ಕುಕ್ಕೆ ಸುಬ್ರಹ್ಮಣ್ಯ: ಸ್ವಚ್ಛತೆ ಮರೆತು ಬಸ್ ನಿಂದ ಬಾಟಲ್ ಎಸೆದವರಿಗೆ ಬುದ್ಧಿ ಕಲಿಸಿದ ಯುವಾ ಬ್ರಿಗೇಡ್; ವಿಡಿಯೋ ವೈರಲ್!

ಸ್ವಚ್ಛತೆಯನ್ನು ಮರೆತವರಿಗೆ ಸಾಮಾಜಿಕ ಜವಾಬ್ದಾರಿಯ ಕುರಿತು ಅರಿವು ಮೂಡಿಸಿ ಎಚ್ಚೆತ್ತುಕೊಳ್ಳುವಂತೆ ಮಾಡಿರುವ ಯುವಾ ಬ್ರಿಗೇಡ್ ತಂಡದ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಯುವಾ ಬ್ರಿಗೇ
ಯುವಾ ಬ್ರಿಗೇ
ಸುಳ್ಯ: ಸ್ವಚ್ಛತೆಯನ್ನು ಮರೆತವರಿಗೆ ಸಾಮಾಜಿಕ ಜವಾಬ್ದಾರಿಯ ಕುರಿತು ಅರಿವು ಮೂಡಿಸಿ ಎಚ್ಚೆತ್ತುಕೊಳ್ಳುವಂತೆ ಮಾಡಿರುವ ಯುವಾ ಬ್ರಿಗೇಡ್ ತಂಡದ ನಡೆ ಮೆಚ್ಚುಗೆಗೆ ಪಾತ್ರವಾಗಿದೆ. 
ಮಲಿನಗೊಂಡಿದ್ದ ಕುಮಾರಾಧಾರ ನದಿಯನ್ನು ಸ್ವಚ್ಛಗೊಳಿಸಿದ್ದ ಅಂಕಣಕಾರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವಾ ಬ್ರಿಗೇಡ್ ತಂಡದ ಸದಸ್ಯರು ಬಸ್ ನಿಂದ ರಸ್ತೆಗೆ ಬಾಟಲ್ ಎಸೆದವರನ್ನು ಹಿಂಬಾಲಿಸಿ ಸ್ವಚ್ಚತೆಯ ಪಾಠ ಮಾಡಿದ್ದಾರೆ. 

ಏ.28 ರಂದು ಕುಮಾರಧಾರಾ ನದಿಯ ಸ್ವಚ್ಛತೆ ವೇಳೆ ಯುವಾ ಬ್ರಿಗೇಡ್ ಕಾರ್ಯಕರ್ತರು ನದಿಯಲ್ಲಿ ಎಸೆದಿದ್ದ ಸಾವಿರಾರು ಮದ್ಯದ ಬಾಟಲ್ ಗಳನ್ನು ಹೊರತೆಗೆದಿದ್ದರು. ಶ್ರೀಕ್ಷೇತ್ರದ ನದಿ ಮಲಿನಗೊಳಿಸಿರುವ ಸಾಮಾಜಿಕ ಬೇಜವಾಬ್ದಾರಿತನಕ್ಕೆ ಬೇಸರ ವ್ಯಕ್ತವಾಗಿತ್ತು. ಅದೇ ದಿನ ಕುಕ್ಕೇ ಸುಬ್ರಹ್ಮಣ್ಯದಿಂದ ಬಸ್ ನಲ್ಲಿ ವಾಪಸ್ ತೆರಳುತ್ತಿದ್ದ ಮಂದಿ ಬಸ್ ನಿಂದ ಬಾಟಲ್ ಗಳನ್ನು ರಸ್ತೆಗೆ ಎಸೆದು ಸ್ವಚ್ಛತೆಯನ್ನು ಮರೆತಿದ್ದರು. ಇದನ್ನು ಗಮನಿಸಿದ ಯುವಾ ಬ್ರಿಗೇಡ್ ನ ಕಾರ್ಯಕರ್ತರು ಕಾರಿನಲ್ಲಿ ಬಸ್ ನ್ನು ಹಿಂಬಾಲಿಸಿ, ರಸ್ತೆಗೆ ಬಾಟಲ್ ಎಸೆದವರಿಗೆ ಸ್ವಚ್ಛತೆಯ ಬಗ್ಗೆ ತಿಳಿಹೇಳಿದ್ದಾರೆ. ಈ ಘಟನೆಯ ವಿಡಿಯೋ ಈಗ ವೈರಲ್ ಆಗತೊಡಗಿದ್ದು, ಯುವಾ ಬ್ರಿಗೇಡ್ ನ ಸಾಮಾಜಿಕ ಕಳಕಳಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶ್ರೀಕ್ಷೇತ್ರಗಳಲ್ಲಿ ಸ್ವಚ್ಛತೆಯನ್ನು ನಾವು ಕಾಪಾಡಿದರೆ, ಯುವಾ ಬ್ರಿಗೇಡ್ ನ ಶ್ರಮ ಸಾರ್ಥಕ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com