ಉತ್ತರ ಕನ್ನಡದಲ್ಲಿ ಪ್ರವಾಹ: ಸುಮಾರು 100 ಕುಟುಬಂಗಳ ಸ್ಥಳಾಂತರ

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮತ್ತು ಮಲೆನಾಡ ಪ್ರದೇಶದಲ್ಲಿ ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುಮಾರು...
ಅಘನಾಶಿನಿ ನದಿ
ಅಘನಾಶಿನಿ ನದಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮತ್ತು ಮಲೆನಾಡ ಪ್ರದೇಶದಲ್ಲಿ ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುಮಾರು 100ಕ್ಕೂ ಹೆಚ್ಚು ಕುಟುಂಬಗಳನ್ನು ಮಂಗಳವಾರ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಕೊಡಸಳ್ಳಿ ಮತ್ತು ಕಂದ್ರ ಡ್ಯಾಮ್ ನಿಂದ 1 ಟಿಎಂಸಿಗೂ ಹೆಚ್ಚು ನೀರು ಹರಿಬಿಡಲಾಗಿದೆ. ಪರಿಣಾಮ ಕಾಳಿ, ಗಂಗಾವಳಿ ಮತ್ತು ಅಘನಾಶಿನಿ ನದಿಗಳು ತಂಬಿ ಹರಿಯುತ್ತಿವೆ. 
ಈ ಎರಡು ಡ್ಯಾಮ್ ಗಳಿಂದ ಇನ್ನೂ 1 ಲಕ್ಷ ಕ್ಯುಸೆಕ್ ನೀರು ಬಿಡುವುದಾಗಿ ಮತ್ತು ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಡ್ಯಾಮ್ ಅಧಿಕಾರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ನದಿ ಪಾತ್ರದ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳನ್ನು ಕಾರವಾರ, ಅಂಕೋಲ ಹಾಗೂ ಕುಮಟಾದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಸತತ ಮಳೆಯಿಂದ ಜಲಾಶಯಗಳ ಒಳ ಹರಿವು ಅಧಿಕವಾಗಿದೆ. ರವಿವಾರ ಸಂಜೆಯಿಂದ ಸೋಮವಾರ ಬೆಳಗಿನಜಾವದವರೆಗೆ 5 ಗೇಟ್‌ಗಳನ್ನು ತೆರೆದು 0.83 ಟಿಎಂಸಿ ನೀರನ್ನು ಹೊರ ಬಿಡಲಾಗಿತ್ತು. ಸೋಮವಾರ ಸಂಜೆವರೆಗೂ ಮಳೆ ನಿರಂತರವಾಗಿರುವುದರಿಂದ ಜಲಾಶಯದ ನೀರಿನ ಮಟ್ಟದಲ್ಲಿ ಇನ್ನಷ್ಟು ಏರಿಕೆಯಾಗಿದೆ. ಇದರಿಂದಾಗಿ 10 ಗೇಟ್‌ಗಳನ್ನು ತೆರೆದು 43100 ಕ್ಯುಸೆಕ್‌ ನೀರು ಹೊರ ಬಿಡಲಾಗಿದೆ. ಸುರಕ್ಷ ತೆಯ ಹಿತದೃಷ್ಟಿಯಿಂದ ಕದ್ರಾದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಗಂಜಿಕೇಂದ್ರ ಮಾಡಲಾಗಿದ್ದು, ಅಲ್ಲಿ 7ಕುಟುಂಬಗಳ 23ಜನರನ್ನು ಸ್ಥಳಾಂತರಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com