ಮಂಗಳೂರು ಗಲಭೆ ಪೂರ್ವ ಯೋಜಿತ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ 

ಮಂಗಳೂರು ಗಲಭೆ ಪೂರ್ವ ಯೋಜಿತವೇ? ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರ ಪ್ರಕಾರ ಹೌದು, ಗಲಭೆಗೆ ಮುನ್ನ ಸಾಕಷ್ಟು ಯೋಜನೆ ಹಾಕಿಕೊಂಡು ಕೇರಳದಿಂದ ಜನರನ್ನು ಕರೆದುಕೊಂಡು ಬಂದು ಪಿತೂರಿ ನಡೆಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ಮಂಗಳೂರು ಗಲಭೆ ಪೂರ್ವ ಯೋಜಿತವೇ? ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರ ಪ್ರಕಾರ ಹೌದು, ಗಲಭೆಗೆ ಮುನ್ನ ಸಾಕಷ್ಟು ಯೋಜನೆ ಹಾಕಿಕೊಂಡು ಕೇರಳದಿಂದ ಜನರನ್ನು ಕರೆದುಕೊಂಡು ಬಂದು ಪಿತೂರಿ ನಡೆಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.


ತಮ್ಮ ಹೇಳಿಕೆಗೆ ಪೂರಕವಾಗಿ ಬೊಮ್ಮಾಯಿಯವರು ಪೊಲೀಸರು ಬಿಡುಗಡೆ ಮಾಡಿರುವ ವಿಡಿಯೊ ತೋರಿಸುತ್ತಾರೆ. ಗಲಭೆಕೋರರು ಕಲ್ಲುಗಳನ್ನು ಗೂಡ್ಸ್ ರಿಕ್ಷಾದಲ್ಲಿ ತಂದು ತಮ್ಮ ಮುಖಗಳಿಗೆ ಮುಖವಾಡ ಹಾಕಿಕೊಂಡು ಸಿಸಿಟಿವಿ ಕ್ಯಾಮರಾಗಳಿಗೆ ಹಾನಿ ಮಾಡಿ ನಿರ್ಮಾಣ ಸ್ಥಳದಿಂದ ಇಟ್ಟಿಗೆಗಳನ್ನು ತಂದು ಆಸ್ಪತ್ರೆ ಆವರಣದಿಂದ ಕಲ್ಲು ತೂರಾಟ ಮಾಡಿದ್ದಾರೆ. ಮೊಲೊಟೊವ್ ಕಾಕ್ಟೈಲ್ ಗಳನ್ನು ಬಳಸಿದ್ದಾರೆ. ಇವುಗಳನ್ನೆಲ್ಲಾ ನೋಡಿದರೆ ಈ ಗಲಭೆ ಮಾಡಲು ಎರಡು-ಮೂರು ದಿನ ಹಿಂದೆಯೇ ಯೋಜನೆ ನಡೆಸಿದ್ದರು ಎಂಬುದು ಗೊತ್ತಾಗುತ್ತದೆ ಎಂದರು.


ಕೆಲ ವರ್ಷಗಳ ಹಿಂದೆ ಕೊಡಗಿನಲ್ಲಿ ಟಿಪ್ಪು ವಿರೋಧಿ ಪ್ರತಿಭಟನೆ, ಗಲಭೆ ನಡೆದ ವೇಳೆ ಬಿಜೆಪಿ ಆಗ ವಿರೋಧ ಪಕ್ಷದ ಸ್ಥಾನದಲ್ಲಿತ್ತು. ಆಗ ಸಹ ಗಲಭೆ ನಡೆಸಿದವರು ಕೇರಳದಿಂದ ಬಂದವರು ಎಂದು ಬಿಜೆಪಿ ಆರೋಪಿಸಿತ್ತು. ಓರ್ವ ಮೃತಪಟ್ಟಿದ್ದರು. ಹಿಂಸೆ ನಡೆಸಿರುವ ಸಾಕ್ಷಿ ಇರುವಾಗ ಪೊಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರು ಮುಗ್ಧರು ಎಂದು ಹೇಗೆ ಹೇಳುತ್ತೀರಿ ಎಂದು ಬೊಮ್ಮಾಯಿ ಕೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com