ಪ್ರತಿಮೆ ನಿರ್ಮಾಣ- ಓಲೈಕೆ ರಾಜಕಾರಣ: ಸುರೇಶ್ ಕುಮಾರ್

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಕನಕಪುರದಲ್ಲಿ ನಿರ್ಮಾಣ ಮಾಡಬೇಕೆಂದಿರುವ ಕ್ರಿಸ್ತ ಪ್ರತಿಮೆ ಬಗ್ಗೆ  ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.  ಇದೊಂದು ಓಲೈಕೆ ರಾಜಕಾರಣ ಎಂದು ಆರೋಪಿಸಿದ್ದಾರೆ.
ಎಸ್.ಸುರೇಶ್ ಕುಮಾರ್
ಎಸ್.ಸುರೇಶ್ ಕುಮಾರ್

ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಕನಕಪುರದಲ್ಲಿ ನಿರ್ಮಾಣ ಮಾಡಬೇಕೆಂದಿರುವ ಕ್ರಿಸ್ತ ಪ್ರತಿಮೆ ಬಗ್ಗೆ  ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.  ಇದೊಂದು ಓಲೈಕೆ ರಾಜಕಾರಣ ಎಂದು ಆರೋಪಿಸಿದ್ದಾರೆ.

ನ್ಯಾಯ ಎಲ್ಲರಿಗೂ ಒಂದೇ,  ಯಾರನ್ನೂ ಓಲೈಸುವ ಅವಶ್ಯಕತೆಯಿಲ್ಲ, ನಮ್ಮ ನಂಬಿಕೆ ಮತ್ತು ವಿಶ್ವಾಸ ಒಂದೇ ಆಗಿರುತ್ತದೆ. ಹಿಂದೂಗಳ ಪ್ರಮುಖ ಜಾಗ ಜೊತೆಗೆ ಗೋಮಾಳ ಭೂಮಿಯಲ್ಲಿ ಕ್ರಿಸ್ತ ಪ್ರತಿಮೆ ಸ್ಥಾಪಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಸಿಎಎ ಬಗ್ಗೆ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸರಿಯಾದ ರೀತಿಯಲ್ಲಿ ಬಿಜೆಪಿ ವ್ಯವಸ್ಥಿತ ಕೆಲಸ ಮಾಡಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಕುಮಾರ್, ಸಿಎಎ ನಮ್ಮ ಧರ್ಮಕ್ಕೆ ಮಾತ್ರ ಸಂಬಂಧಿಸಿದ್ದಾಗಿದೆ. ಪಾಕಿಸ್ತಾನದಲ್ಲಿ ರಕ್ಷಣೆ ಕಳೆದುಕೊಂಡ ನಮ್ಮವರಿಗೆ ಇಲ್ಲಿ ಸೂರು ಕಲ್ಪಿಸುವ ವ್ಯವಸ್ಥೆ ಇದಾಗಿದೆ.  ವಿರೋಧ ಪಕ್ಷದವರು ಜನರನ್ನು ಎತ್ತಿಕಟ್ಟಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com