ದೊಡ್ಡಬಳ್ಳಾಪುರದಲ್ಲಿ ಕಲಿಕಾ ಡ್ರೈವಿಂಗ್ ಲೈಸನ್ಸ್ ,ಇನ್ಸೂರೆನ್ಸ್ ,ಹೆಲ್ಮೆಟ್ ಮೇಳ!

ನಾಗರಿಕರಿಗಾಗಿ ಕಾನೂನು ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಾಳೆ  ಕಲಿಕಾ ಡ್ರೈವಿಂಗ್ ಲೈಸೆನ್ಸ್ , ಇನ್ಸೂರೆನ್ಸ್ ಹೈಲೆಟ್ ಮೇಳವನ್ನು ಆಯೋಜಿಸಲಾಗಿದೆ.
ಪೋಸ್ಟರ್
ಪೋಸ್ಟರ್
Updated on

ದೊಡ್ಡಬಳ್ಳಾಪುರ:ನಾಗರಿಕರಿಗಾಗಿ ಕಾನೂನು ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಾಳೆ  ಕಲಿಕಾ ಡ್ರೈವಿಂಗ್ ಲೈಸೆನ್ಸ್ , ಇನ್ಸೂರೆನ್ಸ್ ಹೈಲೆಟ್ ಮೇಳವನ್ನು ಆಯೋಜಿಸಲಾಗಿದೆ.

ದಕ್ಷ ಐಪಿಎಸ್ ಅಧಿಕಾರಿ ರವಿ. ಡಿ. ಚೆನ್ನಣ್ಣನವರ್ ಈ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ನಾಗರಿಕರಿಗೆ ಬಂದೂಕು ತರಬೇತಿಗೆ ನೋಂದಣಿ ಹಾಗೂ ಪೊಲೀಸರೊಂದಿಗೆ ಉಚಿತ ಟ್ರಾಫಿಕ್ ವಾರ್ಡನ್ ಕೆಲಸ ಮಾಡುವ ನವ ಯುವಕರಿಗೆ ನೋಂದಣಿಗೆ ಅವಕಾಶವಿದೆ. 

ಕಲಿಕಾ ಡ್ರೈವಿಂಗ್ ಲೈಸೆನ್ಸ್  ಮಾಡಿಸುವವರು ವಿಳಾಸದ ಪುರಾವೆಗಾಗಿ ಚುನಾವಣಾ ಆಯೋಗದ ಗುರುತಿನ ಚೀಟಿ, ಪಾಸ್ ಪೋರ್ಟ್,  ಜೀವ ವಿಮಾ ಪಾಲಿಸಿ, ವಿದ್ಯುತ್ ಬಿಲ್, ಕುಟುಂಬ ಪಡಿತರ ಚೀಟಿ, ನೀರಿನ ಬಿಲ್, ಟೆಲಿಪೋನ್ ಬಿಲ್, ವೇತನದ ಚೀಟಿಯನ್ನು ಹಾಜರುಪಡಿಸಬೇಕಾಗುತ್ತದೆ. 

ಜನ್ಮ ದಿನಾಂಕದ ದಾಖಲಾತಿಗಾಗಿ ಜನ್ಮ ದಿನಾಂಕದ ದೃಢೀಕರಣ ಪತ್ರ, ಶಾಲೆಯ ಪ್ರಮಾಣ ಪತ್ರ, ಪಾಸ್ ಪೋರ್ಟ್,  ಜೀವ ವಿಮಾ ಪಾಲಿಸಿ, ಅಭ್ಯರ್ಥಿಯು ಅನಕ್ಷರಸ್ಥನಾಗಿದ್ದರೆ ನ್ಯಾಯಾಲಯದಿಂದ ದೃಢೀಕರಣ ಪ್ರಮಾಣ ಪತ್ರ ( ಅಫಿಡವಿಟ್ ) ಹಾಗೂ ರಾಷ್ಟ್ರೀಯತೆಗಾಗಿ ಜನ್ಮ ದಿನಾಂಕದ ದೃಢೀಕರಣ ಪ್ರಮಾಣ ಪತ್ರ, ಶಾಲೆಯ ಪ್ರಮಾಣ ಪತ್ರ,  ಅನಿವಾಸಿ ಭಾರತೀಯರು ಚಾಲ್ತಿಯಲ್ಲಿರುವ ಪಾಸ್ ಪೋರ್ಟ್ ನೀಡಬೇಕಾಗುತ್ತದೆ.

ಕಲಿಕಾ ಚಾಲನಾ ಪರವಾನಿಗೆಗೆ ಕೇವಲ 200 ರೂ. ಭರಿಸಬೇಕಾಗುತ್ತದೆ. ಈ ಅವಕಾಶವನ್ನು ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕಾಗಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com