ಹಾಲು ಒಕ್ಕೂಟ ನೇಮಕಾತಿ ವಿಚಾರದಲ್ಲಿ ಬಿಜೆಪಿ ವಿರುದ್ಧ ಜೆಡಿಎಸ್ ವಾಗ್ದಾಳಿ

ರಾಜ್ಯದಲ್ಲಿ ತೀವ್ರ ಪ್ರವಾಹದ ಪರಿಸ್ಥಿತಿಯ ನಡುವೆಯೂ ಹಾಲು ಒಕ್ಕೂಟ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಪ್ರತಿಪಕ್ಷ ಜೆಡಿಎಸ್ ನಡುವೆ ವಾಗ್ಯುದ್ದ ಉಂಟಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ತೀವ್ರ ಪ್ರವಾಹದ ಪರಿಸ್ಥಿತಿಯ ನಡುವೆಯೂ ಹಾಲು ಒಕ್ಕೂಟ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಪ್ರತಿಪಕ್ಷ ಜೆಡಿಎಸ್  ನಡುವೆ ವಾಗ್ಯುದ್ದ ಉಂಟಾಗಿದೆ.
ಮೈಸೂರಿನ ಹಾಲು ಉತ್ಪಾದಕರ ಸಂಘಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಸಂಬಂಧಿಕರನ್ನು ನಾಮನಿರ್ದೇಶನ ಮಾಡಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ. 
ಯಡಿಯೂರಪ್ಪ ಸಂಬಂಧಿಕರಾದ ಎಸ್  ಸಿ ಆಶೋಕ್ ಅವರನ್ನು ನೇಮಕಾತಿ ಮಾಡಿರುವ ಆದೇಶಕ್ಕೆ ಸಹಕಾರ ಇಲಾಖೆಯ ಅಧಿಕಾರಿ ಬಿಎಸ್ ಹರೀಶ್ ಸಹಿ ಇದ್ದು, ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. 
ರಾಜ್ಯದಲ್ಲಿ ತೀವ್ರ ಪ್ರವಾಹದ ಪರಿಸ್ಥಿತಿ ಇರುವಾಗ ಕ್ಯಾಬಿನೇಟ್ ಇನ್ನೂ ರಚನೆಯಾಗದೆ ಇರುವಾಗ ಈ ನೇಮಕಾತಿಯನ್ನು ಹೇಗೆ ಮಾಡಲಾಯಿತು ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಟೀಕಿಸಿದ್ದಾರೆ. 
ಈ ನೇಮಕಾತಿಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಿಜೆಪಿ ಜೆಡಿಎಸ್ ನಂತೆ ಕುಟುಂಬ ಆಡಳಿತ ಮಾಡುವುದಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ಅವರ ರೀತಿ ಆಡಳಿತ ಮಾಡುವುದಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com