ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನ:  ಸ್ವಾಮಿ ವಿವೇಕಾನಂದಗೆ ಪುಷ್ಪ ನಮನ

ಗಣರಾಜ್ಯೋತ್ಸವದ ಅಂಗವಾಗಿ ಲಾಲ್ ಬಾಗಿನ ಗಾಜಿನ ಮನೆಯಲ್ಲಿ ಜ.17 ರಿಂದ 26ರ ವರೆಗೆ  ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಈ ಬಾರಿ ಸ್ವಾಮಿ ವಿವೇಕಾನಂದರಿಗೆ ಪ್ರದರ್ಶನವನ್ನು ಅರ್ಪಿಸಲಾಗಿದೆ.

Published: 23rd December 2019 01:19 PM  |   Last Updated: 23rd December 2019 01:19 PM   |  A+A-


Vivekananda (File Image)

ವಿವೇಕಾನಂದ(ಸಂಗ್ರಹ ಚಿತ್ರ)

Posted By : Shilpa D
Source : The New Indian Express

ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಲಾಲ್ ಬಾಗಿನ ಗಾಜಿನ ಮನೆಯಲ್ಲಿ ಜ.17 ರಿಂದ 26ರ ವರೆಗೆ  ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಈ ಬಾರಿ ಸ್ವಾಮಿ ವಿವೇಕಾನಂದರಿಗೆ ಪ್ರದರ್ಶನವನ್ನು ಅರ್ಪಿಸಲಾಗಿದೆ.

ಅಮೆರಿಕದ ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಂಸತ್‌ನಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣಕ್ಕೆ 126 ವರ್ಷ ಸಲ್ಲುತ್ತಿದೆ. ಇದರ ಸವಿನೆನಪಿಗಾಗಿ ಸ್ವಾಮಿ ವಿವೇಕಾನಂದರ ಹೂವಿನ ಆಕರ್ಷಕ ಪ್ರತಿಮೆಯನ್ನು ನಿರ್ಮಿಸುವ ಮೂಲಕ ಸ್ವಾಮಿ ವಿವೇಕಾನಂದರು ಮತ್ತು ಅವರ ಚಿಂತನೆಗಳನ್ನು ಲಾಲ್‌ಬಾಗ್‌ನಲ್ಲಿ ಪ್ರತಿನಿಧಿಸಲು ನಿರ್ಧರಿಸಲಾಗಿದೆ.

ಸ್ವಾಮಿ ವಿವೇಕಾನಂದರ ತತ್ವ, ಸಿದ್ಧಾಂತಗಳನ್ನು ಬಣ್ಣ ಬಣ್ಣದ ಪುಷ್ಪಗಳಿಂದ ಯುವ ಸಮೂಹ ಹಾಗೂ ಸಮಾಜಕ್ಕೆ ತಿಳಿಸಲು ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘಗಳು ಮುಂದಾಗಿವೆ. 19 ಅಡಿ ಉದ್ದದ ವಿವೇಕಾನಂದರ ಪುಷ್ಪ ಪ್ರತಿಮೆ ನಿರ್ಮಿಸಲಿದೆ.

ವಿವೇಕಾನಂದರ ಜೀವನ ಕುರಿತಂತೆ ಸಂಪೂರ್ಣ ಇತಿಹಾಸವನ್ನು ಪ್ರದರ್ಶನದಲ್ಲಿ ಅಳವಡಿಸಲಾಗುವುದು. ಅವರ ಜೀವನ ಕುರಿತ ಹೆಚ್ಚಿನ ಮಾಹಿತಿಯನ್ನು ರಾಮಕೃಷ್ಣ ಮಿಷನ್‌ನಿಂದ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ವಿವೇಕಾನಂದರ ಬಾಲ್ಯದ ಜೀವನ, ಶಿಕ್ಷಣ ಮತ್ತು ಧಾರ್ಮಿಕ ಸೇವೆ ಕುರಿತಂತೆ ಮಾಹಿತಿ ಪಡೆದು ಮಿಷನ್‌ನ ಸಲಹೆಯಂತೆ ಪ್ರದರ್ಶನ ಆಯೋಜಿಸಲಾಗುವುದು.

ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಸ್ಮಾರಕ ಶಿಲಾ ಬಂಡೆಯ ಮೇಲೆ ಸ್ವಾಮಿ ವಿವೇಕಾನಂದರು ನಿಂತಿರುವ ದೃಶ್ಯ ಅತ್ಯಂತ ಆಕರ್ಷಣೀಯವಾಗಿದ್ದು, ಅದೇ ಮಾದರಿಯಲ್ಲಿ ಲಪುಷ್ಪ ಪ್ರದರ್ಶನದಲ್ಲಿ ಈ ಸ್ಮಾರಕವನ್ನು ನಿರ್ಮಿಸಲು ಆಯೋಜಕರು ನಿರ್ಧರಿಸಿದ್ದಾರೆ. ಇದರೊಂದಿಗೆ ಮಕ್ಕಳಿಗಾಗಿ ಸಂಗೀತ ಪರಿಕರ, ಪಕ್ಷಿಗಳ ಆಕರ್ಷಣೆ ಇತ್ಯಾದಿಗಳು ಗಮನ ಸೆಳೆಯಲಿವೆ.
 

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp