ಸಿದ್ದಾಪುರ, ಶಿರಸಿ ಶೈಕ್ಷಣಿಕ ಜಿಲ್ಲೆ, ಡಿ.ಪದ್ಮ, ಆಲೆಟ್ಟಿ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ, ಸೋಮಲಿಂಗಪ್ಪ, ಬೆಳವಡಿ, ಬೈಲಹೊಂಗಲ, ಬೆಳಗಾವಿ ಜಿಲ್ಲೆ, ಲಿಂಗರಾಜು, ಬಿ.ಗೌಡಗೆರೆ, ಮಂಡ್ಯ ಜಿಲ್ಲೆ, ಎಲ್‌.ಎನ್.ಉಮಾದೇವಿ, ತಿಂಡ್ಲು, ಆನೇಕಲ್‌ ತಾಲ್ಲೂಕು ಬೆಂಗಳೂರು ದಕ್ಷಿಣ ಜಿಲ್ಲೆ, ಎಸ್‌.ರತ್ನಕುಮಾರಿ, ಸಮಟಗಾರು, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ನಿರ್ಮಲ ರಾಮಚಂದ್ರ ಪತ್ತಾರ, ಶಿರಗುಪ್ಪಿ (ಎಲ್‌.ಟಿ.) ಬಾಗಲಕೋಟೆ ಜಿಲ್ಲೆ, ಬಿ.ಉಷಾ, ಬಿ.ಕ್ಯಾಂಪ್‌ ನಂ.2, ದಾವಣಗೆರೆ ಜಿಲ್ಲೆ, ಮಲ್ಲಿಕಾರ್ಜುನ ಶಿವಲಿಂಗಪ್ಪ ಭೂಸಗೊಂಡ, ತಿಕೋಟ, ವಿಜಯಪುರ ಜಿಲ್ಲೆ, ಕೆ.ಎಚ್.ಗೀತಾ, ಯಲಗುಡಿಗೆ, ಮಾಚಗೊಂಡನಹಳ್ಳಿ ಕ್ಲಸ್ಟರ್‌, ಚಿಕ್ಕಮಗಳೂರು ಜಿಲ್ಲೆ, ನಾರಾಯಣ, ಸಿದ್ದಯ್ಯನಪುರ, ಚಾಮರಾಜನಗರ ಜಿಲ್ಲೆ, ಉಮೇಶ, ಬಜಗೋಳಿ, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ, ಮಲ್ಲೇಶಪ್ಪ ಅಡ್ಡೇದಾರ, ವಡ್ಡರಹಟ್ಟಿಕ್ಯಾಂಪ್‌, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ, ಜಯಸಿಂಗ್ ಅಂಬುಲಾಲ ಠಾಕೂರ್‌, ಎಕಲಾರ, ಔರಾದ ತಾಲ್ಲೂಕು, ಬೀದರ್‌ ಜಿಲ್ಲೆ, ಕೆ.ರಮೇಶ್‌, ಚಿಲ್ಲಪ್ಪನಹಳ್ಳಿ, ಕೋಲಾರ ಜಿಲ್ಲೆ, ಭೀಮಯ್ಯ, ಎಂ.ಟಿ.ಪಲ್ಲಿ, ಯಾದಗಿರಿ ಜಿಲ್ಲೆ, ರಾಜನಗೌಡ ಪತ್ತಾರ, ಕೆಸರಟ್ಟಿ, ಲಿಂಗಸೂಗೂರು ತಾಲ್ಲೂಕು ರಾಯಚೂರು ಜಿಲ್ಲೆ.

ಪ್ರೌಢಶಾಲಾ ವಿಭಾಗ: ದಾನಮ್ಮ ಚ.ಝಳಕಿ,ವಂಟಮೂರಿ ಕಾಲೋನಿ, ಬೆಳಗಾವಿ ಜಿಲ್ಲೆ, ಎನ್‌.ಕೃಷ್ಣಮೂರ್ತಿ, ಕ್ಯಾಲಕೊಂಡ, ಶಿಗ್ಗಾವಿ ತಾಲ್ಲೂಕು, ಹಾವೇರಿ ಜಿಲ್ಲೆ, ಶೇಕ್‌ ಆದಂ ಸಾಹೇಬ್‌, ಪಾವಳಪಡೂರು ವಗ್ಗ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಹನುಮಪ್ಪ ಗೋವಿಂದಪ್ಪ ಹುದ್ದಾರ, ಕಟಗೇರಿ, ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ, ಬಿ.ಆರ್‌.ರಾಜಶೇಖರ್‌, ಜಂಗಮಮಠ, ಶಿವನಗರ, ಬೆಂಗಳೂರು ಉತ್ತರ ಜಿಲ್ಲೆ, ಮಂಜಪ್ಪ ವಿ.ಅಡಿವೇರ, ಸದಾಶಿವನಗರ, ಹಳೆ ಹುಬ್ಬಳ್ಳಿ, ಧಾರವಾಡ ಜಿಲ್ಲೆ, ಕವಿತಾ ದಿಗ್ಗಾವಿ, ಗಂಗಾವತಿ, ಕೊಪ್ಪಳ ಜಿಲ್ಲೆ, ಆರ್‌.ನಾರಾಯಣ ಸ್ವಾಮಿ, ಬಾಶೆಟ್ಟಿಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಶರಣಪ್ಪ ಕರಿಶೆಟ್ಟಿ, ಕೊಳಬಾಳ, ಮಸ್ಕಿ ತಾಲ್ಲೂಕು, ರಾಯಚೂರು ಜಿಲ್ಲೆ, ಎಚ್‌.ಆರ್‌.ರೇಣುಕಯ್ಯ, ಗೂಳೆಹರವಿ, ತುಮಕೂರು ಜಿಲ್ಲೆ, ಚನ್ನೇಗೌಡ, ಮಾಗಡಿ ಪಟ್ಟಣ, ರಾಮನಗರ ಜಿಲ್ಲೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com