ರಾಜ್ಯದಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ: ರಾ ಅಧಿಕಾರಿಗಳಿಂದ ವ್ಯಕ್ತಿಯ ವಿಚಾರಣೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ದೂರವಾಣಿ ಕರೆ ಮಾಡಿರುವ ಶಂಕೆಯ ಮೇಲೆ ವ್ಯಕ್ತಿಯೊಬ್ಬನನ್ನು ಅನಾಲಿಸಿಸ್ ವಿಂಗ್(ರಾ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ದೂರವಾಣಿ ಕರೆ ಮಾಡಿರುವ ಶಂಕೆಯ ಮೇಲೆ ವ್ಯಕ್ತಿಯೊಬ್ಬನನ್ನು ಅನಾಲಿಸಿಸ್ ವಿಂಗ್(ರಾ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅರಬ್ ನಾಡಿನ ಸುರಯ್ಯ ಎಂಬ ನೆಟ್‍ವರ್ಕ್ ಕಂಪನಿಗೆ ಸೇರಿದ ಸ್ಯಾಟಲೈಟ್ ಸೇವೆಯ ಮೂಲಕ ಬೆಳ್ತಂಗಡಿ ಮೂಲದ ವ್ಯಕ್ತಿ ಕಳೆದ ವಾರ ಪಾಕಿಸ್ತಾನಕ್ಕೆ ಕರೆ ಮಾಡಿರುವುದನ್ನು ರಾ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಕರೆ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

2008ರಲ್ಲಿ ಮುಂಬೈನಲ್ಲಿ ಉಗ್ರರ ದಾಳಿ ನಡೆದ ನಂತರ ಸುರಯ್ಯ ಸ್ಯಾಟಲೈಟ್ ಅಂತರ್ಜಾಲ ಸಂಪರ್ಕ ನಿಷೇಧಿಸಲಾಗಿತ್ತು. ಅಂದಿನಿಂದಲೂ ಈ ನೆಟ್‍ವರ್ಕ್ ಮೇಲೆ ರಾ ಸಂಸ್ಥೆ ನಿರಂತರ ನಿಗಾ ವಹಿಸಿತ್ತು. ಈ ವೇಳೆ ನಿಷೇಧಿತ ನೆಟ್‍ವರ್ಕ್‍ನಿಂದ ಪಾಕಿಸ್ತಾನಕ್ಕೆ ಕೆಲವು ಕರೆಗಳು ಹೋಗಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಆದರೆ ವಿಚಾರಣೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com