ಬೆಂಗಳೂರಿನ ಓಲಾ ಕ್ಯಾಬ್ ಚಾಲಕನ ಹೃದಯಸ್ಪರ್ಶಿ ಸಹಾಯ, ಜನಮೆಚ್ಚುಗೆ ಗಳಿಸಿ ಸಿಕ್ಕಿತು ಬಹುಮಾನ!

ಕ್ಯಾಬ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಾಮಾನ್ಯವಾಗಿ ಸಿಹಿ ಅನುಭವಗಳಿಗಿಂತ ಕಹಿ ಅನುಭವಗಳೇ ಜಾಸ್ತಿಯಾಗಿರುತ್ತವೆ. ಉಬರ್ ಮತ್ತು ಓಲಾ ಕ್ಯಾಬ್ ಕಂಪೆನಿಗಳು ಇದಕ್ಕೆ ಹೊರತಾಗಿಲ್ಲ. ಈ ಹಿಂದೆ ಕಹಿ ಅನುಭವವಾದ ಪ್ರಯಾಣಿಕರ ಬಗ್ಗೆ ಸುದ್ದಿಗಳನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲಿ ಓಲಾ ಕ್ಯಾಬ್ ಚಾಲಕ ಒಳ್ಳೆಯ ಕಾರಣಕ್ಕೆ ಸುದ್ದಿಯಾಗಿದ್ದಾರೆ.  
ಓಲಾ ಕ್ಯಾಬ್ ಚಾಲಕ ಖತೀಬ್ ಯುಆರ್ ರಹಮಾನ್
ಓಲಾ ಕ್ಯಾಬ್ ಚಾಲಕ ಖತೀಬ್ ಯುಆರ್ ರಹಮಾನ್

ಬೆಂಗಳೂರು; ಕ್ಯಾಬ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಾಮಾನ್ಯವಾಗಿ ಸಿಹಿ ಅನುಭವಗಳಿಗಿಂತ ಕಹಿ ಅನುಭವಗಳೇ ಜಾಸ್ತಿಯಾಗಿರುತ್ತವೆ. ಉಬರ್ ಮತ್ತು ಓಲಾ ಕ್ಯಾಬ್ ಕಂಪೆನಿಗಳು ಇದಕ್ಕೆ ಹೊರತಾಗಿಲ್ಲ. ಈ ಹಿಂದೆ ಕಹಿ ಅನುಭವವಾದ ಪ್ರಯಾಣಿಕರ ಬಗ್ಗೆ ಸುದ್ದಿಗಳನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲಿ ಓಲಾ ಕ್ಯಾಬ್ ಚಾಲಕ ಒಳ್ಳೆಯ ಕಾರಣಕ್ಕೆ ಸುದ್ದಿಯಾಗಿದ್ದಾರೆ. 


ಕಳೆದ ಸೆಪ್ಟೆಂಬರ್ 17ರಂದು ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಫೇಸ್ ಬುಕ್ ನಲ್ಲಿ ಓಲಾ ಕ್ಯಾಬ್ ಡ್ರೈವರ್ ನ ಹೃದಯಸ್ಪರ್ಶೀಯ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.


ಆಗಿದ್ದೇನು: ಬೆಂಗಳೂರಿನ ಸಯುಜ್ ರವೀಂದ್ರನ್ ಎಂಬುವವರು ಮನೆಯವರ ಜೊತೆ ತಮ್ಮ ಸಂಬಂಧಿಕರ ಮದುವೆ ಮುಗಿಸಿ ಕೆ ಆರ್ ಪುರಂ ರೈಲ್ವೆ ನಿಲ್ದಾಣದಿಂದ ಬೆಳಗಿನ ಜಾವ 3.30ರ ಹೊತ್ತಿಗೆ ಓಲಾ ಕ್ಯಾಬ್ ನಲ್ಲಿ ಮನೆಗೆ ಮರಳುತ್ತಿದ್ದರು. ದಾರಿ ಮಧ್ಯೆ ಕಾರು ಪಂಕ್ಚರ್ ಆಯಿತು. ಬೇರೆ ಟಯರ್ ಹಾಕಿಸಲು ಸಮಯ ಹಿಡಿಯುವುದರಿಂದ ಮತ್ತೊಂದು ಕ್ಯಾಬ್ ಬುಕ್ ಮಾಡುತ್ತೀರಾ ಎಂದು ಕ್ಯಾಬ್ ಚಾಲಕ ಕೇಳಿದ್ದಾರೆ. ಅದರಂತೆ ಸಯುಜ್ ರವೀಂದ್ರನ್ ಬೇರೊಂದು ಕ್ಯಾಬ್ ಬುಕ್ ಮಾಡಿದ ತಕ್ಷಣ ಕೇವಲ 10 ನಿಮಿಷದಲ್ಲಿ ಮತ್ತೊಂದು ಕ್ಯಾಬ್ ಬಂದು ಅದರಲ್ಲಿ ಎಲ್ಲರೂ ಹತ್ತಿ ಮನೆಗೆ ಹೋದರು.


ಮನೆಗೆ ತಲುಪಿದ ತಕ್ಷಣ ಸಯುಜ್ ಗೆ ಮೊದಲ ಕ್ಯಾಬ್ ಡ್ರೈವರ್ ನಿಂದ ನೀವು ಕಾರಿನಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದೀರಿ ಎಂದು ಕರೆಬಂತು. ಆಗಲೇ ಸಯುಜ್ ಗೆ ಗೊತ್ತಾಗಿದ್ದು ತಾನು ಕಾರಿನಲ್ಲಿ ಲ್ಯಾಪ್ ಟಾಪ್ ಬ್ಯಾಗ್ ಬಿಟ್ಟುಬಂದಿದ್ದೇನೆಂದು, ಅದರಲ್ಲಿ ಕೆಲವು ಅಮೂಲ್ಯ ವಸ್ತುಗಳು ಕೂಡ ಇದ್ದವು. ನಾನಿಲ್ಲಿ ಕಾಯುತ್ತೇನೆ, ಬಂದು ತೆಗೆದುಕೊಂಡು ಹೋಗಿ ಎಂದು ಕ್ಯಾಬ್ ಚಾಲಕ ತಿಳಿಸಿದ್ದಾರೆ.
ಸಯುಜ್ ಮನೆಯಿಂದ ಕಾರಿನಲ್ಲಿ ಹೋಗುತ್ತಿದ್ದಂತೆ ಕಾರು ಚಾಲಕ ತಮ್ಮ ಮನೆಯ ಹಾದಿಯಲ್ಲಿ ಬಂದು ಬ್ಯಾಗನ್ನು ನೀಡಿದ್ದಾರೆ. ಮಾರತಹಳ್ಳಿ ಸೇತುವೆ ಬಳಿ ಲ್ಯಾಪ್ ಟಾಪ್ ಬ್ಯಾಗನ್ನು ಕೊಟ್ಟು ಒಲಾ ಚಾಲಕ ಹೋಗಿದ್ದಾರೆ.ಇದಕ್ಕೆ ಸಯುಜ್ ಹಣ ನೀಡಲು ಮುಂದಾದಾಗ ಚಾಲಕ ತೆಗೆದುಕೊಳ್ಳಲಿಲ್ಲವಂತೆ. ಕ್ಯಾಬ್ ಚಾಲಕನ ಹೆಸರು ಖಟೀಬ್ ಯು ಆರ್ ರೆಹಮಾನ್ ಎಂದು.


ಸಯುಜ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ 10 ಸಾವಿರಕ್ಕೂ ಅಧಿಕ ಮಂದಿ ಲೈಕ್ ಕೊಟ್ಟಿದ್ದು 2,600ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 


ಆರ್ ಟಿ ನಗರ ಹಳೆ ಕಚೇರಿ(ಎಸ್ ಜಿಪಿ ಗ್ರೂಪ್) ನವರು ರೆಹಮಾನ್ ಅವರ ಕಾರ್ಯ ಪ್ರಶಂಸಿಸಿ 25 ಸಾವಿರ ರೂಪಾಯಿ ಚೆಕ್ ನೀಡಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com