ಬೆಳಗಾವಿ: ಮರಣದಂಡನೆ ಶಿಕ್ಷೆಗೊಳಗಾಗಿದ್ದ ಖೈದಿ ಹಿಂಡಲಗಾ ಜೈಲಿನಿಂದ ಪರಾರಿ

ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಖೈದಿಯೊಬ್ಬ ಹಿಂಡಲಗಾ ಜೈಲಿನ ಎಲ್ಲಾ ರಕ್ಷಣಾ ವ್ಯವಸ್ಥೆಗಳನ್ನು ಬೇಧಿಸಿ ತಪ್ಪಿಸಿಕೊಳ್ಳಲು ಯಶಸ್ವಿಆಗಿದ್ದಾನೆ.
ಬೆಳಗಾವಿ: ಮರಣದಂಡನೆ ಶಿಕ್ಷೆಗೊಳಗಾಗಿದ್ದ ಖೈದಿ ಹಿಂಡಲಗಾ ಜೈಲಿನಿಂದ ಪರಾರಿ
ಬೆಳಗಾವಿ: ಮರಣದಂಡನೆ ಶಿಕ್ಷೆಗೊಳಗಾಗಿದ್ದ ಖೈದಿ ಹಿಂಡಲಗಾ ಜೈಲಿನಿಂದ ಪರಾರಿ
ಬೆಳಗಾವಿ: ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಖೈದಿಯೊಬ್ಬ ಹಿಂಡಲಗಾ ಜೈಲಿನ ಎಲ್ಲಾ ರಕ್ಷಣಾ ವ್ಯವಸ್ಥೆಗಳನ್ನು ಬೇಧಿಸಿ ತಪ್ಪಿಸಿಕೊಳ್ಳಲು ಯಶಸ್ವಿ ಆಗಿದ್ದಾನೆ. ಈತ ಹಗ್ಗ ಹಾಗೂ ಹೊದಿಕೆಯ ಸಹಾಯದಿಂದ ಜಿಲಿನ ಗೊಡೆಗಳಾಚೆಗೆ ಹಾರಿ ಪರಾರಿಯಾಗಿದ್ದಾನೆ. ಈ ಘಟನೆ ಏ.22 ರ ರಾತ್ರಿ ನಡೆದಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ.ಅಪರಾಧಿಯನ್ನು ಹಿಡಿದು ಕೊಟ್ಟವರಿಗೆ ಅಥವಾ ಅವನ ಕುರಿತು ಸುಳಿವು ನೀಡಿದವರಿಗೆ ಜೈಲು ಇಲಾಖೆ ನಗದು ಬಹುಮಾನವನ್ನು ಘೋಷಿಸಿದೆ.
ತಮಿಳುನಾಡು ಸೇಲಂ ಮೂಲದವನಾದ ಮುರುಗೇಶ್ ಅಲಿಯಾಸ್ ಕಣ್ಣಮುಚ್ಚಿ (51) ಎಂಬಾತನೇ ಜೈಲಿನಿಂದ ಪರಾರಿಯಾಗಿರುವ ಖೈದಿ. 2017 ರಲ್ಲಿ ಚಾಮರಾಜನಗರದಲ್ಲಿ ಐದು ಜನರ ಹತ್ಯೆ ನಡೆಸಿದ್ದ ಈತನಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿ ತೀಪ್ರು ನಿಡಿದೆ."ಮುರುಗನ್ ಬಹು ಯೋಜಿತವಾಗಿ ಜೈಲಿನಿಂದ ಪರಾರಾಇಯಾಗಿದ್ದಾನೆ. ರಾತ್ರಿ ಕತ್ತಲ ವೇಳೆ ಜೈಲಿನ ಗೋಡೆಯನ್ನೇರಿ ಆಚೆಗೆ ಹಾರಿದ್ದು ಪರಾರಿಯಾಗುವಾಗ ಜೈಲಿನ ಹೆಚ್ಚಿನ ಸಿಬ್ಬಂದಿಗಳು ಚುನವಣಾ ಕರ್ತವ್ಯಕ್ಕೆ ತೆರಳಿದ್ದರು. ಇದು ಅವನಿಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣ ಮಾಡಿಕೊಟ್ಟಿದೆ" ಓರ್ವ ಜೈಲು ಅಧಿಕಾರಿ ಹೇಳಿದ್ದಾರೆ.
ಖೈದಿಯಾಗಿದ್ದ ಮುರುಗನ್ ತಪ್ಪಿಸಿಕೊಳ್ಲಲು ಜೈಲಿನಲ್ಲಿರುವ ಆತನ ಸಹವರ್ತಿಗಳೇನಾದರೂ ಸಹಕರಾ ನಿಡಿದ್ದರೆ ಎನ್ನುವ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಲಿಲ್ಲ. ಇನ್ನು ಜೈಲ್ ಸೂಪರಿಂಟೆಂಡೆಂಟ್ ಟಿ  ಶೇಷ ಅವರನ್ನು ಪತ್ರಿಕೆ ಈ ಕುರಿತು ಪ್ರಶ್ನೆ ಕೇಳಲೆಂದು ಸಂಪರ್ಕಿಸಲು ಯತ್ನಿಸಿದರೂ ಅವರು ಫೋನ್ ಕರೆಗೆ ಸಿಕ್ಕಲಿಲ್ಲ.
ಮೇ 11, 2015ರಂದು ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದಲ್ಲಿ ಎಂಟು ವರ್ಷದ ಬಾಲಕಿ ಸೇರಿ ಐವರನ್ನು ಹತ್ಯೆ ಮಾಡಿದ್ದ ಮುರುಗನ್ ವಿರುದ್ಧ ಕೊಳ್ಲೇಗಾಲ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ  ಮೊಕದ್ದಮೆ ದಾಖಲಾಗಿದೆ.ವಿಚಾರಣೆ ಬಳಿಕ ಚಾಮರಾಜನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಈತನಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.
ಬೆಳಗಾವಿಯ ಐತಿಹಾಸಿಕ ಹಿಂಡಲಗಾ ಜೈಲಿನಲ್ಲಿ ಇಂತಹಾ ಖೈದಿಗಳ ಪರಾರಿ ಪ್ರಕರಣ ಇದು ಮೂರನೇಯದ್ದಾಗಿದೆ. 2010 ರ ಆಗಸ್ಟ್ 28 ರಂದು ಮತ್ತು 1974 ರಲ್ಲಿ ಸಹ ಇದೇ ರೀತಿಯಲ್ಲಿ ಖೈದಿಗಳು ಪರಾರಿಯಾಗಿದ್ದರು. ಮರಣದಂಡನೆ ಎದುರಿಸುತ್ತಿರುವ ಹಲವಾರು ಅಪರಾಧಿಗಳೊಂದಿಗೆ, ಜೈಲಿನಲ್ಲಿ ಪ್ರಸ್ತುತ 800 ಕ್ಕೂ ಹೆಚ್ಚು ಖೈದಿಗಳಿಲ್ಲಿ ಆಶ್ರಯ ಪಡೆಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com