ತುಮಕೂರು: ಬಾಳೆಹಣ್ಣು ನೀಡಿದ ಯುವಕನ ತಲೆಯನ್ನೇ ಜಗಿದ ಮದಗಜ!

ದೇವಸ್ಥಾನವೊಂದರಲ್ಲಿ ಆನೆಯೊಂದಕ್ಕೆ ಬಾಳೆಹಣ್ಣು ನೀಡಿ ಆಶೀರ್ವಾದ ಪಡೆಯಲು ಹೋದಾಗ ಆನೆ ಯುವಕನೊಬ್ಬನ ತಲೆಯನ್ನೇ ಜಗಿದು ಗಾಯಗೊಳಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು: ಬಾಳೆಹಣ್ಣು ನೀಡಿದ ಯುವಕನ ತಲೆಯನ್ನೇ ಜಗಿದ ಮದಗಜ!
ತುಮಕೂರು: ಬಾಳೆಹಣ್ಣು ನೀಡಿದ ಯುವಕನ ತಲೆಯನ್ನೇ ಜಗಿದ ಮದಗಜ!
ತುಮಕೂರು:  ದೇವಸ್ಥಾನವೊಂದರಲ್ಲಿ ಆನೆಯೊಂದಕ್ಕೆ ಬಾಳೆಹಣ್ಣು ನೀಡಿ ಆಶೀರ್ವಾದ ಪಡೆಯಲು ಹೋದಾಗ ಆನೆ ಯುವಕನೊಬ್ಬನ ತಲೆಯನ್ನೇ ಜಗಿದು ಗಾಯಗೊಳಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ವಿಜಯಕುಮಾರ್ (20) ಎಂಬ ಯುವಕ ಆನೆಯ ಕೋಪಕ್ಕೆ ತುತ್ತ್ದ ದುರ್ದೈವಿ. ಈತ ಶುಕರವಾರ ತುಮಕೂರು ತಾಲೂಕಿನ ಕೋರಾ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದಾಗ ಆನೆಗೆ ಬಾಳೆಹಣ್ಣು ನೀಡಿ ಆಶೀರ್ವಾದ ಪಡೆಯಲು ಮುಂದಾಗಿದ್ದ. ಆಗ ಆನೆ ಸೊಂಡಿಲಿನಲ್ಲಿ ಬಾಳೆಹಣ್ಣು ಸ್ವೀಕರಿ ಬಳಿಕ ಏಕಾಏಕಿ ವಿಜಯಕುಮಾರ್ ತಲೆ ಸಹಿತ ಬಾಯಿಗಿಟ್ಟು ಜಗಿದಿದೆ. ಪರಿಣಾಮ ವಿಜಯಕುಮಾರ ತಲೆಗೆ ಗಂಭೀರೆಅ ಗಾಯವಾಗಿರುವುದಲ್ಲದೆ ಕಿವಿ ಮೂಗು ಕಣ್ಣಿನಿಂದ ರಕ್ತ ಸ್ರಾವವಾಗಿದೆ.
ಸರ್ಕಸ್ ಸಂಸ್ಥೆಯೊಂದರಿಂದ ತರಲಾಗಿದ್ದ ಈ ಆನೆ ಏಕಾಏಕಿ ಮದವೇರಿದ ಕಾರಣ ಈ ರೀತಿ ಮಾಡಿದೆ ಎನ್ನಲಾಗಿದೆ.ಎರಡು ಬಾರಿ ಆತನ ತಲೆಯನ್ನು ಜಗಿದ ಆನೆ ಬಳಿಕ ಆತನನ್ನು ಸೊಂಡಿಲಿನಿಂದ ಎತ್ತಿ ದೂರಕ್ಕೆ ಎಸೆದಿದೆ. ಗಾಯಾಳು ಯುವಕನನ್ನು ತುಮಕೂರಿನ ಸಿದ್ದಗಂಗಾ ಮಠದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು
ಆನೆಯನ್ನು ಶೆಡ್ ನಲ್ಲಿ ಸರಪಣಿಯಿಂದ ಕಟ್ಟಿದ್ದರಿಂದ ಶೆಡ್ ಬಿಟ್ಟು ಬರಲು ಅದಕ್ಕೆ ಸಾಧ್ಯವಾಗಿರಲಿಲ್ಲ. ಅಲ್ಲದಿದ್ದರೆ ಆನೆ ಮತ್ತಷ್ಟು ದಾಳಿ ಮಾಡಲು ಅವಕಾಶವಿತ್ತು ಎಂದು ಹೇಳಲಾಗಿದೆ.
ಮೂರು ತಿಂಗಳುಗಳ ಹಿಂದೆ, ಪ್ರಭಾತ್ ಸರ್ಕಸ್ ಕಂಪೆನಿಯ ಮಾಲೀಕ ಸಂತೋಷ್ ಈ ಆನೆಯನ್ನು ದೇವರಿಗೆ ದಾನ ಮಾಡಿದ್ದರು.
ಘಟನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.ಇಲಾಖೆಯಿಂದ ವರದಿಯೊಂದನ್ನು ಪಡೆದ ಬಳಿಕ ಅವರು ಎಫ್ಐಆರ್ ದಾಖಲಿಸುವರು ಎಂದು ಪೋಲೀಸರು ಪತ್ರಿಕೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com