ನರೇಗಾ ಯೋಜನೆ ಅಡಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ 1,800 ಕೋಟಿ ರೂ. ಬಾಕಿ!

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ದಡಿಯಲ್ಲಿ ಈ ವರ್ಷ ಕರ್ನಾಟಕ 10.5 ಕೋಟಿ ಕೆಲಸದ ಗಂಟೆಗಳ ದಾಖಲೆ ನಿರ್ಮಿಸಲು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ದಡಿಯಲ್ಲಿ ಈ ವರ್ಷ ಕರ್ನಾಟಕ  10.5 ಕೋಟಿ ಕೆಲಸದ ಗಂಟೆಗಳ ದಾಖಲೆ ನಿರ್ಮಿಸಲು ಕರ್ನಾಟಕ ಯೋಜಿಸಿದೆ. ಆದರೆ ಕೇಂದ್ರ ಸರ್ಕಾರ ಇದಾಗಲೇ ಬಾಕಿ ಉಳಿಸಿಕೊಂಡಿರುವ ಹಣ ಪಾವತಿಗೆ ಹಿಂದೇಟು ಹಾಕುತ್ತಿರುವುದು ಇದಕ್ಕೆ ಅಡ್ಡಿಯಾಗಿ ಪರಿಣಮಿಸಿದೆ. ಹಿಂದಿನ ವರ್ಷದ ಬಾಕಿ ಮತ್ತು ಈ ವರ್ಷದ ಬಾಕಿ ಉಳಿದಿರುವ ವೇತನ ಮತ್ತು ಬಿಲ್ ಗಳ ಪಾವತಿ ಸೇರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 1,800 ಕೋಟಿ ರೂ. ನೀಡಬೇಕಿದೆ.
ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮೌನ ತಾಳಿದ್ದು , ಗ್ರಾಮೀಣಾಭಿವೃದ್ಧಿ ಸಚಿವ ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೆ ಗೌಡ ಕೇಂದ್ರ ಬಜೆಟ್ನಲ್ಲಿ ಈ ಸಂಬಂಧ ಹಣ ನಿಗದಿಪಡಿಸುವ ಮೂಲಕ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿ ಪೂರೈಸಲಿಒದೆ ಎನ್ನುವುದು ಸಮಗ್ರ ಕರ್ನಾಟಕದ ಆಶಯ ಎಂದು ಹೇಳಿದ್ದಾರೆ.
"ಈ ಸಮಯದಲ್ಲಿ ನಾನು ಯಾವುದೇ ಅಚ್ಚೇ ದಿನ್ ಅಥವಾ ಯಾವುದೇ ದೊಡ್ಡ ಕೊಡುಗೆ ಸಿಗುವ ಭ್ರಮೆಯಲ್ಲಿಲ್ಲ" ಎಂದೂ ಅವತು ಹೇಳಿದ್ದು 2016 ರಲ್ಲಿ, ಕರ್ನಾಟಕ ಸರಕಾರವು 2,175 ಕೋಟಿ ರೂ. ಹಣವನ್ನು ಪಾವತಿಸಿದೆ. ಇದಕ್ಕೆ ಪೂರಕವಾಗಿ ಯೋಜನೆಯಡಿಯಲ್ಲಿ ಬರುವ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಹಣ ಪಾವತಿ ಮಾಡಬೇಕಿತ್ತು. ಕಳೆದ ಎರಡು ವರ್ಷಗಳಲ್ಲಿ ರಾಜ್ಯಕ್ಕೆ ಕೆಂದ್ರ 1,200 ಕೋಟಿ ರೂ.ಗಳನ್ನು ಮಾತ್ರ  ನಿಡಿದ್ದು ಇನ್ನೂ  935 ಕೋಟಿ ಬಾಕಿ ಇದೆ. ಈ ವರ್ಷವೇತನ ಹಾಗೂ ಬಿಲ್ ಗಳ ಲೆಕ್ಕದಲ್ಲಿ ಕೇಂದ್ರ ಸರ್ಕಾರ  850 ಕೋಟಿ ರೂ ನೀಡಬೇಕಿದೆ.ಇದು ಒಟ್ಟು ಪಾವತಿಯಾಗಿರುವ 1,800 ಕೋಟಿ ರೂ.ಗೆ ಸೇರ್ಪಡೆಯಾಗಲಿದೆ.
"ಯೋಜನೆಯಡಿಯಲ್ಲಿ ಬರುವ ಕಾರ್ಮಿಕರಿಗೆ ವೇತನ ಪಾವತಿ ಆಗಿಲ್ಲ ಏಕೆಂದರೆ ಕೇಂದ್ರ ಸರ್ಕಾರ  ಕೇಂದ್ರಬಜೆಟ್ ಹಂಚಿಕೆ ಹಣವನ್ನು ಡಿಸೆಂಬರ್ ಮುನ್ನವೇ ಖರ್ಚು ಮಾಡಿದೆ.ರೂ. 6,000 ಕೋಟಿಗಳ ಮರುಪಾವತಿಗಳನ್ನು ಈಗ ಮಾಡಲಾಗಿದೆ, ಆದರೆ ಇದು ಬಾಕಿ ಪಾವತಿಗೆ ಸಾಕಷ್ತಾಗದು. ಇನ್ನು ಫೆಬ್ರವರಿ-ಮಾರ್ಚ್ ತಿಂಗಳ ಬಿಲ್ ಫ಼್ಗಳ ಕಥೆ ಏನು? ಆರ್ ಡಿಪಿಆರ್ ಮೂಲಗಳು ಹೇಳಿದೆ.
ಈ ವರ್ಷ ನರೇಗಾ ಯೋಜನೆಯಡಿ ಕರ್ನಾಟಕದಲ್ಲಿ 8.5 ಕೆಲಸದ ದಿನಗಳ ಗುರಿ ಹಾಕಿಕೊಳ್ಲಲಾಗಿದೆ. ಇದು ಬರಗಾಲದ ಸಮಯವಾಗಿದೆ.ಹೀಗಾಗಿ ಇದನ್ನು 5-6 ಕೆಲಸದ ದಿನಗಳನ್ನಾಗಿ ಮಾಡಿ 10.5 ಕೋಟಿ ಕೆಲಸದ ದಿನಗಳನ್ನಾಗಿಸುವ ಯೋಜನೆ ಇದೆ. "ನಾವು ನಮ್ಮ ಪಾಲನ್ನು ನೀಡಲು ಸಿದ್ಧರಿದ್ದೇವೆ.ನಾವು ಅದನ್ನು ಹೊಂದಿದ್ದೇವೆ. ಆದರೆ ಕೇಂದ್ರ ಸರ್ಕಾರದ ಬಳಿ ಇದಕ್ಕಾಗಿ ಹಣವಿದೆಯೆ ಎನ್ನುವುದು ತಿಳಿದಿಲ್ಲ.ಕೇವಲ ಕಾರ್ಪೊರೇಟ್ ಸಾಲಗಳ ನೀಡುವುದಕ್ಕೆ ಮಾತ್ರವೇ ಕೇಂದ್ರದಲ್ಲಿ ಹಣ ಇದೆಯೆ?ಸಚಿವರು ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com