ಹೊಸಪೇಟೆ: ಅನರ್ಹ ಶಾಸಕ  ಆನಂದ್ ಸಿಂಗ್ ಪುತ್ರನ ಅದ್ದೂರಿ ವಿವಾಹ

ಅನರ್ಹ ಶಾಸಕ, ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರ ಪುತ್ರ ಸಿದ್ದಾರ್ಥ ಹಾಗೂ ಉದ್ಯಮಿ ಪ್ರಭು ಸಬರದ ಅವರ ಮಗಳು ಸಂಜನಾ ಅವರ ವೈಭವೋಪೇತ ವಿವಾಹ ನಡೆದಿದ್ದು, ಜನಸಾಗರವೇ ಹರಿದು ಬರುತ್ತಿದೆ.

Published: 01st December 2019 12:36 PM  |   Last Updated: 01st December 2019 12:39 PM   |  A+A-


iddarthsGrandWedding

ಸಿದ್ದಾರ್ಥ್ ವಿವಾಹ

Posted By : Nagaraja AB
Source : Online Desk

ಹೊಸಪೇಟೆ: ಅನರ್ಹ ಶಾಸಕ, ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರ ಪುತ್ರ ಸಿದ್ದಾರ್ಥ ಹಾಗೂ ಉದ್ಯಮಿ ಪ್ರಭು ಸಬರದ ಅವರ ಮಗಳು ಸಂಜನಾ ಅವರ ವೈಭವೋಪೇತ ವಿವಾಹ ನಡೆದಿದ್ದು, ಜನಸಾಗರವೇ ಹರಿದು ಬಂದಿದೆ.

ಆನಂದ್ ಸಿಂಗ್ ಅವರ ಭವ್ಯ ಬಂಗಲೆಯ ಹಿಂಭಾಗದಲ್ಲಿನ 10 ಎಕರೆ ಪ್ರದೇಶದಲ್ಲಿ ಶಾಮಿಯಾನ ಹಾಕಲಾಗಿದ್ದು, ತಿರುಮಲ ತಿರುಪತಿಗೆ ಹೋಲುವ ಅದ್ದೂರಿ ಸೆಟ್ ಹಾಕಲಾಗಿದ್ದು, ಎಲ್ಲರ ಕಣ್ಣು ಕುಕ್ಕುವಂತಿದೆ. ರಜಪೂತ ಸಂಪ್ರದಾಯದಂತೆ ಸಿದ್ದಾರ್ಥ, ವಧು ಸಂಜನಾ ಅವರಿಗೆ ತಾಳಿ ಕಟ್ಟುವ ಕಾರ್ಯಕ್ರಮ ನೆರವೇರಿತು.

ಸುಮಾರು 50 ಸಾವಿರ ಜನರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಹಲವು ಗಣ್ಯರು ಬಂದು ನೂತನ ವಧು ವರನನ್ನು ಆಶೀರ್ವದಿಸಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದ್ದು, ಪ್ರತಿಯೊಂದನ್ನು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾರೆ.

Stay up to date on all the latest ರಾಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp