ರಾಜ್ಯದ 80 ಪಿಯು ಕಾಲೇಜುಗಳಲ್ಲಿ 100% ರಿಸಲ್ಟ್, ಆದರೆ ಸತ್ಯಕಥೆ ಬೇರೆಯೇ ಇದೆ!

ಈ ಸಾಲಿನ ದ್ವಿತೀಯ ಪಿಯು ಫಲಿತಾಂಶ ಘೋಷಣೆಯಾದಾಗ ರಾಜ್ಯದ ಸುಮಾರು 80 ಪಿಯು ಕಾಲೇಜುಗಳಲ್ಲಿ ಶೇ. 100 ಫಲಿತಾಂಶ ಬಂದಿತ್ತು. ಇದರಲ್ಲಿ 15ಸರ್ಕಾರಿ ಪಿಯು ಕಾಲೇಜುಗಳೂ ಸೇರಿದ್ದವು.ಈ ಎಲ್ಲಾ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡಿದ್ದ ಎಲ್ಲಾ ವಿದ್ಯಾರ್ಥಿಗಳೂ ತೇರ್ಗಡೆಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಈ ಸಾಲಿನ ದ್ವಿತೀಯ ಪಿಯು ಫಲಿತಾಂಶ ಘೋಷಣೆಯಾದಾಗ ರಾಜ್ಯದ ಸುಮಾರು 80 ಪಿಯು ಕಾಲೇಜುಗಳಲ್ಲಿ ಶೇ. 100 ಫಲಿತಾಂಶ ಬಂದಿತ್ತು. ಇದರಲ್ಲಿ  15 ಸರ್ಕಾರಿ ಪಿಯು ಕಾಲೇಜುಗಳೂ ಸೇರಿದ್ದವು.ಈ ಎಲ್ಲಾ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡಿದ್ದ ಎಲ್ಲಾ ವಿದ್ಯಾರ್ಥಿಗಳೂ ತೇರ್ಗಡೆಯಾಗಿದ್ದಾರೆ. ಆದ್ರೆ ಈ ಅಂಕಿ ಅಂಶವನ್ನೊಮ್ಮೆ ಹತ್ತಿರದಿಂದ ಪರಿಶೀಲಿಸಿದಾಗ ಬೇರೆಯದೇ ವಿಚಾರಗಳು ಬೆಳಕಿಗೆ ಬರುತ್ತಿದೆ.ಶೇ. 100 ಫಲಿತಾಶ ಪಡೆದ ಅನೇಕ ಕಾಲೇಜುಗಳಲ್ಲಿ, (5 ಸರ್ಕಾರಿ ಕಾಲೇಜು ಸೇರಿದಂತೆ) ಕೇವಲ 4 ರಿಂದ 10 ವಿದ್ಯಾರ್ಥಿಗಳಷ್ಟೇ ಪರೀಕ್ಷೆಗೆ ಕುಳಿತಿದ್ದರು.
ಪಿಯು ಇಲಾಖೆಯಿಂದ ಬಿಡುಗಡೆಯಾಗಿರುವ ಅಂಕಿ ಅಂಶಗಳ ಅನುಸಾರ 80 ಕಾಲೇಜುಗಳ ಪೈಕಿ 18 ಕಾಲೇಜುಗಳಲ್ಲಿ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರು.80ರಲ್ಲಿ ಕೇವಲ 9 ಕಾಲೇಜುಗಳಲ್ಲಿ ಮಾತ್ರವೇ ನೂರಕ್ಕಿಂತ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು.
ಶೂನ್ಯ ಫಲಿತಾಶ ಪಡೆದ ಕಾಲೇಜುಗಳ ವಿಚಾರದಲ್ಲಿ ಸಹ ಇದು ಭಿನ್ನವಾಗಿಲ್ಲ, ಈ ಸಾಲಿನಲ್ಲಿ ಒಟ್ಟಾರೆ 98 ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಉತ್ತೀರ್ಣನಾಗಿರದೆ ಶೂನ್ಯ ಫಲಿತಾಶ ಬಂದಿದೆ, ಆ ಪೈಕಿ 48 ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹತ್ತನ್ನು ದಾಟುವುದಿಲ್ಲ! 
"ನೀವು ಇಷ್ಟು ಕಡ್ಮೆ ಸಂಖ್ಯೆಯ ವಿದ್ಯಾರ್ಥಿಗಳನ್ನಿಟ್ಟುಕೊಂಡು 100 ಪ್ರತಿಶತ ಫಲಿತಾಶ ಹೊಂದಿದರೆ ಅದೇನೂ ಅತ್ಯುತ್ತಮ ಸಾಧನೆಯಲ್ಲ,  ಸರ್ಕಾರಿ ಕಾಲೇಜುಗಳು ಕನಿಷ್ಟ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾಗುವಂತೆ ನೋಡಿಕೊಳ್ಲಬೇಕಿದೆ."ಖಾಸಗಿ ಅನುದಾನಿತ ಕಾಲೇಜಿನ ಪ್ರತಿನಿಯೊಬ್ಬರು ಹೇಳಿದ್ದಾರೆ.
ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬೆಂಗಳೂರಿನ ಅಲ್-ಅಮೀನ್ ಸಂಜೆ ಪಿಯು ಕಾಲೇಜು  ಹಾಗೂ ನ್ಯಾಷನಲ್ ಇಂಡಿಪೆಂ<ಡೆಂಟ್ ಪಿಯು ಕಾಲೇಜು, ವಿಜಯಪುರಗಳಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಪರೀಕ್ಷೆ ತೆಗೆದುಕೊಂಡಿದ್ದನು. ಮಂಡ್ಯದ ಮಳವಳ್ಳಿ ತಾಗಲ್ಪಾಡಿ ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿನಲ್ಲಿ ಇಬ್ಬರು, ಹಾಸನದ ಭುವನಗಿರಿಯಲ್ಲಿರುವ ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿನಲ್ಲಿ  4 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಸರ್ಕಾರದ ನಿಯಮದಂತೆ ಒಂದು ಪಿಯು ಕಾಲೇಜು ಕಾರ್ಯಾಚರಣೆ ಮಾಡಲು ಕನಿಷ್ಟ 50  ವಿದ್ಯಾರ್ಥಿಗಳಿರಬೇಕಾದದ್ದು ಕಡ್ಡಾಯ. ಆದರೆ ಇಲಾಖೆಯ ಕಟ್ಟುನಿಟ್ಟಿನ ನಿಯಮವನ್ನು ಸಹ ಇಲ್ಲಿ ಗಾಳಿಗೆ ತೂರಿದ್ದು ಕನಿಷ್ಟ ಐದು ಸರ್ಕಾರಿ ಕಾಲೇಜುಗಳೇ ಈ ನಿಯಮವನ್ನು ಪಾಲಿಸುತ್ತಿಲ್ಲ.ಕಾಲೇಜು ಅಧಿಕಾರಿಗಳು ತಮ್ಮ ಕಾಲೇಜು ಫಲಿತಾಂಶದ ಕುರಿತು ಹೆಮ್ಮೆಯಿಂದ ಹೇಳಿಕೊಳ್ಲುವಾಗಲೇ ಇತರೆ ಶೈಕ್ಷಣಿಕ ಸಂಸ್ಥೆಯ ಸಿಬ್ಬಂದಿ ಇವರನ್ನು ಟೀಕಿಸುತ್ತಿರುಉವುದು ಕಾಣುತ್ತಿದೆ.
ಪತ್ರಿಕೆಯೊಡನೆ ಮಾತನಾಡಿದ ಇಲಾಖೆಯ ಅಧಿಕಾರಿಯೊಬ್ಬರು ಅಗತ್ಯವಿರುವಷ್ಟು ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಲದ ಖಾಸಗಿ ಮತ್ತು ಅನುದಾನಿತ ಕಾಲೇಜುಗಳಿಗೆ ನೋಟಿಸ್ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.ಆದಾಗ್ಯೂ, ಸರ್ಕಾರಿ ಕಾಲೇಜುಗಳ ವಿರುದ್ಧ ಕ್ರ್ಮ ಜರುಗಿಸುವುದು ಅಸಾಧ್ಯವೆಂದೂ ಅವರು ಹೇಳುತ್ತಾರೆ. ಸರ್ಕಾರಿ ಕಾಲೇಜುಗಳಲ್ಲಿ ಕೇವಲ ಒಬ್ಬ ವಿದ್ಯಾರ್ಥಿಯೇ ಇದ್ದರೂ ಕಾಲೇಜು ಪ್ರವೇಶ ಹಾಗೂ ಪ್ರವೇಶ ಪರೀಕ್ಷೆಯನ್ನು ನಡೆಸದಿರಲು ಸಾಧ್ಯವಿಲ್ಲ ಎಂದು ಅವರು ವಿವರಿಸಿದ್ದಾರೆ. 
ಮೂರು ವರ್ಷದ ಹಿಂದೆ ರಾಜ್ಯದ 37 ಪಿಯು ಕಾಲೇಜುಗಳಲ್ಲಿ ಶೇ. 100 ಫಲಿತಾಂಶ ಬಂದಿತ್ತು, ಕಳೆದ ವರ್ಷ ಈ ಸಂಖ್ಯೆ 68ಕ್ಕೆ ಏರಿದ್ದರೆ ಈ ಸಾಲಿನಲ್ಲಿ ಇದು 80 ಆಗಿದೆ. ಇದರಲ್ಲಿ  15 ಸರ್ಕಾರಿ ಕಾಲೇಜುಗಳು, ಒಂದು ಅನುದಾನಿತ ಕಾಲೇಜು, 63 ಖಾಸಗಿ ಅನುದಾನರಹಿತ ಕಾಲೇಜುಗಳು ಮತ್ತು ಒಂದು ವಿಭಜಿತ ಪಿಯು ಕಾಲೇಜುಗಳು ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com