ದಕ್ಷಿಣ ಏಷ್ಯಾ ಡಿಎಸ್​ಸಿ ಪ್ರಶಸ್ತಿಗೆ ಭಾಜನರಾದ ಕನ್ನಡದ ಕವಿ ಜಯಂತ್​ ಕಾಯ್ಕಿಣಿ

ದಕ್ಷಿಣ ಏಷ್ಯಾ ಡಿಎಸ್​ಸಿ ಪ್ರತಿಷ್ಠಿತ ಪ್ರಶಸ್ತಿಗೆ ಕನ್ನಡದ ಕವಿ, ಕತೆಗಾರ, ಲೇಖಕ ಜಯಂತ್​ ಕಾಯ್ಕಿಣಿ ಭಾಜನರಾಗಿದ್ದಾರೆ.

Published: 26th January 2019 12:00 PM  |   Last Updated: 26th January 2019 12:17 PM   |  A+A-


Jayant Kaikini

ಜಯಂತ್ ಕಾಯ್ಕಿಣಿ

Posted By : ABN ABN
Source : Online Desk
ಬೆಂಗಳೂರು: ದಕ್ಷಿಣ ಏಷ್ಯಾ ಡಿಎಸ್​ಸಿ ಪ್ರತಿಷ್ಠಿತ ಪ್ರಶಸ್ತಿಗೆ ಕನ್ನಡದ ಕವಿ, ಕತೆಗಾರ, ಲೇಖಕ ಜಯಂತ್​ ಕಾಯ್ಕಿಣಿ ಭಾಜನರಾಗಿದ್ದಾರೆ.

ಜಯಂತ್​ ಕಾಯ್ಕಿಣಿ ಅವರ ನೋ ಪ್ರೆಸೆಂಟ್ಸ್​​ ಪ್ಲೀಸ್​ (No Presents Please)ಕಥಾ ಸಂಕಲನಕ್ಕೆ ಈ ಪ್ರಶಸ್ತಿ ಸಿಕ್ಕಿದ್ದು, ತೇಜಸ್ವಿನಿ ನಿರಂಜನ್​ ಅವರು ಇಂಗ್ಲಿಷ್​ಗೆ ಭಾಷಾಂತರ ಮಾಡಿದ್ದರು.

ಪ್ರಶಸ್ತಿ 25000 ಯುಎಸ್​ ಡಾಲರ್​ನ್ನು ಒಳಗೊಂಡಿದೆ. ಪಾಕಿಸ್ತಾನ ಮೂಲದ ಕಮಿಲಾ ಶಮ್ಸೀಸ್​ ಅವರ ಹೋಮ್​ ಫೈರ್​ ಮತ್ತು ನೀಲ್​ ಮುಖರ್ಜಿಯವರ ಸ್ಟೇಟ್​ ಆಫ್​ ಫ್ರೀಡಂಗಳು ಕೂಡ ಈ ಪ್ರಶಸ್ತಿ ಆಯ್ಕೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.

1980-90ರ ದಶಕದಲ್ಲಿ ಮುಂಬೈ ಕುರಿತು ಜಯಂತ್​ ಕಾಯ್ಕಿಣಿ ಬರೆದ ಕಥಾ ಸಂಕಲನಗಳು ಕನ್ನಡದಲ್ಲಿ ಪ್ರಕಟವಾಗಿದ್ದವು. ಮುಂಬೈನಲ್ಲಿ ಎರಡು ದಶಕಗಳ ಕಾಲ ವಾಸವಾಗಿದ್ದ ಜಯಂತ್​ ಕಾಯ್ಕಿಣಿಯವರು ಅಲ್ಲಿನ ವಿಭಿನ್ನತೆ, ಅದರ ಉಪನಗರಗಳು, ನೆರೆಪ್ರದೇಶಗಳ ಬಗ್ಗೆ ಬರೆದ ಕತೆಗಳ ಗುಚ್ಛವನ್ನು ಇದು ಒಳಗೊಂಡಿದೆ.

ಜಯಂತ್ ಕಾಯ್ಕಿಣಿ ಅವರ ಈ ಸಾಧನೆಗೆ ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಸೇರಿದಂತೆ ಹಲವು ಮಂದಿ ಗಣ್ಯರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp