ಭಾರಿ ಮಳೆ: ಕೆಆರ್ ಎಸ್ ಜಲಾಶಯ ಭರ್ತಿ; ಅಪಾರ ಪ್ರಮಾಣದ ನೀರು ಹೊರಕ್ಕೆ!

ಕೊಡಗು ಮತ್ತು ಮಡಿಕೇರಿ ಭಾಗದಲ್ಲಿ ಭಾರಿ ಮಳೆ ಮುಂದುವರೆದ ಕಾರಣ ಮಂಡ್ಯದಲ್ಲಿರುವ ಕೃಷ್ಣ ರಾಜ ಸಾಗರ (ಕೆಎರ್ ಎಸ್)ಜಲಾಶಯ ಭರ್ತಿಯಾಗಿದ್ದು, ಡ್ಯಾಂನಲ್ಲಿನ ನೀರಿನ ಮಟ್ಟ ಗರಿಷ್ಠ 124.80 ಅಡಿ ತಲುಪಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಡ್ಯ: ಕೊಡಗು ಮತ್ತು ಮಡಿಕೇರಿ ಭಾಗದಲ್ಲಿ ಭಾರಿ ಮಳೆ ಮುಂದುವರೆದ ಕಾರಣ ಮಂಡ್ಯದಲ್ಲಿರುವ ಕೃಷ್ಣ ರಾಜ ಸಾಗರ (ಕೆಎರ್ ಎಸ್)ಜಲಾಶಯ ಭರ್ತಿಯಾಗಿದ್ದು, ಡ್ಯಾಂನಲ್ಲಿನ ನೀರಿನ ಮಟ್ಟ ಗರಿಷ್ಠ 124.80 ಅಡಿ ತಲುಪಿದೆ ಎಂದು ತಿಳಿದುಬಂದಿದೆ.

ಗುರುವಾರ ಬೆಳಿಗ್ಗೆಯೇ ಜಲಾಶಯ ಗರಿಷ್ಠ 124.80 ಅಡಿ ತಲುಪಿದ್ದು, ಕೊಡಗು ಜಿಲ್ಲೆಯ ಪ್ರವಾಹದಿಂದಾಗಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಅಂತೆಯೇ ಹೇಮಾವತಿ ಜಲಾಶಯದಿಂದಲೂ ನೀರು ಹರಿಸಿದ ಕಾರಣ ಒಂದು ವಾರದಲ್ಲಿ ಜಲಾಶಯದ ಮಟ್ಟ 42 ಅಡಿ ಏರಿಕೆ ಕಂಡಿದೆ. ಗುರುವಾರ ಸಂಜೆ ಜಲಾಶಯ ಗರಿಷ್ಠ ಮಟ್ಟ ತಲುಪಿತ್ತು. ಮೂಲಗಳ ಪ್ರಕಾರ ಜಲಾಶಯಕ್ಕೆ 18,978 ಕ್ಯುಸೆಕ್‌ ಒಳಹರಿವು ಇದ್ದು, 16,220 ಕ್ಯುಸೆಕ್‌  ನೀರನ್ನು ಹೊರಗೆ ಹರಿಸಲಾಗುತ್ತಿದೆ.

ಇನ್ನು ಕಳೆದ ವರ್ಷ ಜುಲೈ 20ರಂದೇ  ಜಲಾಶಯ ಭರ್ತಿಯಾಗಿತ್ತು. ಮುಂದಿನ ವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com