ಡಿವೈಎಸ್‍ಪಿ ಬಸಪ್ಪ ಅಂಗಡಿಗೆ ರಾಷ್ಟ್ರಪತಿ ಶ್ಲಾಘನೀಯ ಪದಕ, 38 ಪೊಲೀಸರಿಗೆ ರಾಷ್ಟ್ರಪತಿ ಪದಕ

ಸ್ವಾತಂತ್ರ್ಯೋತ್ಸವ ಪ್ರಯುಕ್ತ ಅತ್ಯುತ್ತಮ ಸಾಧನೆ ಮಾಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡುವ ರಾಷ್ಟ್ರಪತಿಯವರ ಶ್ಲಾಘನೀಯ ಪದಕಕ್ಕೆ ರಾಜ್ಯದ ಓರ್ವ ಪೊಲೀಸ್ ಅಧಿಕಾರಿ ಭಾಜನರಾಗಿದ್ದು,...
ರಾಮನಾಥ್ ಕೊವಿಂದ್
ರಾಮನಾಥ್ ಕೊವಿಂದ್

ಬೆಂಗಳೂರು: ಸ್ವಾತಂತ್ರ್ಯೋತ್ಸವ ಪ್ರಯುಕ್ತ ಅತ್ಯುತ್ತಮ ಸಾಧನೆ ಮಾಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡುವ ರಾಷ್ಟ್ರಪತಿಯವರ ಶ್ಲಾಘನೀಯ ಪದಕಕ್ಕೆ ರಾಜ್ಯದ ಓರ್ವ ಪೊಲೀಸ್ ಅಧಿಕಾರಿ ಭಾಜನರಾಗಿದ್ದು, ಉತ್ತಮ ಸೇವೆಗಾಗಿ ನೀಡುವ ರಾಷ್ಟ್ರಪತಿ ಪೊಲೀಸ್ ಪದಕಕ್ಕೆ ಈ ಬಾರಿ ಕರ್ನಾಟಕದಿಂದ 38 ಮಂದಿ ಆಯ್ಕೆಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ಉಪ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಬಸಪ್ಪ ಎಸ್. ಅಂಗಡಿ ಅವರಿಗೆ ಈ ಬಾರಿಯ ರಾಷ್ಟ್ರಪತಿ ಶ್ಲಾಘನೀಯ ಪದಕ ದೊರೆತಿದೆ.

ರಾಷ್ಟ್ರಪತಿ ಪೊಲೀಸ್ ಪದಕ ಪಡೆದವರು: ಚಿಕ್ಕಪೇಟೆ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎನ್.ಆರ್. ಮಹಾಂತ ರೆಡ್ಡಿ, ಹಲಸೂರು ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಟಿ.ಮಂಜುನಾಥ್, ಸಿಐಡಿಯ ಡಿವೈಎಸ್‍ಪಿ, ರವಿಶಂಕರ್, ಮಾಗಡಿ ಉಪ ವಿಭಾಗದ ಡಿವೈಎಸ್‍ಪಿ ಬಿ.ಎಆರ್ ವೇಣುಗೋಪಾಲ್, ಚಾಮರಾಜನಗರದ ಡಿಸಿಆರ್ ಬಿ ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಿ.ಲಕ್ಷ್ಮೀನಾರಾಯಣ, ಬೆಂಗಳೂರು ನಗರ ಎಸಿಬಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ. ತಮ್ಮಯ್ಯ, ಲಿಂಗಸುಗೂರು ಉಪ ವಿಭಾಗದ ಡಿವೈಎಸ್‍ಪಿ ಎಸ್‍.ಎಚ್.ಸುಬೇದಾರ್, ಕೇಂದ್ರ ವಲಯ ಐಜಿಪಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ಡಾ.ಪ್ರಕಾಶ್ ಎಸ್., ಮಡಿಕೇರಿ ಉಪ ವಿಭಾಗದ ಡಿವೈಎಸ್‍ಪಿ ಕೆ.ಸುಂದರ್ ರಾಜ್, ಮಂಗಳೂರು ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಾಮ್ ರಾವ್ ಕೊತ್ವಾಲ್, ಧಾರವಾಡ ಉಪವಿಭಾಗದ ಹುಬ್ಬಳ್ಳಿ ಧಾರವಾಡ ನಗರದ ಸಹಾಯಕ ಆಯುಕ್ತ ಎಮ್.ಎನ್.ರುದ್ರಪ್ಪ, ದಾವಣಗೆರೆಯ ಜಿಲ್ಲಾ ಮೀಸಲು ಪಡೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ತಿಪ್ಪೇಸ್ವಾಮಿ ಜಿ ಎಂ, ಬೆಂಗಳೂರು ನಗರ ಚಂದ್ರಾಲೇಔಟ್ ಪೊಲೀಸ್ ಇನ್ಸ್‍ ಪೆಕ್ಟರ್ ಕಲ್ಲಪ್ಪ ಎಸ್ ಖಾರಟ್, ಕಾಟನ್‍ಪೇಟೆ ಪೊಲೀಸ್ ಇನ್ಸ್‍ ಪೆಕ್ಟರ್ ಕುಮಾರಸ್ವಾಮಿ ಬಿ.ಜಿ., ಅಶೋಕ್ ನಗರ ಠಾಣೆಯ ಇನ್ಸ್ ಪೆಕ್ಟರ್ ಎಸ್‍.ಡಿ.ಶಶಿಧರ್ , ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಈಯಣ್ಣ ರೆಡ್ಡಿ, ಬೆಂಗಳೂರು ಸಿಐಡಿ ಪೊಲೀಸ್ ಇನ್ಸ್ ಪೆಕ್ಟರ್ ಗೀತಾ ಡಿ.ಕುಲಕರ್ಣಿ, ಹೆಬ್ಬಾಳ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಎಸ್.ಬಸವರಾಜು, ತುಮಕೂರು ಬೆಸ್ಕಾಂ ವಿಜಿಲೆನ್ಸ್ ಪೊಲೀಸ್ ಇನ್ಸ್ ಪೆಕ್ಟರ್ ಎಂ.ವಿ.ಶೇಷಾದ್ರಿ, ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ಎಚ್.ಡಿ.ಕುಲಕರ್ಣಿ, ಬಳ್ಳಾರಿ ಗ್ರಾಮಾಂತರ ವೃತ್ತ ನಿರೀಕ್ಷಕ ಬಿ ಎಸ್. ಸುಧಾಕರ್, ಚಿಕ್ಕಬಳ್ಳಾಪುರದ ಗೌರಿ ಬಿದನೂರು ವೃತ್ತದ ಪೊಲೀಸ್ ಇನ್ಸ್ ಪೆಕ್ಟರ್ ವೈ.ಅಮರನಾರಾಯಣ, ಕೆಎಸ್‍ಆರ್ ಪಿಯ 3ನೇ ಬೆಟಾಲಿಯನ್‍ನ ಸಹಾಯಕ ಮೀಸಲು ಸಬ್ ಇನ್ಸ್ ಪೆಕ್ಟರ್ ರಾಜು ಗೋಪಾಲ್ ಆರ್., ಚಿಕ್ಕಮಗಳೂರು ಜಿಲ್ಲಾ ಮೀಸಲು ಪಡೆಯ ಸಹಾಯಕ ಮೀಸಲು ಸಬ್ ಇನ್ಸ್ ಪೆಕ್ಟರ್ ಬಿ.ಎಸ್. ಸುದೇಶ್ ಕಿಣಿ, ತುಮಕೂರು ಕ್ಯಾತ್ಸಂದ್ರ ಸಹಾಯಕ ಸಬ್ ಇನ್ಸ್ ಪೆಕ್ಟರ್ ಆರ್.ಎಸ್.ಸಿದ್ದಪ್ಪ, ಹಾವೇರಿ ಎಸ್‍.ಪಿ.ಕಚೇರಿಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಎನ್.ಆರ್.ಕಾಟೆ, ಶಿವಮೊಗ್ಗ ಜಿಲ್ಲಾ ಬೆರಳಚ್ಚು ವಿಭಾಗದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಸತೀಶ್ ಆರ್., ಬೆಂಗಳೂರು ನಗರ ವಿಶೇಷ ಘಟಕದ ಹೆಡ್ ಕಾನ್ಸ್ ಸ್ಟೇಬಲ್ ರುದ್ರಸ್ವಾಮಿ, ಬೆಂಗಳೂರು ಗುಪ್ತಚರ ವಿಭಾಗದ ಮುಖ್ಯ ಪೇದೆ ರವೀಂದ್ರ, ಮೈಸೂರು ಎಸಿಬಿಯ ಮುಖ್ಯ ಪೇದೆ ಮಂಜುನಾಥ ರಾವ್ ಎನ್, ಬೆಂಗಳೂರು 3ನೇ ಬೆಟಾಲಿಯನ್‍ನ ಮುಖ್ಯ ಪೇದೆ ಅಶೋಕ್ ಎಸ್. ನಾಯ್ಕ್, ಮೈಸೂರು ಕೆಎಸ್‍ಆರ್ ಪಿಯ 5ನೇ ಬೆಟಾಲಿಯನ್‍ನ ಮೀಸಲು ಮುಖ್ಯ ಪೇದೆ ರಮೇಶ್, ಬೆಂಗಳೂರು ಕೆಎಸ್‍ಆರ್‍ ಪಿ 4ನೇ ಬೆಟಾಲಿಯನ್‍ನ ಮುಖ್ಯ ಪೇದೆ ವಿಜಯಕುಮಾರ್ ಪಿ.ವಿ., ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಪೊಲೀಸ್ ಠಾಣೆಯ ಸಿವಿಲ್ ಮುಖ್ಯ ಪೇದೆ ರಂಗನಾಥನ್, ದಾವಣಗೆರೆ ಜಿಲ್ಲೆಯ ಕಂಪ್ಯೂಟರ್ ವಿಭಾಗದ ಸಿವಿಲ್ ಮುಖ್ಯಪೇದೆ ರಾಮಚಂದ್ರ ಬಿ., ಕೊಡಗು ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯ ಮಹಿಳಾ ಮುಖ್ಯ ಪೇದೆ ಸುಮತಿ ಎಂ., ಬೆಂಗಳೂರು ಸಿಸಿಬಿಯ ಮುಖ್ಯ ಪೇದೆ ಕೊಪ್ಪಳ ಚಂದ್ರ, ಗದಗ ಡಿಸಿಆರ್‍ ಬಿಯ ಸಿವಿಲ್ ಮುಖ್ಯಪೇದೆ ಡಿ.ಎಂ.ಮ್ಯಾಗೇರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com