ಬದುಕುವ ಆಸೆ ಕೈಚೆಲ್ಲಿದ್ದಾಗ ಬಂದು ಕಾಪಾಡಿದ ಯೋಧರಿಗೆ ರಾಖಿ ಕಟ್ಟಿ ಸೋದರತ್ವ ಮೆರೆದ ನೆರೆ ಸಂತ್ರಸ್ತ ಮಹಿಳೆಯರು!

ನೆರೆ ಹಾವಳಿಗೆ ಸಿಲುಕಿರುವ ಉತ್ತರ ಕರ್ನಾಟಕದ ಜನರು ತಮ್ಮ ರಕ್ಷಣೆಗೆ ಜೀವದ ಹಂಗು ತೊರೆದು ಹೋರಾಡುತ್ತಿರುವ ಸೈನಿಕರಿಗೆ ರಾಖಿ ಕಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದ್ದು, ರಾಖಿ ಹಬ್ಬಕ್ಕೂ ಎರಡು ದಿನ ಮುನ್ನವೇ ಸೋದರತ್ವದ ಭಾವ ಮೆರೆದಿದ್ದಾರೆ.
ಭಾರತೀಯ ಯೋಧರು
ಭಾರತೀಯ ಯೋಧರು

ಬೆಂಗಳೂರು: ನೆರೆ ಹಾವಳಿಗೆ ಸಿಲುಕಿರುವ ಉತ್ತರ ಕರ್ನಾಟಕದ ಜನರು ತಮ್ಮ ರಕ್ಷಣೆಗೆ ಜೀವದ ಹಂಗು ತೊರೆದು ಹೋರಾಡುತ್ತಿರುವ ಸೈನಿಕರಿಗೆ ರಾಖಿ ಕಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದ್ದು, ರಾಖಿ ಹಬ್ಬಕ್ಕೂ ಎರಡು ದಿನ ಮುನ್ನವೇ ಸೋದರತ್ವದ ಭಾವ ಮೆರೆದಿದ್ದಾರೆ. 

ರಾಜ್ಯದ ನೆರೆ ಪೀಡಿತ 17 ಜಿಲ್ಲೆಗಳಲ್ಲಿ ಭಾರತೀಯ ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ನೆರೆಯಿಂದ ನಡುಗಡ್ಡೆಯಂತಾಗಿದ್ದ ಊರುಗಳಲ್ಲಿ ಸಿಲುಕಿದ್ದ ಗ್ರಾಮಸ್ಥರನ್ನು ಭಾರತೀಯ ಸೇನೆ, ರಾಷ್ಟ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ರಕ್ಷಿಸಿದ್ದಾರೆ. 

ಯೋಧರಿಗೆ ರಾಖಿ ಕಟ್ಟಿದ ಗರ್ಭಿಣಿ ಸಾವಿತ್ರಿ, ಸಂಕಷ್ಟದಲ್ಲಿರುವರನ್ನು ರಕ್ಷಿಸುವುದು ಓರ್ವ ಸಹೋದರ ನೀಡುವ ಅತ್ಯಂತ ದೊಡ್ಡ ಉಡುಗೊರೆಯಾಗಿದೆ. ನಮ್ಮ ಜೀವಗಳು ಸಂಕಷ್ಟದಲ್ಲಿದ್ದಾಗ ಈ ಧೀರರು ರಕ್ಷಣೆಗೆ ಧಾವಿಸಿದ್ದಾರೆ ಎಂದರು. 

ರಕ್ಷಣಾ ಪಡೆಗಳು ಸೋಮವಾರ ಪುನರ್ವಸತಿ ಕೇಂದ್ರದಲ್ಲಿನ ಸಂತ್ರಸ್ತರೊಂದಿಗೆ ಮುಸ್ಲಿಂ ಬಾಂಧವರು ಹಾಗೂ ಮಹಿಳೆಯರ ಜೊತೆಗೆ  'ಬಕ್ರೀದ್ ಈದ್ ' ಆಚರಿಸಿದರು. ಸೈನಿಕರು ಹಾಗೂ ಗ್ರಾಮಸ್ಥರು ಒಟ್ಟಿಗೆ ಶ್ಯಾವಿಗೆ ಪಾಯಸ ಹಾಗೂ ಬಿರಿಯಾನಿ ಸೇವಿಸಿದರು. 

ಸೋಮವಾರ ಕೂಡ ರಕ್ಷಣಾ ಪಡೆ ಹಂಪಿಯ ಪಾರಂಪರಿಕ ವೀರಾಪುರ ಗಡ್ಡೆಯಲ್ಲಿ ಸಿಲುಕಿದ್ದ 25 ವಿದೇಶಿಗರು ಸೇರಿದಂತೆ 75 ಜನರನ್ನು ರಕ್ಷಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಯಿದ್ದ ದೋಣಿ ತುಂಗಭದ್ರಾ ನದಿಯಲ್ಲಿ ಬುಡಮೇಲಾಗಿದ್ದು, ಅವರನ್ನು ನೌಕಾಪಡೆ ಸಿಬ್ಬಂದಿ ರಕ್ಷಿಸಿದ್ದಾರೆ. ಇನ್ನೊಂದೆಡೆ  ಕೃಷ್ಣ ನದಿಯ ಪ್ರವಾಹಕ್ಕೆ ಸಿಲುಕಿದ್ದ ಸೇನಾ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com