ನೆರೆ ಇಳಿದರೂ ತಪ್ಪಿಲ್ಲ ಹೈ.ಕರ್ನಾಟಕ ಭಾಗದ ಜನರ ಗೋಳು, ಸಂತ್ರಸ್ಥರ ಅಳಲು ಕೇಳೋರ್ಯಾರು?

ಹೈದರಾಬಾದ್ ಕರ್ನಾಟಕದಲ್ಲಿ ನೆರೆ ಹಾವಳಿ ಕಡಿಮೆಯಾಗಿದ್ದು, ಬಸವಸಾಗರ ಜಲಾಶಯದ ನೀರಿನ ಒಳಹರಿವು ಇಳಿಮುಖವಾಗಿದೆಯಾದರೂ, ಯಾದಗಿರಿ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳ ಬಹುತೇಕ ಪ್ರದೇಶಗಳು ಇನ್ನೂ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರಗಿ:  ಹೈದರಾಬಾದ್ ಕರ್ನಾಟಕದಲ್ಲಿ ನೆರೆ ಹಾವಳಿ ಕಡಿಮೆಯಾಗಿದ್ದು, ಬಸವಸಾಗರ ಜಲಾಶಯದ ನೀರಿನ ಒಳಹರಿವು ಇಳಿಮುಖವಾಗಿದೆಯಾದರೂ, ಯಾದಗಿರಿ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳ ಬಹುತೇಕ ಪ್ರದೇಶಗಳು ಇನ್ನೂ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿವೆ.

ಯಾದಗಿರಿ ಹಾಗೂ ರಾಯಚೂರಿಗೆ ಸಂಪರ್ಕ ಕಲ್ಪಿಸುವ ಎರಡು ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣ ಭಾಗ್ಯ ಜಲ ನಿಗಮದ ಮೂಲಗಳ ಪ್ರಕಾರ, ನಾರಾಯಣಪುರ ಬಸವಸಾಗರ ಜಲಾಶಯದ ಒಳಹರಿವು 5.40 ಲಕ್ಷ ಕ್ಯೂಸೆಕ್ ಇದ್ದು, ಹೊರಹರಿವು 5.20 ಲಕ್ಷ ಕ್ಯೂಸೆಕ್ ಇದೆ. ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಿರುವ ಆಲಮಟ್ಟಿ ಜಲಾಶಯದ ಒಳಹರಿವು 5.38 ಕ್ಯೂಸೆಕ್ ಇದ್ದು, ಹೊರಹರಿವು 5.60 ಲಕ್ಷ ಕ್ಯೂಸೆಕ್ ನಷ್ಟಿದೆ.

ಗ್ರಾಮಗಳಲ್ಲಿ ಸರ್ವೆ ನಡೆಸಿದ ನಂತರ ಯಾದಗಿರಿ ಜಿಲ್ಲಾಡಳಿತ, ಕೆಲ ತಾತ್ಕಾಲಿಕ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ಆಲೋಚಿಸುತ್ತಿದೆ. ಸರ್ವೆ ನಡೆಸಿದ ನಂತರ, ಮನೆ ಮಾಲೀಕರಿಗೆ ಪರಿಹಾರ ವಿತರಿಸಲಾಗುವುದು. ಮನೆಗಳು ವಾಸಿಸಲು ಯೋಗ್ಯವಾಗಿಲ್ಲವಾದರೆ, ಅಂತಹ ಕುಟುಂಬಗಳು ತಮ್ಮ ಮನೆಯನ್ನು ಪುನರ್ ನಿರ್ಮಿಸುವರೆಗೆ ತಾತ್ಕಾಲಿಕ ವಸತಿ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕುರ್ಮಾ ರಾವ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com