ಚಿಕ್ಕಮಗಳೂರು: ಭಗ್ನಪ್ರೇಮಿಯಿಂದ ಚಾಕು ಇರಿತಕ್ಕೊಳಗಾಗಿದ್ದ ಯುವತಿ ಸಾವು

ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಭಗ್ನಪ್ರೇಮಿಯೊಬ್ಬ ಯುವತಿಗೆ ಚಾಕಿ ಇರಿದಿದ್ದು ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರದಲ್ಲಿ ನಡೆದಿದೆ. 
ಚಿಕ್ಕಮಗಳೂರು: ಭಗ್ನಪ್ರೇಮಿಯಿಂದ ಚಾಕು ಇರಿತಕ್ಕೊಳಗಾಗಿದ್ದ ಯುವತಿ ಸಾವು
ಚಿಕ್ಕಮಗಳೂರು: ಭಗ್ನಪ್ರೇಮಿಯಿಂದ ಚಾಕು ಇರಿತಕ್ಕೊಳಗಾಗಿದ್ದ ಯುವತಿ ಸಾವು
Updated on: 

ಚಿಕ್ಕಮಗಳೂರು: ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಭಗ್ನಪ್ರೇಮಿಯೊಬ್ಬ ಯುವತಿಗೆ ಚಾಕಿ ಇರಿದಿದ್ದು ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರದಲ್ಲಿ ನಡೆದಿದೆ.

ಮೂರು ದಿನಗಳ ಹಿಂದೆ ಎನ್.ಆರ್.ಪುರ ತಾಲೂಕಿನ ಬಸಾಪುರ ಗ್ರಾಮದ ಬಿಂದು (23)  ಎಂಬ ಯುವತಿಗೆ ಮಿಥುನ್ ಎಂಬ ಯುವಕ ಚಾಕುವಿನಿಂದ ಇರಿದಿದ್ದು ಯುವತಿಯು ಶನಿವಾರ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಘಟನೆ ವಿವರ

ಬಾಳೆಹೊನ್ನೂರು ಸಮೀಪದ ಗಂಡಿಗೇಶ್ವರ ನಿವಾಸಿ ಮಿಥುನ್ ಬಿಂದುವನ್ನು ಪ್ರೀತಿಸುತ್ತಿದ್ದು ಬಿಂದುವನ್ನು ತನ್ನನ್ನು ಪ್ರೀತಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದ. ಆದರೆ ಯುವತಿ ಬಿಉಂದು ಆತನ ಪ್ರೀತಿಯನ್ನು ನಿರಾಕರಿಸಿದ್ದಾಳೆ.ಇದರಿಂದ ಕುಪಿತಗೊಂಡ ಮಿಥುನ್ ಸೆ.18ರಂದು ಮಹಲ್ಗೋಡಿನ ಬಳಿ ಯುವತಿಗೆ ಚಾಕು ಇರಿದು ತಲೆಮರೆಸಿಕೊಂಡಿದ್ದ. ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. 

ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಸ್ಥಳೀಯರು ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ. ಅಂತಿಮವಾಗಿ ಇಂದು ಚಿಕಿತ್ಸೆ ಫ;ಲಿಸದೆ ಯುವತಿ ಸಾವನ್ನಪ್ಪಿದ್ದಾಳೆ.

ಇತ್ತ ಆರೋಪಿ ಮಿಥುನ್ ನ್ಯಾಯಾಲಯಕ್ಕೆ ಶರಣಾಗಿದ್ದು ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com