ಪುಲ್ವಾಮಾ ದಾಳಿಗೆ ಕಾರಣರಾದ ಉಗ್ರರನ್ನು ಬಿಡಬೇಡಿ; ಹುತಾತ್ಮ ಯೋಧ ಗುರುವಿನ ಪತ್ನಿ ಕಲಾವತಿ

ಭಾರತೀಯ ವಾಯುಪಡೆ ಜೈಶ್ ಎ ಮೊಹಮ್ಮದ್ ಸಂಘಟನೆಯ ಪಾಕಿಸ್ತಾನದ ಬಲಕೋಟ್ ನಲ್ಲಿರುವ ತಾಣದ...

Published: 27th February 2019 12:00 PM  |   Last Updated: 27th February 2019 09:26 AM   |  A+A-


Martyr soldier Guru and wife Kalavati

ಹುತಾತ್ಮ ಯೋಧ ಗುರು ಮತ್ತು ಪತ್ನಿ ಕಲಾವತಿ

Posted By : SUD SUD
Source : The New Indian Express
ಮಂಡ್ಯ: ಭಾರತೀಯ ವಾಯುಪಡೆ ಜೈಶ್ ಎ ಮೊಹಮ್ಮದ್ ಸಂಘಟನೆಯ ಪಾಕಿಸ್ತಾನದ ಬಲಕೋಟ್ ನಲ್ಲಿರುವ ತಾಣದ ಮೇಲೆ ದಾಳಿ ನಡೆಸಿ ನೂರಾರು ಉಗ್ರರನ್ನು ಹೊಡೆದುರುಳಿಸಿದ ಕ್ರಮವನ್ನು ಮಂಡ್ಯ ಜಿಲ್ಲೆಯ ಹುತಾತ್ಮ ಯೋಧ ಗುರುವಿನ ಪತ್ನಿ ಕಲಾವತಿ ಕೊಂಡಾಡಿದ್ದಾರೆ.

ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತಮ್ಮ ಭಾವನೆಗಳನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಭಾರತೀಯ ಸೇನಾಪಡೆಗೆ ಸೆಲ್ಯೂಟ್ ಮಾಡುತ್ತಾ, ತಪ್ಪಿತಸ್ಫರನ್ನು ಯಾರನ್ನೂ ಬಿಡಬಾರದು, ಪ್ರತಿಯೊಬ್ಬ ಉಗ್ರನನ್ನೂ ಕೊಂದು ಹಾಕಬೇಕು. ಸೇನೆಗೆ ಬೇಕಾದ ಎಲ್ಲಾ ನೆರವು ನೀಡಬೇಕೆಂದರು.

ಗುರುವಿನ ತಂದೆ ಹೊನ್ನಯ್ಯ ಮಾತನಾಡಿ, ಉಗ್ರರನ್ನು ನಾಶ ಮಾಡಿದರಷ್ಟೇ ತಮ್ಮ ಮಗನ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ. ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆಗೆ ಇದು ಸಮಯವಲ್ಲ, ನಮ್ಮ ಸೈನಿಕರನ್ನು ಕೊಂದವರನ್ನು ಸುಮ್ಮನೆ ಬಿಡಬಾರದು ಎಂದು ಹೇಳಿದರು.

ಗುರು ಹುತಾತ್ಮನಾಗಿ 11 ದಿನಗಳು ಕಳೆದ ಶಾಸ್ತ್ರವಾಗಿ ಕುಟುಂಬಸ್ಥರು ಮೆಲ್ಲಹಳ್ಳಿ ಗ್ರಾಮದಲ್ಲಿ ಸೇರಿ ಕ್ರಿಯೆಗಳನ್ನು ನೆರವೇರಿಸಿದರು. ಹೊನ್ನಯ್ಯ ಮತ್ತು ಗುರುವಿನ ಸೋದರರು ಶಾಸ್ತ್ರ ನೆರವೇರಿಸಿದರು. ಸಾವಿರಕ್ಕೂ ಹೆಚ್ಚು ಜನಕ್ಕೆ ಭೋಜನ ಏರ್ಪಡಿಸಲಾಗಿತ್ತು.

ಈ ಕ್ರಿಯೆಯ ಉಸ್ತುವಾರಿಯನ್ನು ಸಾರಿಗೆ ಸಚಿವ ಡಿ ತಮ್ಮಣ್ಣ ವಹಿಸಿಕೊಂಡಿದ್ದರು.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp