ಗದಗ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಕೊಂದು ಯುವಕ ನೇಣಿಗೆ ಶರಣು

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರಿಬ್ಬರ ನಡುವೆ ನಡೆದ ಜಗಳ ಓರ್ವನ ಹತ್ಯೆಗೆ ಕಾರಣವಾಗಿದ್ದು ಹತ್ಯೆ ನಡೆಸಿದ ಆರೋಪಿ ಕಡೆಗೆ ತಾನೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

Published: 28th April 2019 12:00 PM  |   Last Updated: 28th April 2019 03:21 AM   |  A+A-


A man committed suicide after killed his friend at Gadag

ಗದಗ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಕೊಂದು ಯುವಕ ನೇಣಿಗೆ ಶರಣು

Posted By : RHN RHN
Source : Online Desk
ಗದಗ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರಿಬ್ಬರ ನಡುವೆ ನಡೆದ ಜಗಳ ಓರ್ವನ ಹತ್ಯೆಗೆ ಕಾರಣವಾಗಿದ್ದು ಹತ್ಯೆ ನಡೆಸಿದ ಆರೋಪಿ ಕಡೆಗೆ ತಾನೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಗದಗ ಗಜೇಂದ್ರಗಡ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ವಿಕಾಸ್‌ ದೊಡ್ಡಮೇಟಿ (18)  ಹತ್ಯೆಗೀಡಾದ ದುರ್ದೈವಿ.ಈತನನ್ನು ಶೌಕತ್ ಅಲಿ ಕೊಪ್ಪಳ (35) ಎಂಬುವವನು ಕೊಡಲಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ತಾನೂ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪಿಯುಸಿ ಪರೀಕ್ಷೆ ಬರೆದಿದ್ದ ವಿಕಾಸ್ ಸೋಮವಾರ ಸಿಇಟಿ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ಇದೀಗ ಸ್ನೇಹಿತನಿಂದಲೇ ಹತ್ಯೆಯಾಗಿದ್ದಾನೆ.

ಬೆಳಗಿನ ಜಾವ ಬಹಿರ್ದೆಶೆಗೆ ತೆರಳಿದ್ದ ವೇಳೆ ವಿಕಾಸ್ ಹಾಗೂ ಶೌಕತ್  ನಡುವೆ ಜಗಳವಾಗಿದೆ. ಆ ವೇಳೆ ಜಗಳ ತಾರಕಕ್ಕೆ ಹೋಗಿದ್ದು ವಿಕಾಸ್ ಗೆ ಕೊಡಲಿಯಿಂದ ಹೊಡೆದು ಶೌಕತ್  ಹಲ್ಲೆ ನಡೆಸಿದ್ದು ಹಲ್ಲೆಯಿಂದಾಗಿ ವಿಕಾಸ್ ನ ಕುತ್ತಿಗೆಗೆ ಬಲವಾದ ಏತಾಗಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ/ ಹತ್ಯೆ ನಡೆಸಿದ ಶೌಕತ್  ತಕ್ಷಣ ಸ್ನೇಹಿತನ ಶವ ಕಂಡು ಭಯವಾಗಿ ತಾನೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆ ಸಂಬಂಧ ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp