ಬೆಂಗಳೂರು: ಗ್ರಹಣದ ವೇಳೆ ಉಪಾಹಾರ ಆಯೋಜಿಸಿದ ಮೂಢನಂಬಿಕೆ ವಿರೋಧಿ ಒಕ್ಕೂಟ

ಪೌರತ್ವ ಕಾಯ್ದೆ ವಿರುದ್ಧದ ಹೋರಾಟಕ್ಕೆ ಸಾಕ್ಷಿಯಾಗಿದ್ದ ಟೌನ್ ಹಾಲ್ ಬಳಿ ಗುರುವಾರ ವಿಭಿನ್ನ ಹೋರಾಟವೊಂದನ್ನು ನಡೆಸಲಾಗಿದೆ. ಸೂರ್ಯಗ್ರಹಣದ ವೇಳೆ ಜನರಲ್ಲಿನ ಮೂಢನಂಬಿಕೆಯನ್ನು ಹೋಗಲಾಡಿಸಲು ಮೂಢನಂಬಿಕೆ ವಿರೋಧಿ ಒಕ್ಕೂಟ ಉಪಾಹಾರ ಆಯೋಜಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪೌರತ್ವ ಕಾಯ್ದೆ ವಿರುದ್ಧದ ಹೋರಾಟಕ್ಕೆ ಸಾಕ್ಷಿಯಾಗಿದ್ದ ಟೌನ್ ಹಾಲ್ ಬಳಿ ಗುರುವಾರ ವಿಭಿನ್ನ ಹೋರಾಟವೊಂದನ್ನು ನಡೆಸಲಾಗಿದೆ. ಸೂರ್ಯಗ್ರಹಣದ ವೇಳೆ ಜನರಲ್ಲಿನ ಮೂಢನಂಬಿಕೆಯನ್ನು ಹೋಗಲಾಡಿಸಲು ಮೂಢನಂಬಿಕೆ ವಿರೋಧಿ ಒಕ್ಕೂಟ ಉಪಾಹಾರ ಆಯೋಜಿಸಿದೆ. 

ನೈಸರ್ಗಿಕವಾಗಿ ಆಗುವಂಹತ ಸೂರ್ಯಗ್ರಹಣದ ಕುರಿತು ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಹಣ್ಣು, ಚುರುಮುರಿ, ಬಿಸಿಬೇಳೆ ಬಾತ್, ಇಡ್ಲಿ, ವಡೆ ಸಮೋಸವನ್ನು ನೀಡಲಾಗುತ್ತಿದೆ. 

ಈ ನಡುವೆ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಗ್ರಹಣದ ವೇಳೆ ಎಲ್ಲಾ ದೇಗುಲಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದಾರೆ. 1980ರ ವೇಳೆ ಸೂರ್ಯಗ್ರಹಣ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕ ರಜೆ ಘೋಷಣೆ ಮಾಡುತ್ತಿತ್ತು. ಇದೀಗ ಖಾಸಗಿ ಶಾಲೆಗಳು ಸೂರ್ಯಗ್ರಹಣ ಹಿನ್ನೆಲೆಯಲ್ಲಿ ತನ್ನ ವೇಳಾಪಟ್ಟಿಯನ್ನು ಬದಲಿಸಿಕೊಂಡಿದ್ದು, ಗ್ರಹಣ ಪೂರ್ಣಗೊಂಡ ಬಳಿಕ ಅಂದರೆ ಮಧ್ಯಾಹ್ನದ ವೇಳೆಗೆ ಶಾಲೆಗೆ ಬರುವಂತೆ ಮಕ್ಕಳಿಗೆ ಸೂಚಿಸಿವೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com