ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಜನ ತತ್ತರ; ಇತ್ತ ಕಾಂಗ್ರೆಸ್ ನಾಯಕರಿಂದ ಬಕ್ರೀದ್ ಬಾಡೂಟ

ಪ್ರವಾಹ ಸಂತ್ರಸ್ಥರ ಸಂಕಷ್ಟ ಕೇಳಬೇಕಾದ ಕಾಂಗ್ರೆಸ್ ಪಕ್ಷದ ಘಟಾಮನುಘಟಿ ನಾಯಕರು ಪ್ರವಾಹದ ನಡುವೆಯೇ ಬಕ್ರಿದ್ ಹಬ್ಬದ ಬಾಡೂಟವನ್ನು ಹೊಟ್ಟೆ ತುಂಬ ಸವಿದಿದ್ದಾರೆ.
ಕಾಂಗ್ರೆಸ್ ನಾಯಕರಿಂದ ಬಕ್ರೀದ್ ಬಾಡೂಟ
ಕಾಂಗ್ರೆಸ್ ನಾಯಕರಿಂದ ಬಕ್ರೀದ್ ಬಾಡೂಟ

ಬೆಂಗಳೂರು: ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಜನರು ಸಂಕಷ್ಟಕ್ಕೀಡಾಗಿ ತುತ್ತು ಅನ್ನಕ್ಕಾಗಿ ಕೈಚಾಚುವ ಪರಿಸ್ಥಿತಿ ಇದೆ.ಸಂಕಷ್ಟ ಕೇಳಬೇಕಾದ ಕಾಂಗ್ರೆಸ್ ಪಕ್ಷದ ಘಟಾಮನುಘಟಿ ನಾಯಕರು ಬಕ್ರಿದ್ ಹಬ್ಬದ ಬಾಡೂಟವನ್ನು ಹೊಟ್ಟೆ ತುಂಬ ಸವಿದಿದ್ದಾರೆ.

ನಾಡಿಗೆ ಅನ್ನನೀಡುವ ಅನ್ನದಾತ ನೆರೆಯಲ್ಲಿ ಸಿಲುಕು ಮನೆ ,ಆಸ್ತಿ ಬೆಳೆ ಬದುಕು ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.ಆದರೆ ಜನರ ಸಂಕಷ್ಟ ಕೇಳಬೇಕಾದ ಸಂಕಷ್ಟದ ಸಂರ್ಭದಲ್ಲಿ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಕಾರಣವಾಗಿದೆ.

ಇಂದು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ  ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರು ಎಲ್ಲಾ ಕಾಂಗ್ರೆಸ್ ಪಕ್ಷದ ನಾಯಕರಿಗೆ ಆಹ್ವಾನವನ್ನು ನೀಡಿದ್ದು, ಹಬ್ಬದ ಸಂಭ್ರಮದಲ್ಲಿ ಭಾಗಹಿಸಿದ್ದ ನಾಯಕರು ಬಾಡೂಟ ಸವಿದಿದ್ದಾರೆ. 

ಉತ್ತರ ಕರ್ನಾಟಕದಲ್ಲಿ ನೆರೆ ಪರಿಸ್ಥಿತಿ ಇದ್ದರೂ ಕೂಡ ಜನರ ಸಮಸ್ಯೆಗೆ ಸ್ಪಂದಿಸಬೇಕಾಗಿದ್ದ ಆ ಭಾಗದ ನಾಯಕರೇ ಇಂದು ನಜೀರ್ ಅಹ್ಮದ್ ಅವರ ನಿವಾಸದಲ್ಲಿ ನಡೆದ ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಕೆಜೆ ಜಾರ್ಜ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಂಬಿ ಪಾಟೀಲ್, ಮಹದೇವ ಪ್ರಸಾದ್, ಜಮೀರ್ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com