ವಿಷಕಂಠಕನಿಗೂ ತಪ್ಪದ ಜಲಕಂಟಕ.... ಜಿಲ್ಲೆಯಲ್ಲಿ ರೆಡ್ ಅಲರ್ಟ್

ಕಾವೇರಿಯ ಉಪನದಿ ಕಬಿನಿ ಜಲಾಶಯದಿಂದ ಒಂದು ಲಕ್ಷ 25 ಸಾವಿರ ಕ್ಯೂಸೆಕ್‌ ನೀರು ಹರಿಯ ಬಿಡುತ್ತಿರುವ ಕಾರಣ ಮೈಸೂರು ಜಿಲ್ಲೆಯಲ್ಲಿ ರೆಟ್ ಅಲರ್ಟ್ ಘೋಷಣೆ ಮಾಡಲಾಗಿದೆ.
ವಿಷಕಂಟಕನಿಗೂ ತಪ್ಪದ  ಜಲಕಂಟಕ.... ಜಿಲ್ಲೆಯಲ್ಲಿ ರೆಡ್ ಅಲರ್ಟ್
ವಿಷಕಂಟಕನಿಗೂ ತಪ್ಪದ ಜಲಕಂಟಕ.... ಜಿಲ್ಲೆಯಲ್ಲಿ ರೆಡ್ ಅಲರ್ಟ್
ಮೈಸೂರು: ಕಾವೇರಿಯ ಉಪನದಿ  ಕಬಿನಿ  ಜಲಾಶಯದಿಂದ ಒಂದು ಲಕ್ಷ 25 ಸಾವಿರ ಕ್ಯೂಸೆಕ್‌ ನೀರು  ಹರಿಯ ಬಿಡುತ್ತಿರುವ ಕಾರಣ ಮೈಸೂರು ಜಿಲ್ಲೆಯಲ್ಲಿ ರೆಟ್ ಅಲರ್ಟ್ ಘೋಷಣೆ ಮಾಡಲಾಗಿದೆ.
ನಂಜನಗೂಡು ಪ್ರವಾಹಕ್ಕೆ ತುತ್ತಾಗಿದೆ. ದೇವಾಲಯದ ಆವರಣಕ್ಕೆ ನೀರು ನುಗ್ಗಿದೆ. ವಿಷಯಕಂಟಕನಿಗೂ ಈಗ ಜಲಕಂಟಕ ಎದುರಾಗಿದೆ. ಕುಶಾಲನಗರದ ಕೆಲ ಭಾಗಗಳು ಸಹ ಪ್ರವಾಹಕ್ಕೆ ತುತ್ತಾಗಿದೆ. ಪ್ರವಾಹದ ಕಾರಣ ಅನೇಕ ಕಡೆ ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದು ಮತ್ತೆ ಕೆಲವು ಕಡೆ ರಸ್ತೆಗಳು ಬಿರುಕು ಬಿಟ್ಟು ಸಂಚಾರಕ್ಕೆ ಅಪಾಯ ತಂದೊಡ್ಡಿವೆ.
ಕಬಿನಿ ಜಲಾಶದಿಂದ  1,100 ಕ್ಯೂಸೆಕ್ ನೀರು, ತಾರಕಾ ಅಣೆಕಟ್ಟಿನಿಂದ 15000 ಕ್ಯೂಸೆಕ್ ನೀರು ಮತ್ತು ಹೆಚ್  ಡಿ ಕೋಟೆಯ ನುಗು ಅಣೆಕಟ್ಟಿನಿಂದ 10,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕರಿಗಳು ತಿಳಿಸಿದ್ದು  ನದಿ ಪಾತ್ರದಲ್ಲಿನ  ಜನತೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಡಲಾಗಿದೆ . 
ಕಬಿನಿ ವೃತ್ತದ  ಅಧೀಕ್ಷಕ ಎಂಜಿನಿಯರ್  ಶ್ರೀಕಾಂತ ಪ್ರಸಾದ್ ಮಾತನಡಿ, ಮುಂದಿನ ಕೆಲವು  ದಿನಗಳಲ್ಲಿ ಇನ್ನೂ 25 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಕಾರಣ ನೆರೆಯ ಕೇರಳದ ವಯನಾಡು ಜಿಲ್ಲೆಯಿಂದ ಭಾರಿ ಒಳಹರಿವು ನಿರೀಕ್ಷಿಸಲಾಗಿದೆ.  ಅಲ್ಲಿ ಭಾರಿ ಭಾರಿ ಮಳೆ ಮುಂದುವರೆದಿದೆ.
ಮೈಸೂರು- ಊಟಿ ರಸ್ತೆಯ ರಾಷ್ಟ್ರೀಯ ಹೆದ್ದಾರಿಗಳು ಕಬಿನಿ ನೀರಿನಿಂದ ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಗಿದೆ. ಸುಲ್ತಾನ್ ಭಟೇರಿಯನ್ನು  ಸಂಪರ್ಕಿಸುವ ಜಿಲ್ಲೆಯ ಗುಂಡ್ಲುಪೇಟೆ ರಸ್ತೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ದೇವಾಲಯ ಪಟ್ಟಣವಾದ ನಂಜನಗೂಡು ಭಾಗಶಃ ಮುಳುಗಿದೆ ಮತ್ತು ದೇವಾಲಯದ ಆವರಣಕ್ಕೂ ನೀರು ನುಗ್ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ, ಕಾವೇರಿ ಮತ್ತು ಅದರ ಉಪನದಿಗಳ ಜಲಾನಯನ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಈ ಪ್ರದೇಶದಲ್ಲಿನ ಜಲಾಶಯಗಳ ನೀರಿನ  ಮಟ್ಟ ಏರಿಕೆಯಾಗುತ್ತಿದೆ.
ಹಾಸನ ಜಿಲ್ಲೆಯ ಹೇಮಾವತಿ, ಕುಶಾಲನಗರದ ಬಳಿಯ ಹಾರಂಗಿ, ಶ್ರೀರಂಗಪಟ್ಟಣ  ಬಳಿಯ ಕೃಷ್ಣರಾಜ ಸಾಗರ್ (ಕೆಆರ್‌ಎಸ್) ಜಲಾಶಯ ಈ ಋತುವಿನಲ್ಲಿ ಗರಿಷ್ಠ ಮಟ್ಟ ತಲುಪಿವೆ.
ಹೇಮಾವತಿ ಜಲಾಶಯಕ್ಕೆ ಗುರುವಾರ 48,133 ಕ್ಯೂಸೆಕ್ ನೀರು  ಹರಿದು ಬರುತ್ತಿದೆ.  ಇದರಿಂದ  ಜಲಾಶಯದ ನೀರಿನ ಮಟ್ಟ ಒಂದೇ ದಿನ  ಆರು ಅಡಿ ಹೆಚ್ಚಾಗಿದೆ. ಹೆಚ್ಚುತ್ತಿರುವ ಒಳಹರಿವಿನ ಕಾರಣ ಜಲಾಶಯದಿಂದ 20,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. 
ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಸನ  ಜಿಲ್ಲಾಧಿಕಾರಿ ಅಕ್ರಮ್ ಪಾಷಾ ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮಳೆ ಹಠಾತ್ ಉಲ್ಬಣವಾಗಿದ್ದು  ಹಾರಂಗಿ  ಜಲಾಶಯದಿಂದ   30,000 ಕ್ಯೂಸೆಕ್‌ ನೀರು  ಹರಿಯ ಬಿಡಲಾಗುತ್ತಿದೆ.
ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಡಗು ಬಾಧಿತಗೊಂಡಿದೆ. 25 ಕ್ಕೂ ಹೆಚ್ಚು ಸ್ಥಳಗಳು ಪ್ರವಾಹಕ್ಕೆ ಸಿಲುಕಿವೆ. 323 ಕುಟುಂಬಗಳಿಗೆ ಸೇರಿದ ಒಟ್ಟು 993 ಸಂತ್ರಸ್ತರನ್ನು ರಕ್ಷಣೆ ಮಾಡಿ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಈವರೆಗೆ 21 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, ಮುಂದಿನ ದಿನಗಲ್ಲಿ ಅವುಗಳ ಸಂಖ್ಯೆ  ಹೆಚ್ಚಾಗುವ  ನಿರೀಕ್ಷೆಯಿದೆ. ಭೂಕುಸಿತದಿಂದ 13 ಸ್ಥಳಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.  ಅವಶೇಷಗಳನ್ನು ತೆರವುಗೊಳಿಸಲು ಪರಿಹಾರ ತಂಡಗಳನ್ನು ನಿಯೋಜಿಸಲಾಗಿದೆ. ಕೆಲವು ಸ್ಥಳಗಳಲ್ಲಿ, ರಸ್ತೆಗಳು  ಬಿರುಕು ಬಿಟ್ಟು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹಾರಂಗಿ  ಅಣೆಕಟ್ಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು  ಹೊರೆಗೆ  ಬಿಡುತ್ತಿರುವ ಕಾರಣ ಕುಶಾಲನಗರದ ಕೆಲವು ಭಾಗಗಳಲ್ಲಿ  ಪ್ರವಾಹ ಪರಿಸ್ಥಿತಿ ತಲೆದೋರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com