ವೆಬ್ ಸೈಟ್ ನಲ್ಲಿ ತಾಂತ್ರಿಕ ದೋಷ; ಮೆಟ್ರೊ ಕಾರ್ಡು ಆನ್ ಲೈನ್ ಟಾಪ್-ಅಪ್ ಸೇವೆ ಇಂದು ವ್ಯತ್ಯಯ

ನಮ್ಮ ಮೆಟ್ರೊ ವೆಬ್ ಸೈಟ್ ನಲ್ಲಿ ತಾಂತ್ರಿಕ ದೋಷದ ಕಂಡುಬಂದ ಹಿನ್ನಲೆಯಲ್ಲಿ ಶುಕ್ರವಾರ ಪ್ರಯಾಣಿಕರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಮ್ಮ ಮೆಟ್ರೊ ವೆಬ್ ಸೈಟ್ ನಲ್ಲಿ ತಾಂತ್ರಿಕ ದೋಷದ ಕಂಡುಬಂದ ಹಿನ್ನಲೆಯಲ್ಲಿ ಶುಕ್ರವಾರ ಪ್ರಯಾಣಿಕರು ಮೆಟ್ರೊ ಕಾರ್ಡ್ ಗಳನ್ನು ಆನ್ ಲೈನ್ ನಲ್ಲಿ ಟಾಪ್-ಅಪ್ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. 
ಈ ಕುರಿತಂತೆ ಎಲ್ಲಾ ಮೆಟ್ರೊ ನಿಲ್ದಾಣಗಳಲ್ಲಿ ಸಂದೇಶಗಳನ್ನು ನಿನ್ನೆಯೇ ನೀಡಲಾಗಿತ್ತು. ಇದರಿಂದ ಮೆಟ್ರೊ ನಿಲ್ದಾಣಗಳಲ್ಲಿ ಮೆಟ್ರೊ ಕಾರ್ಡುಗಳನ್ನು ಟಾಪ್ ಅಪ್ ಮಾಡಿಸಿಕೊಳ್ಳಲು ಸರದಿ ಸಾಲಿನಲ್ಲಿ ನಿಲ್ಲುವವರ ಸಂಖ್ಯೆ ಇಂದು ಹೆಚ್ಚಾಗಲಿದೆ. 
ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ಮೆಟ್ರೊ ರೈಲು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ ಎಲ್ ಯಶವಂತ್ ಚವಣ್, ಮೊನ್ನೆ ಬುಧವಾರ ಅಪರಾಹ್ನದಿಂದ ಮೆಟ್ರೊ ವೆಬ್ ಸೈಟ್ ನಲ್ಲಿ ತಾಂತ್ರಿಕ ದೋಷ ಕಂಡುಬಂದು ಸೇವೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಆನ್ ಲೈನ್ ನಲ್ಲಿ ಟಾಪ್-ಅಪ್ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ದೋಷ ಸರಿಪಡಿಸಲು ನಿರಂತರ ಪ್ರಯತ್ನಿಸುತ್ತಿದ್ದು ಇಂದು ಮಧ್ಯಾಹ್ನದ ಬಳಿಕ ಸರಿಯಾಗುವ ಸಾಧ್ಯತೆಯಿದೆ ಎಂದರು.
ಬೆಂಗಳೂರು ನಗರದಲ್ಲಿ ಬಹುತೇಕ ಕಚೇರಿಗೆ ಹೋಗುವವರು ತಿಂಗಳ ಆರಂಭದಲ್ಲಿ ಕಾರ್ಡು ಟಾಪ್ ಅಪ್ ಮಾಡಿಸಿಕೊಳ್ಳುವವರಿಗೆ ಇದರಿಂದ ಇಂದು ತೊಂದರೆಯಾಗಲಿದೆ. ಬಹುತೇಕ ದಿನನಿತ್ಯದ ಮೆಟ್ರೊ ಪ್ರಯಾಣಿಕರಲ್ಲಿ ಶೇಕಡಾ 60 ಮಂದಿ ಶೇಕಡಾ 15ರ ರಿಯಾಯಿತಿಯಲ್ಲಿ ಸಿಗುವ ವಾರ್ಷಿಕ ಕಾರ್ಡು ಖರೀದಿಸಿ ಪ್ರಯಾಣಿಸುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com