ರಾಷ್ಟ್ರಗೀತೆ ಹಾಡಿ ಪ್ರತಿಭಟನಕಾರರ ಮನಗೆದ್ದ ಡಿಸಿಪಿ ಚೇತನ್ ರಾಥೋಡ್; ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರ

ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಪ್ರತಿಭಟನೆಯನ್ನು ತಣ್ಣಗಾಗಿಸುವಲ್ಲಿ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್ ರಾಥೋಡ್ ಯಶಸ್ವಿಯಾಗಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಅಧಿಕಾರಿಯ ಜಾಣತನಕ್ಕೆ ಎಲ್ಲೆಡೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.
ಡಿಸಿಪಿ ಚೇತನ್ ರಾಥೋಡ್
ಡಿಸಿಪಿ ಚೇತನ್ ರಾಥೋಡ್

ಬೆಂಗಳೂರು:  ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಪ್ರತಿಭಟನೆಯನ್ನು ತಣ್ಣಗಾಗಿಸುವಲ್ಲಿ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್ ರಾಥೋಡ್ ಯಶಸ್ವಿಯಾಗಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಅಧಿಕಾರಿಯ ಜಾಣತನಕ್ಕೆ ಎಲ್ಲೆಡೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.

ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು ಮಂಗಳೂರು ಸೇರಿದಂತೆ ಕೆಲವೆಡೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಕೆಲವೆಡೆ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕಲು ಲಾಠಿ ಪ್ರಹಾರ ಆಶ್ರುವಾಯುಪ್ರಯೋಗ ಬಂಧನದ ರುಚಿ‌ತೋರಿಸಿದರೆ ಚೇತನ್ ರಾಥೋಡ್ ಮಾತ್ರ ವಿಭಿನ್ನವಾಗಿ ಶಾಂತಿಯುತವಾಗಿ ಪ್ರತಿಭಟನಕಾರರ ಮನಗೆದ್ದು, ಅವರನ್ನು ಸಮಾಧಾನದಿಂದಲೇ ಕಳುಹಿಸಿಕೊಟ್ಟಿದ್ದಾರೆ.

ಶುಕ್ರವಾರ ಬೆಳಿಗ್ಗೆ ನಗರದ ಕಮರ್ಷಿಕಲ್ ಕಾಂಪ್ಲೆಕ್ಸ್ ಸಮೀಪ ನಿಷೇಧಾಜ್ಞೆಯನ್ನೂ ಲೆಕ್ಕಿಸದೇ ಕೆಲ ಪ್ರಗತಿಪರ ಸಂಘಟನೆಯವರು, ಮುಸ್ಲಿಂ ವರ್ತಕರು ಪ್ರತಿಭಟನೆಗೆ ಮುಂದಾಗಿದ್ದರು.ಆಗ ‌ಡಿಸಿಪಿ ಚೇತನ್ ಅವರು ಪ್ರತಿಭಟನಕಾರರೊಂದಿಗೆ ಪ್ರೀತಿಯಿಂದ ಹಿಂದಿಯಲ್ಲಿ ಮಾತನಾಡಿ, "ನಾನು ಹೇಳುವುದನ್ನು ಗಮನವಿಟ್ಟು ಕೇಳಿ. ನಿಮಗೆ ತೊಂದರೆ ಕೊಡಲೆಂದು ನಾನು ಇಲ್ಲಿ ಬಂದಿಲ್ಲ. ನಿಮ್ಮಗಳ ಮಧ್ಯೆಯೇ ಯಾರಾದ್ರೂ ನಮಗೆ ನಿಮಗೆ ಗೊತ್ತಿಲ್ಲದಂತೆಯೇ ದುರುಳ ದೇಶದ್ರೋಹಿ ಇರಬಹುದು. ಆದರೆ ಅವನು ಯಾರೆಂದು ಪತ್ತೆ ಹಚ್ಚಬೇಕಷ್ಟೆ. ಶಾಂತವಾಗಿರಿ. ನನ್ನ ಹಾಡು ಕೇಳಿ ಎಂದು ಜನಗಣಮನ ರಾಷ್ಟ್ರಗೀತೆ ಹಾಡಲಾರಂಭಿಸಿದರು." ಆಗ ಎಲ್ಲಾ ಪ್ರತಿಭಟನಕಾರರು ಸಹ ಎದ್ದು ನಿಂತು ರಾಥೋಡ್ ಜೊತೆಗೂಡಿ ಜನಣಮನ ಹಾಡಿದರು.

ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಬೆಂಗಳೂರಲ್ಲಿ ಗುರುವಾರ 244 ಜನರನ್ನು ಬಂಧಿಸಲಾಗಿದೆ. 8 ಎಫ್‍ಐಆರ್ ದಾಕಲಾಗಿದ್ದು ಇಂದೂ ಸಹ ಕೆಲ ಜನರು ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು ಇದಕ್ಕಾಗಿ ಹೆಚ್ಚಿನ ಪೋಲೀಸ್ ಭದ್ರತೆ ಹಮ್ಮಿಕೊಳ್ಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com