ಸೇತುವೆ ಮೇಲಿಂದ ಕೃಷ್ಣಾ ನದಿಗೆ ಹಾರಿದ ವ್ಯಕ್ತಿ; ಸ್ಥಳೀಯರಿಂದ ರಕ್ಷಣೆ

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿವೋರ್ವ ಉಕ್ಕಿ ಹರಿಯುವ ಕೃಷ್ಣಾ ನದಿಗೆ ಹಾರಿ ಬದುಕಿ ಬಂದಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ...
ಕೃಷ್ಣ ನದಿ(ಸಂಗ್ರಹ ಚಿತ್ರ)
ಕೃಷ್ಣ ನದಿ(ಸಂಗ್ರಹ ಚಿತ್ರ)
ಯಾದಗಿರಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿವೋರ್ವ ಉಕ್ಕಿ ಹರಿಯುವ ಕೃಷ್ಣಾ ನದಿಗೆ ಹಾರಿ ಬದುಕಿ ಬಂದಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಸೇತುವೆಯಲ್ಲಿ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶಹಾಪುರ ತಾಲೂಕಿನ ಹೊಸಕೇರಾ ಗ್ರಾಮದ ಶರಣಪ್ಪ, ಕುಟುಂಬಸ್ಥರೊಂದಿಗೆ ದೇವರ ದರ್ಶನ ಪಡೆಯಲು ಬಂದಿದ್ದ. ದರ್ಶನ ಮುಗಿಸಿ ಹೊಸಕೇರಾ ಗ್ರಾಮದ ಕಡೆ ವಾಪಸ್ಸಾಗುತ್ತಿದ್ದಾಗ ಕುಟುಂಬಸ್ಥರಿಗೆ ಗೊತ್ತಾಗದಂತೆ ಮೌನೇಶ್ವರ ದೇವರು ತನ್ನನ್ನು ಕರೆದಿದ್ದಾನೆಂದು ಜೀವದ ಹಂಗು ತೊರೆದು 80 ಅಡಿ ಎತ್ತರದಿಂದ ಕೃಷ್ಣಾ ನದಿಗೆ ಹಾರಿದ್ದಾನೆ. 
ಸೇತುವೆ ಭಾಗದಲ್ಲಿ ಆತ ಕಾಣದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದು, ಆಗ ಆತ ನದಿಗೆ ಹಾರಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. 2 ಕಿ.ಮೀ. ವರಗೆ ಈಜಾಡಿ ಶರಣಪ್ಪ ದಡ ಸೇರಿದ್ದಾನೆ. ವೀರಘಟ್ಟದ ಆದಿ ಮೌನಲಿಂಗೇಶ್ವರ ಸನ್ನಿಧಾನದಲ್ಲಿ ನಿತ್ರಾಣಗೊಂಡ ಆತನನ್ನು ಜನರು ರಕ್ಷಿಸಿ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com