ಸರ್ದಾರ್ ಪಟೇಲ್ ರಲ್ಲಿ ನೋಡುತ್ತಿದ್ದ ವ್ಯಕ್ತಿತ್ವವನ್ನೇ ಜನ ಮೋದಿಯಲ್ಲಿ ಕಾಣುತ್ತಿದ್ದಾರೆ: ಯಡಿಯೂರಪ್ಪ

ಸರ್ದಾರ್ ಪಟೇಲ್ ರಲ್ಲಿ ನೋಡುತ್ತಿದ್ದ ವ್ಯಕ್ತಿತ್ವವನ್ನೇ ಜನ ಮೋದಿಯಲ್ಲಿ ಕಾಣುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

Published: 10th February 2019 12:00 PM  |   Last Updated: 10th February 2019 07:39 AM   |  A+A-


People look at Sardar Patel's personality in Modi: Yeddyurappa

ಸರ್ದಾರ್ ಪಟೇಲ್ ರಲ್ಲಿ ನೋಡುತ್ತಿದ್ದ ವ್ಯಕ್ತಿತ್ವವನ್ನೇ ಜನ ಮೋದಿಯಲ್ಲಿ ಕಾಣುತ್ತಿದ್ದಾರೆ: ಯಡಿಯೂರಪ್ಪ

Posted By : RHN RHN
Source : Online Desk
ಹುಬ್ಬಳ್ಳಿ: ಸರ್ದಾರ್ ಪಟೇಲ್ ರಲ್ಲಿ ನೋಡುತ್ತಿದ್ದ ವ್ಯಕ್ತಿತ್ವವನ್ನೇ ಜನ ಮೋದಿಯಲ್ಲಿ ಕಾಣುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

ಪ್ರಧಾನಿ ಮೋದಿ ಇಂದು ಹುಬ್ಬಳ್ಳಿಗೆ ಆಗಮಿಸಿ ಇಲ್ಲಿನ ಕೆ.ಎಲ್.ಇ ಕಾಲೇಜು ಮೈದಾನದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಈ ವೇಳೆ ಮಾತನಾಡಿದ ಯಡಿಯೂರಪ್ಪ ಮೋದಿ ಅವರಿಗೆ ಸರಿಸಾಟಿ ಇರುವ ನಾಯಕ ದೇಶದಲ್ಲಿ ಇನ್ನೊಬ್ಬರಿಲ್ಲ ಎಂದರು.

ರೈತರ ಖಾತೆಗೆ ಹಣ ಸೇರಿ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ ಹಲವು ಯೋಜನೆಗಳನ್ನು ಯಡಿಯೂರಪ್ಪ ಪ್ರಸ್ತಾಪಿಸಿ ಮೋದಿಯನ್ನು ಹೊಗಳಿದ್ದಾರೆ.

ಇದೇ ವೇಳೆ ಕುಮಾರಸ್ವಮಿ ಸಮ್ಮಿಶ್ರ ಸರ್ಕಾರವನ್ನು ಟೀಕಿಸಿದ ಯಡಿಯೂರಪ್ಪ "ರಾಜ್ಯದ ಪ್ರತಿ ನಾಗರಿಕರ ಮೇಲೆ ಈ ಸರ್ಕಾರ ಐವತ್ತು ಸರ್ಕಾರ ರು. ಸಾಲ ಹೇರಿಕೆ ಮಾಡಿದೆ. ರೈತರ ಸಾಲ ಮನ್ನಾ ಮಾಡುವೆನೆಂದು ಹೇಳುತ್ತಲೇ ಅವರು ಆರು ತಿಂಗಳಿಗೆ ಹೆಚ್ಚು ಕಾಲ ತಳ್ಳುತ್ತಾ ಬಂದಿದ್ದಾರೆ" ಎಂದರು.

ಮೋದಿ ಭಾಷಣ ಕೇಳಲು ಮೈದಾನದ ತುಂಬಾ ಲಕ್ಷ ಲಕ್ಷ ಸಂಖ್ಯೆಯ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಸೇರಿರುವುದು ಕಂಡು ಬಂದಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp